ಆ್ಯಪ್ನಗರ

ಅಜ್ಞಾನ, ಅಸ್ಪೃಶ್ಯತೆ ನಿವಾರಣೆಗೆ ವಚನ ಸಹಕಾರಿ

ಧಾರವಾಡ : ಸಮಾಜದಲ್ಲಿ ತಾಂಡವಾಡುತ್ತಿದ್ದ ಅಜ್ಞಾನ ಮತ್ತು ಅಸ್ಪೃಶ್ಯತೆ ತೊಡೆದು ಹಾಕಿ ಎಲ್ಲೆಡೆ ಸಮಾನತೆ ನೆಲೆಸುವಂತಾಗಲು ಬಸವಾದಿ ಶರಣರ ವಚನಗಳು ಸಹಕಾರಿಯಾಗಿವೆæ ಎಂದು ಬಾಲವಿಕಾಸ ಅಕಾಡೆಮಿ ಅಧ್ಯಕ್ಷೆ ದಾಕ್ಷಾಯಿಣಿ ಬಸವರಾಜ ಹೇಳಿದರು.

ವಿಕ ಸುದ್ದಿಲೋಕ 24 Apr 2016, 4:00 am

ಧಾರವಾಡ : ಸಮಾಜದಲ್ಲಿ ತಾಂಡವಾಡುತ್ತಿದ್ದ ಅಜ್ಞಾನ ಮತ್ತು ಅಸ್ಪೃಶ್ಯತೆ ತೊಡೆದು ಹಾಕಿ ಎಲ್ಲೆಡೆ ಸಮಾನತೆ ನೆಲೆಸುವಂತಾಗಲು ಬಸವಾದಿ ಶರಣರ ವಚನಗಳು ಸಹಕಾರಿಯಾಗಿವೆæ ಎಂದು ಬಾಲವಿಕಾಸ ಅಕಾಡೆಮಿ ಅಧ್ಯಕ್ಷೆ ದಾಕ್ಷಾಯಿಣಿ ಬಸವರಾಜ ಹೇಳಿದರು.

ನಗರದ ವಿದ್ಯಾವರ್ಧಕ ಸಂಘದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಶನಿವಾರ ನಡೆದ ದಲಿತ ವಚನಕಾರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬರು ಶರಣರ ವಚನಗಳನ್ನು ಓದುವ ಮೂಲಕ ಅವುಗಳ ಸಂದೇಶವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಉತ್ತಮ ಸಮಾಜ ನಿರ್ಮಾಣಕ್ಕೆ ಶರಣರ ವಚನಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದರು.

ವಚನ ಸಾಹಿತ್ಯದಲ್ಲಿ ದಲಿತ ವಚನಕಾರರ ಕೊಡುಗೆ ಅಪಾರವಾಗಿದೆ. ಬಸವಾದಿ ಶರಣರು ಗುಡಿ, ಗುಂಡಾರಗಳಲ್ಲಿ ದೇವರ ಕಾಣಲಿಲ್ಲ. ಬದಲಾಗಿ ತಾವು ಮಾಡುವ ಕಾಯಕದಲ್ಲಿ ದೇವರನ್ನು ಕಂಡಿದ್ದಾರೆ. ತಮ್ಮ ಅನುಭವದಿಂದ ರಚಿಸಿದ ವಚನಗಳೇ ಇಂದು ಸಮಾಜಕ್ಕೆ ಸ್ಫೂರ್ತಿಯ ಸೆಲೆಯಾಗಿವೆ ಎಂದು ಅಭಿಪ್ರಾಯ ಪಟ್ಟರು.

ಕುವೆಂಪು ವಿವಿಯ ಪ್ರಾಧ್ಯಾಪಕ ಡಾ. ಶಿವಾನಂದ ಕೆಳಗಿನಮನಿ ಮಾತನಾಡಿ, ಮಾನವ ಶೈಕ್ಷಣಿಕ, ಸಾಮಾಜಿಕ ಹಾಗೂ ಬೌದ್ಧಿಕವಾಗಿ ಎಷ್ಟೇ ಅಭಿವೃದ್ಧಿ ಹೊಂದಿದ್ದರೂ ಸಹ, ಜಾತಿ ಎಂಬ ಪಿಡುಗಿನಿಂದ ದೂರವಾಗದೇ ಇರುವುದು ದುರಂತದ ಸಂಗತಿಯಾಗಿದೆ ಎಂದರು.

ಆಧುನಿಕ ಜಗತ್ತಿನ ಸಮಾಜದಲ್ಲಿ ಇನ್ನೂ ಜಾತಿಯತೆ ಎಲ್ಲೆಡೆ ತಾಂಡವಾಡುತ್ತಿದೆ. ಅದರಿಂದ ಕೆಳ ಜಾತಿಯವರು ಸಮಾಜದಲ್ಲಿ ತಮ್ಮ ಜಾತಿಯ ಮೂಲಕ ಗುರುತಿಸಿಕೊಳ್ಳಲು ಹಿಂಜರಿಯುವಂತಾಗಿದೆ. ಅನೇಕ ಬಾರಿ ಕೆಳ ಜಾತಿಯ ಜನಾಂಗದವರು ಅವಮಾನ, ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ. ಸಮಾಜದಲ್ಲಿ ಸಮಾನತೆ ಹಾಗೂ ಸಹೋದರತೆ ತರುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಶ್ರಮಿಸಬೇಕು ಎಂದು ತಿಳಿಸಿದರು.

ಶರಣ ಹರಳಯ್ಯ ಪತ್ರಿಕೆ ಸಂಪಾದಕ ಮಾರ್ಕಂಡೇಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿದೇರ್ಶಕ ಬಸವರಾಜ ಹೂಗಾರ, ಸಮಾಜದ ಮುಖಂಡ ರವಿ ಸಾಂಬ್ರಾಣಿ, ಸುನೀಲ ಹೊಂಗಲ, ರಮೇಶ ಶಿರಹಟ್ಟಿ, ರಮೇಶ ಎಸ್‌.ದೊಡವಾಡ, ಸುಭಾಸ ಗಾಮನಗಟ್ಟಿ, ಉದಯ ಚಿಟ್ಟಗುಬ್ಬಿ, ಕೆ.ಎಂ.ಪರೇವಾಡಿ, ಬಾಲಕೃಷ್ಣ ಪೋಳ, ಯಲ್ಲಪ್ಪ ಸುವಣೂರ ಸೇರಿದಂತೆ ಮತ್ತಿತರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ