ಆ್ಯಪ್ನಗರ

ಹು-ಧಾ ಬಿಜೆಪಿ ಅಧ್ಯಕ್ಷರ ಅಚ್ಚರಿಯ ಆಯ್ಕೆ ಸಾಧ್ಯತೆ ?

​ಹುಬ್ಬಳ್ಳಿ : ಕಳೆದೆರಡು ತಿಂಗಳಿಂದ ಕುತೂಹಲ ಕೆರಳಿಸಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಘಟಕದ ಜಿಲ್ಲಾಧ್ಯಕ್ಷರ ಆಯ್ಕೆ ಸೋಮವಾರ ಬಹುತೇಕ ಪೂರ್ಣಗೊಳ್ಳಲಿದ್ದು, ಈ ಬಾರಿ ಅಚ್ಚರಿಯ ಹೆಸರು ಹೊರಬೀಳುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ.

Vijaya Karnataka 13 Jan 2020, 5:02 pm
ಕಾಶಪ್ಪ ಕರದಿನ
Vijaya Karnataka Web hu dha likely bjp presidents surprise choice
ಹು-ಧಾ ಬಿಜೆಪಿ ಅಧ್ಯಕ್ಷರ ಅಚ್ಚರಿಯ ಆಯ್ಕೆ ಸಾಧ್ಯತೆ ?

ಹುಬ್ಬಳ್ಳಿ : ಕಳೆದೆರಡು ತಿಂಗಳಿಂದ ಕುತೂಹಲ ಕೆರಳಿಸಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಘಟಕದ ಜಿಲ್ಲಾಧ್ಯಕ್ಷರ ಆಯ್ಕೆ ಸೋಮವಾರ ಬಹುತೇಕ ಪೂರ್ಣಗೊಳ್ಳಲಿದ್ದು, ಈ ಬಾರಿ ಅಚ್ಚರಿಯ ಹೆಸರು ಹೊರಬೀಳುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ.

ಜಿಲ್ಲಾಧ್ಯಕ್ಷ ಹುದ್ದೆಗೆ ಅರ್ಜಿ ಸಲ್ಲಿಸದ, ಅಪೇಕ್ಷೆಯನ್ನೂ ಹೊಂದಿರದ ವ್ಯಕ್ತಿಯೊಬ್ಬರ ಹೆಸರನ್ನು ಬಹುತೇಕ ಅಂತಿಮಗೊಳಿಸಿರುವ ರಾಜ್ಯದ ಮುಖಂಡರು, ನಗರದ ಖಾಸಗಿ ಹೋಟೆಲ್‌ದಲ್ಲಿಸೋಮವಾರ ಜರುಗುವ ಸಭೆಯಲ್ಲಿಪ್ರಕಟಿಸಲಿದ್ದಾರೆ. ತೀವ್ರ ವಿರೋಧ ಕಂಡುಬಂದಲ್ಲಿರಾಜ್ಯ ಹೈಕಮಾಂಡ್‌ ತರಿಸಿಕೊಂಡ ಉಳಿದ ಇಬ್ಬರ ಹೆಸರಲ್ಲಿಒಬ್ಬರನ್ನು ಆಯ್ಕೆ ಮಾಡಲಾಗುತ್ತದೆ ಎಂಬುದು ದಟ್ಟವಾಗಿದೆ ಎಂದು ಬಿಜೆಪಿಯ ವಿಶ್ವಸನೀಯ ಮೂಲಗಳು ತಿಳಿಸಿವೆ.

ಕಾರ್ಪೋರೇಟ್‌ರ ಆಗಿದ್ದ ನಾರಾಯಣ ಜರತಾರಘರ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ. ಇತ್ತೀಚೆಗೆ ನಗರದಲ್ಲಿನಡೆದ ಕೋರ್‌ ಕಮಿಟಿಯಲ್ಲಿನಿರ್ಣಯಿಸಿದ ಹೆಸರುಗಳ ಹೊರತಾಗಿ ಅಂದರೆ, ನಾರಾಯಣ ಜರತಾರಘರ, ದತ್ತಮೂರ್ತಿ ಕುಲಕರ್ಣಿ ಮತ್ತು ಸತೀಶ ಶೇಜವಾಡ್ಕರ್‌ ಹೆಸರನ್ನು ಹೈಕಮಾಂಡ್‌ ತರಿಸಿಕೊಂಡಿತ್ತು. ಈ ಮೂವರಲ್ಲಿಜರತಾರಘರ ಹೆಸರು ಬೆಂಗಳೂರಿನಲ್ಲಿಫೈನಲ್‌ ಮಾಡಿದ್ದು, ಹುಬ್ಬಳ್ಳಿಯಲ್ಲಿಪ್ರಕಟಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಹಾನಗರ ಘಟಕ ಜಿಲ್ಲಾಧ್ಯಕ್ಷ ಹುದ್ದೆಗೆ ಜರತಾರಘರ ಆಕಾಂಕ್ಷಿಯೂ ಆಗಿರಲಿಲ್ಲ. ಅಪೇಕ್ಷೆಯನ್ನೂ ಪಟ್ಟಿರಲಿಲ್ಲ. ಆದರೂ ಅವರ ಹೆಸರು ಮುಂಚೂಣಿಯಲ್ಲಿಬರಲು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ ಬಣದ ಕೈಚಳಕವೇ ಕಾರಣ ಎಂಬ ಮಾತುಗಳು ಕೇಳಿಬಂದಿವೆ.

ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಒಟ್ಟು 13 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರು. ಜಿಲ್ಲಾಮಟ್ಟದ ಕೋರ್‌ ಕಮಿಟಿಯಲ್ಲಿಅಂತಿಮವಾಗಿ ಮಲ್ಲಿಕಾರ್ಜುನ ಸಾವಕಾರ, ತಿಪ್ಪಣ್ಣ ಮಜ್ಜಗಿ, ಈರೇಶ ಅಂಚಟಗೇರಿ, ಸಂಜಯ ಕಪಟಕರ, ಸತೀಶ ಶೇಜವಾಡ್ಕರ್‌ ಹೆಸರು ಶಿಫಾರಸು ಮಾಡಿತ್ತು. ಇದರಲ್ಲಿಮಲ್ಲಿಕಾರ್ಜುನ ಸಾವಕರ ಇಲ್ಲವೇ ಈರೇಶ ಅಂಚಟಗೇರಿ ಅವರಲ್ಲಿಒಬ್ಬರನ್ನು ಆಯ್ಕೆ ಮಾಡಬಹುದು ಎಂದು ಕೋರ್‌ ಕಮಿಟಿ ಸ್ಪಷ್ಟ ಅಭಿಪ್ರಾಯ ತಿಳಿಸಿತ್ತು. ಆದರೆ, ಸಂತೋಷ ಬಣ ಈ ಹೆಸರುಗಳನ್ನು ಕೈ ಬಿಟ್ಟು, ನಾರಾಯಣ ಜರತಾರಘರ, ಸತೀಶ ಶೇಜವಾಡ್ಕರ್‌ ಮತ್ತು ದತ್ತಮೂರ್ತಿ ಕುಲಕರ್ಣಿ ಅವರ ಹೆಸರುಗಳನ್ನು ಕಳಿಸುವಂತೆ ನಿರ್ದೇಶನ ನೀಡಿತ್ತು. ಅನಿವಾರ್ಯವಾಗಿ ಕಮಿಟಿ ಈ ಮೂವರ ಹೆಸರು ಶಿಫಾರಸು ಮಾಡಿತ್ತು ಎಂದು ಮೂಲಗಳು ತಿಳಿಸಿವೆ.

ಗ್ರಾಮೀಣಕ್ಕೆ ಪಾಟೀಲ/ಕುಂದಗೋಳಮಠ
ಧಾರವಾಡ ಜಿಲ್ಲಾಗ್ರಾಮೀಣ ಘಟಕ ಅಧ್ಯಕ್ಷ ಸ್ಥಾನಕ್ಕೆ ಕುಂದಗೋಳದ ವೈ.ಎನ್‌. ಪಾಟೀಲ ಮತ್ತು ಈ ಹಿಂದೆ ಪ್ರಧಾನ ಕಾರ್ಯದರ್ಶಿಯಾಗಿದ್ದ ಬಸವರಾಜ ಕುಂದಗೋಳಮಠ ಅವರ ಹೆಸರು ಕೇಳಿಬರುತ್ತಿವೆ. ಈ ಇಬ್ಬರಲ್ಲಿಒಬ್ಬರನ್ನು ಆಯ್ಕೆ ಮಾಡುವ ಸಾಧ್ಯತೆಗಳೇ ಹೆಚ್ಚು. ಇದರ ಹೊರತಾಗಿಯೂ ಮತ್ತೊಬ್ಬರ ಹೆಸರು ಪ್ರಕಟಿಸಿದರೂ ಅಚ್ಚರಿ ಇಲ್ಲ.

ಮತ್ತೆ ಅದೇ ಸಮುದಾಯಕ್ಕೆ?
ಹಾಲಿ ಅಧ್ಯಕ್ಷ ನಾಗೇಶಸಾ ಕಲಬುರ್ಗಿ ಅವರು ಎಸ್‌ಎಸ್‌ಕೆ ಸಮುದಾಯಕ್ಕೆ ಸೇರಿದವರಾಗಿದ್ದು, ಇದೀಗ ನಾರಾಯಣ ಜರತಾರಘರ ಅವರನ್ನು ಜಿಲ್ಲಾಧ್ಯಕ್ಷ ನೇಮಕ ಮಾಡಿದಲ್ಲಿಮತ್ತೆ ಅದೇ ಸಮುದಾಯಕ್ಕೆ ಮಣೆ ಹಾಕಿದಂತಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಬಗ್ಗೆ ಚರ್ಚೆಗಳು ಶುರುವಾದಲ್ಲಿಪರಾರ‍ಯಯ ಆಯ್ಕೆ ಹೊರಹೊಮ್ಮುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ