ಆ್ಯಪ್ನಗರ

ಹುಬ್ಬಳ್ಳಿ ಫ್ಲೈ ಓವರ್‌ ಗ್ರ್ಯಾಂಟ್‌ ಓಕೆ

ಹುಬ್ಬಳ್ಳಿ: ಮಹಾನಗರದ ಹೃದಯ ಭಾಗದಲ್ಲಿರುವ ರಾಣಿ ಚನ್ನಮ್ಮ ವೃತ್ತದಲ್ಲಿಫ್ಲೈ ಓವರ್‌ ಹೊಂದಬೇಕೆಂಬ ಹುಬ್ಬಳ್ಳಿ ಮಂದಿ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ. ಫ್ಲೈ ಓವರ್‌ ನಿರ್ಮಾಣಕ್ಕೆ 300 ಕೋಟಿ ರೂ. ವೆಚ್ಚದ ಮೊದಲ ಹಂತದ ಯೋಜನೆಗೆ ಕೇಂದ್ರ ಸರಕಾರ ಸೋಮವಾರ ಗ್ರೀನ್‌ ಸಿಗ್ನಲ್‌ ನೀಡಿದ್ದು, ಕಾಮಗಾರಿಗೆ ಶೀಘ್ರ ಚಾಲನೆ ದೊರೆಯಲಿದೆ.

Vijaya Karnataka 1 Sep 2020, 5:00 am
ಹುಬ್ಬಳ್ಳಿ: ಮಹಾನಗರದ ಹೃದಯ ಭಾಗದಲ್ಲಿರುವ ರಾಣಿ ಚನ್ನಮ್ಮ ವೃತ್ತದಲ್ಲಿಫ್ಲೈ ಓವರ್‌ ಹೊಂದಬೇಕೆಂಬ ಹುಬ್ಬಳ್ಳಿ ಮಂದಿ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ. ಫ್ಲೈ ಓವರ್‌ ನಿರ್ಮಾಣಕ್ಕೆ 300 ಕೋಟಿ ರೂ. ವೆಚ್ಚದ ಮೊದಲ ಹಂತದ ಯೋಜನೆಗೆ ಕೇಂದ್ರ ಸರಕಾರ ಸೋಮವಾರ ಗ್ರೀನ್‌ ಸಿಗ್ನಲ್‌ ನೀಡಿದ್ದು, ಕಾಮಗಾರಿಗೆ ಶೀಘ್ರ ಚಾಲನೆ ದೊರೆಯಲಿದೆ.
Vijaya Karnataka Web flyover-4


ಹೌದು!ಈ ಫ್ಲೈ ಓವರ್‌ ನಿರ್ಮಾಣಗೊಂಡರೆ, ಹುಬ್ಬಳ್ಳಿಯ ಬಹುತೇಕ ಟ್ರಾಫಿಕ್‌ ಸಮಸ್ಯೆಗೆ ಪರಿಹಾರ ಸಿಕ್ಕಂತಾಗುತ್ತದೆ. ಅಲ್ಲದೇ, ಈಗಿರುವ ಸಂಚಾರ ದಟ್ಟಣೆ ಶೇ. 50ರಷ್ಟು ತಗ್ಗಲಿದೆ ಎಂಬುದು ತಜ್ಞರ ಅಭಿಪ್ರಾಯ. ವಿಶೇಷವಾಗಿ ಅಪಘಾತಗಳ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಾಗಲಿದೆ. ಫ್ಲೈ ಓವರ್‌ ನೋಡಲು ಸುಂದರವಷ್ಟೇಅಲ್ಲ, ಇದರಿಂದ ಸುಗಮ ಸಂಚಾರ, ಸುರಕ್ಷತೆ ಹಾಗೂ ಸಮಯ ಉಳಿತಾಯಕ್ಕೆ ಹೆಚ್ಚಿನ ಆದ್ಯತೆ ದೊರೆಯಲಿದೆ. ಹೀಗಾಗಿ ಫ್ಲೈ ಓವರ್‌ ನಿರ್ಮಾಣ ಹುಬ್ಬಳ್ಳಿ ಮಂದಿಯ ಬಹು ಮಹಾತ್ವಾಕಾಂಕ್ಷೆಯ ಬೇಡಿಕೆಯಾಗಿತ್ತು.

ಸಂಸದರಿದ್ದಾಗಲೇ ಸಿದ್ಧತೆ
ಹುಬ್ಬಳ್ಳಿಯಲ್ಲಿಫ್ಲೈ ಓವರ್‌ ನಿರ್ಮಾಣ ಸಂಬಂಧ ಸಂಸದರಾಗಿದ್ದಾಗಲೇ ಹಾಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಿಶೇಷ ಮುತುವರ್ಜಿ ವಹಿಸಿದ್ದರು. ಅಲ್ಲದೇ, ಆಗಿನ ಕೇಂದ್ರ ಸಾರಿಗೆ ಸಚಿವ ನಿತೀನ್‌ ಗಡ್ಕರಿ ಅವರು ಹುಬ್ಬಳ್ಳಿಗೆ ಬಂದಾಗ ಯೋಜನೆಯ ವಿವರಣೆ ನೀಡಿ ಫ್ಲೈ ಓವರ್‌ ನಿರ್ಮಾಣದ ಅವಶ್ಯಕತೆ ಮನವರಿಕೆ ಮಾಡಿದ್ದರು. ಹೀಗಾಗಿ ಆ ಸಂದರ್ಭದಲ್ಲಿಯೇ ಡಿಪಿಆರ್‌ ಸಿದ್ಧಪಡಿಸಿ ಕೇಂದ್ರ ಸರಕಾರಕ್ಕೆ ಸಲ್ಲಿಸುವಂತೆ ಸಚಿವರಾಗಿದ್ದ ಗಡ್ಕರಿ ತಿಳಿಸಿದ್ದರು. ಅದರನ್ವಯ ಪ್ರಹ್ಲಾದ ಜೋಶಿ ಅವರು ರಾಜ್ಯ ಸರಕಾರದ ಸಂಯೋಜನೆಯೊಂದಿಗೆ ಡಿಪಿಆರ್‌ರನ್ನು ಸರಕಾರಕ್ಕೆ ಸಲ್ಲಿಕೆ ಸಹ ಮಾಡಿದ್ದರು.

ಆರಂಭಿಕ ಹಂತದಲ್ಲಿಮೂರು ಹಂತದ ಫ್ಲೈ ಓವರ್‌ ನಿರ್ಮಾಣಕ್ಕೆ 1242 ಕೋಟಿ ರೂ ವೆಚ್ಚದ ಡಿಪಿಆರ್‌ ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಲಾಗಿತ್ತು. ಆದರೆ, ದೊಡ್ಡ ಮೊತ್ತದ ಯೋಜನೆಯಾಗಿದ್ದರಿಂದ ಯೋಜನೆಯ ವೆಚ್ಚವನ್ನು ಕಡಿತಗೊಳಿಸುವಂತೆ ಜನಪ್ರತಿನಿಧಿಗಳಿಗೆ ಸಾರಿಗೆ ಸಚಿವ ಗಡ್ಕರಿ ಸೂಚನೆ ನೀಡಿದ್ದರು. ಅದರನ್ವಯ ಯೋಜನೆಯನ್ನು ಮೂರು ಹಂತದಲ್ಲಿವಿಂಗಡಿಸಿ ಮತ್ತೊಂದು ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿತ್ತು. ಈ ಯೋಜನೆ ಇದೀಗ ಕೇಂದ್ರ ಸರಕಾರ 300 ಕೋಟಿ ರೂ. ವೆಚ್ಚದ ಮೊದಲ ಹಂತದ ಯೋಜನೆ ಅಸ್ತು ನೀಡಿದೆ.
ಗಡ್ಕರಿ ಅವರನ್ನು ನೆನಸಬೇಕ್ರಿ
ಫ್ಲೈ ಓವರ್‌ ನಿರ್ಮಾಣದ ಬಗ್ಗೆ ಗಡ್ಕರಿ ಅವರ ಆಸಕ್ತಿ ಇಲ್ಲಿಸ್ಮರಿಸಿಕೊಳ್ಳಲೇಬೇಕು. ಕೇಂದ್ರದ ಸಾರಿಗೆ ಸಚಿವರಾಗಿದ್ದಾಗ ನಿತೀನ್‌ ಗಡ್ಕರಿ ಅವರನ್ನು ಹುಬ್ಬಳ್ಳಿ-ಧಾರವಾಡದ ಸ್ಥಳೀಯ ನಾಯಕರು ಭೇಟಿ ಆದಾಗಲೊಮ್ಮೆ 'ಹುಬ್ಬಳ್ಳಿ ಘೋಡೇ ಕೆ ಸರ್ಕಲ್‌ ಕಾ ಕ್ಯಾ ಹುವಾ...'ಎಂದು ಕೇಳುತ್ತಿದ್ದರು. ಇದು ಫ್ಲೈ ಓವರ್‌ ಯೋಜನೆಯ ಬಗ್ಗೆ ಅವರಿಗಿರುವ ಆಸಕ್ತಿಗೆ ಸಾಕ್ಷಿಯಾಗಿತ್ತು ಎಂಬುವುದನ್ನು ಸ್ಥಳೀಯ ಬಿಜೆಪಿ ನಾಯಕರು ಹಲವಾರು ಬಾರಿ ಸ್ಮರಿಸಿದ್ದಾರೆ.

ಹುಬ್ಬಳ್ಳಿ ಚನ್ನಮ್ಮ ವೃತ್ತದಲ್ಲಿ300 ಕೋಟಿ ರೂ. ವೆಚ್ಚದಲ್ಲಿಫ್ಲೈ ಓವರ್‌ ನಿರ್ಮಿಸಲು ಕೇಂದ್ರ ಸರಕಾರ ಆದೇಶ ಹೊರಡಿಸಿದೆ. ಇದರ ಅನುಷ್ಠಾನಕ್ಕಾಗಿ ಕಳೆದೆರಡು ವರ್ಷಗಳಿಂದ ನಿರಂತರ ಪ್ರಯತ್ನ ಮಾಡಲಾಗುತ್ತಿತ್ತು. ಈ ಯೋಜನೆ ಅನುಷ್ಠಾನ ಸಂಬಂಧ ರಾಜ್ಯ ಸರಕಾರದೊಂದಿಗೂ ನಿರಂತರ ಸಂಪರ್ಕ ಸಾಧಿಸಲಾಗಿತ್ತು. ಈ ಎಲ್ಲದರ ಪ್ರತಿಫಲವಾಗಿ ಫ್ಲೈ ಓವರ್‌ ನಿರ್ಮಾಣದ ಕನಸು ನನಸಾಗುವ ದಿನ ಬಂದಿದೆ.
- ಪ್ರಹ್ಲಾದ ಜೋಶಿ, ಕೇಂದ್ರ ಸಚಿವರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ