ಆ್ಯಪ್ನಗರ

'ಬುರುಡೆ ಸಿದ್ದರಾಮಯ್ಯ ತೆಗೆದು ಹಾಕಲು ಕಾಂಗ್ರೆಸ್ ಮೀಟಿಂಗ್': ಸರ್ಕಾರ ಸುಭದ್ರ ಅಂದ್ರು ಅಶೋಕ್

ಸಿದ್ದರಾಮಯ್ಯ ತಾವಿದ್ದ ಪಕ್ಷಗಳನ್ನೆಲ್ಲಾ ಭಾಗ ಮಾಡಿಯೇ ಹೊರಹೋಗಿದ್ದಾರೆ ಎಂದು ಚಾಟಿ ಬೀಸಿದ ಅಶೋಕ್, ಸಿದ್ದರಾಮಯ್ಯ ನುಡಿದ ಭವಿಷ್ಯಗಳೆಲ್ಲ ಸುಳ್ಳಾಗುತ್ತೆ, ಅವರು ಬುರುಡೆ ಸಿದ್ದರಾಮಯ್ಯ ಎನ್ನುವುದು ಜಗಜ್ಜಾಹಿರಾಯಿತು ಎಂದು ಹೇಳಿದ್ದಾರೆ.

Vijaya Karnataka Web 10 Dec 2019, 4:23 pm
ಹುಬ್ಬಳ್ಳಿ: ಉಪ ಚುನಾವಣೆ ಗೆಲುವಿನ ಜೋಷ್‌ನಲ್ಲಿರುವ ಬಿಜೆಪಿ ನಾಯಕರು, ಕಾಂಗ್ರೆಸ್-ಜೆಡಿಎಸ್ ವಿರುದ್ಧ ಭರ್ಜರಿಯಾಗಿ ಹರಿಹಾಯುತ್ತಿದ್ದಾರೆ. ಮುಂದಿನ ಮೂರೂವರೆ ವರ್ಷಗಳ ಕಾಲ ಬಿಜೆಪಿ ಸರ್ಕಾರ ಕಲ್ಲು ಬಂಡೆಯಂತೆ ಗಟ್ಟಿಯಾಗಿರುತ್ತೆ ಎಂದು ಹೇಳಿರುವ ಸಚಿವ ಆರ್. ಅಶೋಕ್, ಮಾಜಿ ಸಿಎಂ ಸಿದ್ದರಾಮಯ್ಯ ಮತ್ತವರ ಜ್ಯೋತಿಷ್ಯಾಲಯ ಬಾಯಿ ಮುಚ್ಚಿಕೊಂಡು ಹೊರಟುಹೋಗಿದೆ ಎಂದು ಲೇವಡಿ ಮಾಡಿದ್ದಾರೆ.
Vijaya Karnataka Web ಬುರುಡೆ ಸಿದ್ದರಾಮಯ್ಯ ತೆಗೆದು ಹಾಕಲು ಕಾಂಗ್ರೆಸ್ ಮೀಟಿಂಗ್: ಸರ್ಕಾರ ಸುಭದ್ರ ಅಂದ್ರು ಅಶೋಕ್


'ಜಾತಿ ಒಡೆದ ಸಿದ್ದರಾಮಯ್ಯರಿಂದ ಕನಕದಾಸರಿಗೆ ಅವಮಾನ, ಈಗ ಫ್ರೀ ಹೌಸ್‌ ಅರೆಸ್ಟ್‌': ಸೊಗಡು ಶಿವಣ್ಣ

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನ ಒಂದು ಗುಂಪು ಸಿದ್ದರಾಮಯ್ಯರನ್ನು ತೆಗೆದುಹಾಕಲು ಮೀಟಿಂಗ್ ಮೇಲೆ ಮೀಟಿಂಗ್ ಮಾಡುತ್ತಿದೆ. ಆದ್ರೆ, ಸಿದ್ದರಾಮಯ್ಯ ವಿಪಕ್ಷ ನಾಯಕರಾಗಿ ಮುಂದುವರಿಯುವುದು ಒಳ್ಳೆಯದು. ಏಕೆಂದರೆ ಅವರಿದ್ದರೆ ಮಾತ್ರ ಕಾಂಗ್ರೆಸ್ ಪಕ್ಷ ಮೂರು ಭಾಗಗಳಾಗಿ ಒಡೆಯುತ್ತೆ ಎಂದು ಸಚಿವ ಆರ್. ಅಶೋಕ್ ಕುಟುಕಿದ್ದಾರೆ. ಸಿದ್ದರಾಮಯ್ಯ ತಾವಿದ್ದ ಪಕ್ಷಗಳನ್ನೆಲ್ಲಾ ಭಾಗ ಮಾಡಿಯೇ ಹೊರಹೋಗಿದ್ದಾರೆ ಎಂದು ಚಾಟಿ ಬೀಸಿದ ಅಶೋಕ್, ಸಿದ್ದರಾಮಯ್ಯ ನುಡಿದ ಭವಿಷ್ಯಗಳೆಲ್ಲ ಸುಳ್ಳಾಗುತ್ತೆ, ಅವರು ಬುರುಡೆ ಸಿದ್ದರಾಮಯ್ಯ ಎನ್ನುವುದು ಜಗಜ್ಜಾಹಿರಾಯಿತು ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ 'ಎಂಡ್ ಗೇಮ್'..! ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ 5 ಕಾರಣಗಳು

ರಾಜ್ಯದ ಜನ ಸುಭದ್ರ ಸರ್ಕಾರ ಇರಬೇಕೆಂದು ಮತ ಹಾಕಿದ್ದಾರೆ ಎಂದು ಅಭಿಪ್ರಾಯಪಟ್ಟ ಅಶೋಕ್, ಈ ಮೂಲಕ ಯಡಿಯೂರಪ್ಪ ನಾಯಕತ್ವ ಹಾಗೂ ಬಿಜೆಪಿಗೆ ದೊಡ್ಡ ಶಕ್ತಿ ಬಂದಿದೆ ಎಂದರು. ಗೆದ್ದವರಿಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇವೆ ಎಂದು ಹೇಳಿರುವ ಅಶೋಕ್, ಸೋತವರಿಗೆ ಏನು ಸ್ಥಾನಮಾನ ಕೊಡಬೇಕೆಂದು ಸಿಎಂ ಹಾಗೂ ಪಕ್ಷದ ವರಿಷ್ಠರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು. ಇದೇ ವೇಳೆ, ನಮ್ಮಲ್ಲಿ ಯಾವುದೇ ಗೊಂದಲವಿಲ್ಲ ಎಂದ ಅಶೋಕ್, ನಮ್ಮ ಸರ್ಕಾರ ಯಾರಿಂದ ಬಂತೆಂದು ನಮ್ಮೆಲ್ಲ ಶಾಸಕರಿಗೆ ಗೊತ್ತಿದೆ ಹೀಗಾಗಿ ಸಚಿವ ಸ್ಥಾನಕ್ಕೆ ಒತ್ತಡವಿಲ್ಲ ಎಂದು ಸ್ಪಷ್ಟಪಡಿಸಿದರು.

'ರಾಜಾಹುಲಿ' ಸರ್ಕಾರ ಸುಭದ್ರ! ನಡೆಯಲಿಲ್ಲ 'ಹುಲಿಯ'ನ ಆಟ! ಎಚ್ಡಿಕೆ ಕಣ್ಣೀರಿಗೆ 'ಶೂನ್ಯ ಸಂಪಾದನೆ'!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ