ಆ್ಯಪ್ನಗರ

ಛಲವಿದ್ದರೆ ಜಯಗಳಿಸಲು ಸಾಧ್ಯ

ಧಾರವಾಡ : ಮನದಲ್ಲಿ ಮೊಳೆಯುವ ಆಸಕ್ತಿ ಅನುಸರಿಸಿ ಛಲ ಬಿಡದೇ ಅವಿರತವಾಗಿ ಶ್ರಮಿಸಿದರೇ ಮಾತ್ರ ಯಾವುದೇ ಸ್ಪರ್ಧೆಯಲ್ಲಿ ಜಯ ಗಳಿಸಲು ಸಾಧ್ಯ ಎಂದು ನಾದ ಝೇಂಕಾರ ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ಯಮನಪ್ಪ ಜಾಲಗಾರ ಹೇಳಿದರು.

Vijaya Karnataka 26 Mar 2019, 5:00 am
ಧಾರವಾಡ : ಮನದಲ್ಲಿ ಮೊಳೆಯುವ ಆಸಕ್ತಿ ಅನುಸರಿಸಿ ಛಲ ಬಿಡದೇ ಅವಿರತವಾಗಿ ಶ್ರಮಿಸಿದರೇ ಮಾತ್ರ ಯಾವುದೇ ಸ್ಪರ್ಧೆಯಲ್ಲಿ ಜಯ ಗಳಿಸಲು ಸಾಧ್ಯ ಎಂದು ನಾದ ಝೇಂಕಾರ ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ಯಮನಪ್ಪ ಜಾಲಗಾರ ಹೇಳಿದರು.
Vijaya Karnataka Web DRW-25mailar02
ಧಾರವಾಡದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾಮಟ್ಟದ ಯುವಜನ ಮೇಳ ಸ್ಪರ್ಧೆ ವಿಜೇತರು.


ನಗರದ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಂಯೋಗದಲ್ಲಿ ನಡೆದ ಜಿಲ್ಲಾಮಟ್ಟದ ಯುವಜನ ಮೇಳ ಸ್ಪರ್ಧೆಯಲ್ಲಿ ವಿಜೇತರಾಗಿ ಪ್ರಶಸ್ತಿ ಸ್ವೀಕರಿಸಿ ಇತ್ತೀಚೆಗೆ ಅವರು ಮಾತನಾಡಿದರು.

ಜಿಲ್ಲೆಯ ನಾದ ಝೇಂಕಾರ ಸಾಂಸ್ಕೃತಿಕ ಸಂಘದ ಸ್ಪರ್ಧೆಯಲ್ಲಿ ವಿಜೇತರಾದ ಯುವತಿಯರು: ಅನಿತಾ ಆರ್‌. ಅಪೂರ್ವ ಭಜಂತ್ರಿ, ಐಶ್ವರ್ಯ ಕಲಾಲ, ಪ್ರಿಯಂಕಾ ಭಜಂತ್ರಿ ಜಾನಪದ ಗೀತೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಭಾವಗೀತೆ ಸ್ಪರ್ಧೆಯಲ್ಲಿ ಅನಿತಾ ಆರ್‌. ಪ್ರಥಮ, ಸೋಬಾನ ಹಾಗೂ ಬೀಸು ಕಲ್ಲಿನ ಪದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.

ಯುವಕರ ಸ್ಪರ್ಧೆಯಲ್ಲಿ ಫಕೀರಪ್ಪ ಮಾದನಬಾವಿ ಏಕಪಾತ್ರ ಅಭಿನಯದಲ್ಲಿ ಪ್ರಥಮ, ಜಾನಪದಗೀತೆಯ ಸಮೂಹ ಸ್ಪರ್ಧೆಯಲ್ಲಿ ಯಮನಪ್ಪ ಜಾಲಗಾರ, ಫಕೀರಪ್ಪ ಮಾದನಬಾವಿ, ಪ್ರಮೋದ ಕೆಂಗೇರಿ, ಶ್ರೀಧರ ಭಜಂತ್ರಿ, ಲೋಹಿತ್‌, ಭರತ ಪಾಟೀಲ ದ್ವಿತೀಯ ಸ್ಥಾನ ಪಡೆದುಕೊಂಡು ಉತ್ತಮ ಸಾಧನೆ ಮಾಡಿದ್ದಾರೆ.

ನಾದ ಝೇಂಕಾರ ಸಾಂಸ್ಕೃತಿಕ ಸಂಘದ ಯುವ ಸದಸ್ಯರು ಕಲಬುರಗಿಯಲ್ಲಿ ನಡೆಯಲಿರುವ ರಾಜ್ಯಮಟ್ಟದ ಯುವಜನಮೇಳಕ್ಕೆ ಆಯ್ಕೆಯಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ