ಆ್ಯಪ್ನಗರ

27ರಿಂದ ಹುಬ್ಬಳ್ಳಿ ಎಪಿಎಂಸಿ ಬಂದ್‌ ಮಾಡಿ ಪ್ರತಿಭಟನೆ

ಹುಬ್ಬಳ್ಳಿ: ಎಪಿಎಂಸಿ ಸೆಸ್‌ ಸಂಪೂರ್ಣವಾಗಿ ಕೈ ಬಿಡುವಂತೆ ಒತ್ತಾಯಿಸಿ ಅಮರಗೋಳದ ಜಗಜ್ಯೋತಿ ಬಸವೇಶ್ವರ ಎಪಿಎಂಸಿಯಲ್ಲಿಜು. 27ರಿಂದ ಅನಿರ್ಧಿಷ್ಟಾವಧಿವರೆಗೆ ವ್ಯಾಪಾರ ಬಂದ ಮಾಡಿ ಪ್ರತಿಭಟನೆ ನಡೆಸಲು ವ್ಯಾಪಾರಸ್ಥರ ಸಂಘ ನಿರ್ಧರಿಸಿದೆ.

Vijaya Karnataka 23 Jul 2020, 5:00 am
ಹುಬ್ಬಳ್ಳಿ: ಎಪಿಎಂಸಿ ಸೆಸ್‌ ಸಂಪೂರ್ಣವಾಗಿ ಕೈ ಬಿಡುವಂತೆ ಒತ್ತಾಯಿಸಿ ಅಮರಗೋಳದ ಜಗಜ್ಯೋತಿ ಬಸವೇಶ್ವರ ಎಪಿಎಂಸಿಯಲ್ಲಿಜು. 27ರಿಂದ ಅನಿರ್ಧಿಷ್ಟಾವಧಿವರೆಗೆ ವ್ಯಾಪಾರ ಬಂದ ಮಾಡಿ ಪ್ರತಿಭಟನೆ ನಡೆಸಲು ವ್ಯಾಪಾರಸ್ಥರ ಸಂಘ ನಿರ್ಧರಿಸಿದೆ.
Vijaya Karnataka Web APMC1


ಕಳೆದ ಎರಡು ದಿನ ಈ ಕುರಿತಂತೆ ಎಪಿಎಂಸಿಯಲ್ಲಿವ್ಯಾಪಾರಸ್ಥರ ಸಂಘ ಸಭೆ ನಡೆಸಿದ್ದು, ಎಲ್ಲರೂ ಬೆಂಬಲ ವ್ಯಕ್ತಪಡಿಸಿದ್ದಾರೆ. ಎಪಿಎಂಸಿಯಲ್ಲಿರುವ ಹೋಲ್‌ಸೆಲ್‌ ವ್ಯಾಪಾರಸ್ಥರು ಕೂಡ ಎರಡು ದಿನಗಳ ವ್ಯಾಪಾರ ಬಂದ್‌ ಮಾಡಿ ಬೆಂಬಲಿಸುವುದಾಗಿ ಬುಧವಾರ ಎಪಿಎಂಸಿ ಸಹಾಯಕ ಕಾರ್ಯದರ್ಶಿ ಬಸವರಾಜ ನೇಸರ್ಗಿ ಅವರಿಗೆ ಮನವಿ ನೀಡಿದ್ದಾರೆ.

ಹುಬ್ಬಳ್ಳಿ ಎಪಿಎಂಸಿಯಲ್ಲಿಈರುಳ್ಳಿ, ಕಾಳುಕಡಿ ಪೇಟೆ ಏಜೆಂಟರು 200, ಖರೀದಿದಾರರು 360, ಒಣಮೆಣಸು, ಶೇಂಗಾ, ಹತ್ತಿಕಾಳು ಕಮೀಷನ್‌ ಏಜೆಂಟರು 200, ಆಲುಗಡ್ಡೆ, ಈರುಳ್ಳಿ ವ್ಯಪಾರಸ್ಥರು 90, ಆಹಾರಧಾನ್ಯ ಎಣ್ಣೆಕಾಳು ಹೋಲ್‌ಸೇಲ್‌ ವ್ಯಾಪಾರಸ್ಥರು 300, ಹಣ್ಣು ತರಕಾರಿ ಮಾರಾಟಗಾರರು 300 ಸೇರಿ ಒಟ್ಟೂ 1600ಕ್ಕೂ ಹೆಚ್ಚಿನ ವ್ಯಾಪಾರಸ್ಥರಿದ್ದಾರೆ.

ಎಪಿಎಂಸಿಯನ್ನು ಸಾವಿರಾರು ರೈತರು ನೆಚ್ಚಿಕೊಂಡಿದ್ದು, ಹೀಗೆ ಸಂಪೂರ್ಣ ವ್ಯಾಪಾರ ಬಂದ್‌ ಆದಲ್ಲಿದಿನಕ್ಕೆ ಸುಮಾರು 3ಕೋಟಿಗೂ ಹೆಚ್ಚಿನ ವಹಿವಾಟು ಸ್ಥಗಿತಗೊಳ್ಳಲಿದ್ದು, 1.50 ಕೋಟಿ ರು. ನಷ್ಟವಾಗಲಿದೆ. ಬೇಡಿಕೆ ಈಡೆರಿಸುವವರೆಗೂ ಬಂದ್‌ ಮುಂದುವರಿಸಲಿದ್ದೇವೆ ಎನ್ನುತ್ತಾರೆ ವ್ಯಾಪಾರಿಗಳು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ