ಆ್ಯಪ್ನಗರ

ಗದಗ ಜಿಲ್ಲೆಯಲ್ಲಿ 2,13,941 ಹೆಕ್ಟೇರ್‌ ಪ್ರದೇಶ ಬೆಳೆ ನಷ್ಟ, 1,500 ಕೋಟಿ ರೂ. ಹಾನಿ

ರಾಜ್ಯದಲ್ಲಿ ಮಳೆಯ ಅಭಾವದಿಂದಾಗಿ ಒಟ್ಟು 195 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಕರ್ನಾಟಕ ಸರ್ಕಾರ ಹೆಸರಿಸಿದೆ. ಕೇಂದ್ರ ಸರ್ಕಾರಕ್ಕೆ ಬರ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಲು ಅಂದಾಜು 6000 ಕೋಟಿ ರೂ.ಗಳನ್ನು ನೀಡಬೇಕೆಂದು ಮನವಿ ಸಲ್ಲಿಸಿದೆ. ಆ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರದಿಂದ ತಜ್ಞರ ತಂಡವೊಂದು ಬರಪೀಡಿತ ಜಿಲ್ಲೆಗಳಲ್ಲಿ ಅಧ್ಯಯನ ಕೈಗೊಂಡಿದೆ. ಗದಗ ಜಿಲ್ಲೆಯಲ್ಲಿ ಅ. 5ರಂದು ಈ ಕುರಿತಂತೆ ಅಧ್ಯಯನ ನಡೆದಿದ್ದು, 2,13,941 ಹೆಕ್ಟೇರ್‌ ಬೆಳೆ ಹಾನಿ ಹಾಗೂ ಅದರಿಂದ 1,500 ಕೋಟಿ ರೂ. ನಷ್ಟವಾಗಿರುವುದು ಸ್ಪಷ್ಟವಾಗಿದೆ.

Edited byಚೇತನ್ ಓ.ಆರ್. | Vijaya Karnataka Web 6 Oct 2023, 9:18 am

ಹೈಲೈಟ್ಸ್‌:

  • ಕೇಂದ್ರದಿಂದ ರಾಜ್ಯಕ್ಕೆ ಆಗಮಿಸಿರುವ ಬರಪೀಡಿತ ಪ್ರಾಂತ್ಯಗಳ ಅಧ್ಯಯನ ತಂಡ.
  • ಗದಗ ಜಿಲ್ಲೆಯಲ್ಲಿ 94ರಷ್ಟು ಬೆಳೆ ಸಮೀಕ್ಷೆ; ಅಂದಾಜು 1500 ಕೋಟಿ ರೂ.ಹಾನಿ.
  • ಇಂದು ಕೇಂದ್ರ ಬರ ಅಧ್ಯಯನ ತಂಡದಿಂದ ಜಿಲ್ಲೆಯಲ್ಲಿ ಬೆಳೆಹಾನಿ ಪರಿಶೀಲನೆ.


ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web In Gadag district crop failure in 2.13 hectare and Rs 1,500 crore loss estimated
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕು ವ್ಯಾಪ್ತಿಯಲ್ಲಿ ಬರ ಅಧ್ಯಯನ ತಂಡ ಪರಿಶೀಲನೆ ನಡೆಸುವ ಸ್ಥಳಕ್ಕೆ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್‌. ಭೇಟಿ ನೀಡಿದರು.
ಗದಗ: ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿರಾಜ್ಯ ಸರಕಾರ ಬರ ಘೋಷಣೆ ಮಾಡಿದ ನಂತರ ನಡೆದ ಸಮೀಕ್ಷೆಯಲ್ಲಿ ಜಿಲ್ಲೆಯ 2,13,941 ಹೆಕ್ಟೇರ್‌ ಬೆಳೆಹಾನಿ ಸಂಭವಿಸಿರುವುದು ಸ್ಪಷ್ಟವಾಗಿದೆ. ರಾಜ್ಯದ 191 ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿಗದಗ ಜಿಲ್ಲೆಯ ಆರು ತಾಲೂಕುಗಳು ಒಳಗೊಂಡಿವೆ. ಬರಪೀಡಿತ ತಾಲೂಕುಗಳ ಪಟ್ಟಿ ಬಿಡುಗಡೆ ನಂತರ ಹಾನಿಯ ಸಮೀಕ್ಷೆ ಕೈಗೊಳ್ಳಲಾಗಿತ್ತು. ಅಂದಾಜು ಶೇ. 94ರಷ್ಟು ಬೆಳೆ ಸಮೀಕ್ಷೆ ಪೂರ್ಣಗೊಂಡಿದ್ದು, ಆ ವರದಿ ಆಧಾರದ ಮೇಲೆ ಜಿಲ್ಲೆಯ 2.13 ಲಕ್ಷ ಹೆಕ್ಟೇರ್‌ ಬೆಳೆಹಾನಿ ಅಂದಾಜಿಸಲಾಗಿದೆ.

1500 ಕೋಟಿ ರೂ. ಹಾನಿ

ಮಳೆ ಕೊರತೆಯಿಂದಾಗಿ ಜಿಲ್ಲೆಯಲ್ಲಿ2,13,941 ಹೆಕ್ಟೇರ್‌ ಪ್ರದೇಶ ಹಾನಿಯಾಗಿದೆ. 1,38,898 ರೈತರಿಗೆ ತೊಂದರೆ ಆಗಿದೆ. ಜಿಲ್ಲೆಯಲ್ಲಿ1,515.25 ಕೋಟಿ ರೂ. ನೈಜ ಹಾನಿಯಾಗಿದೆ. ನೈಜ ಹಾನಿ ಹೊರತುಪಡಿಸಿ ಮಳೆ ಕೊರತೆಯಿಂದ ಜಿಲ್ಲೆಯಲ್ಲಿಒಟ್ಟು 215.53 ಕೋಟಿ ರೂ. ನಷ್ಟವಾಗಿದೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ.


ಕೈಕೊಟ್ಟ ಹೆಸರು

ಗದಗ ಹೆಸರು ಬೆಳೆಯುವ ಪ್ರಮುಖ ಜಿಲ್ಲೆಗಳಲ್ಲಿಒಂದಾಗಿದೆ. ಆದರೆ, ಈ ಬಾರಿ ಮುಂಗಾರು ಕೈಕೊಟ್ಟ ಕಾರಣ ಹೆಸರು ಬೆಳೆ ಸಂಪೂರ್ಣ ಕೈಕೊಟ್ಟಿದೆ. ಅದೇ ರೀತಿ ಮೆಕ್ಕೆಜೋಳ ಬಿತ್ತನೆಯಾದರೂ ಇಳುವರಿ ಇಲ್ಲವಾಗಿದೆ. ಶೇಂಗಾ, ಸೂರ್ಯಕಾಂತಿ, ಮೆಣಸಿನಕಾಯಿ ಮತ್ತು ಈರುಳ್ಳಿ ಬೆಳೆಗೆ ನೀರಿನ ಕೊರತೆ ಎದುರಾಗಿದೆ. ಮಳೆ ಅಭಾವ ಹಿನ್ನೆಲೆ ಹೆಸರು ಬೆಳೆ ಶೇ.79ರಷ್ಟು ಬಿತ್ತನೆ ನಡೆದಿಲ್ಲ. ಜೋಳ ಶೇ.61, ಅವರೆ ಶೇ. 60 ರಷ್ಟು , ಹುರಳಿ ಶೇ. 45, ಉದ್ದು ಶೇ.86, ಶೇಂಗಾ ಶೇ. 45 ರಷ್ಟು, ಸೋಯಾಬೀನ್‌ ಶೇ. 58 ರಷ್ಟು, ಹತ್ತಿ ಶೇ.75 ರಷ್ಟು ಬಿತ್ತನೆಯೇ ಜರುಗಿಲ್ಲ.

ಗದಗ: ಮಳೆ ಕೊರತೆ; ರೈತರಿಗೆ ಬೆಳೆಗಳು ಕೈ ತಪ್ಪುವ ಆತಂಕ, ಸಂಕಷ್ಟದ ಭೀತಿ

ಇಂದು ಬರ ಅಧ್ಯಯನ ತಂಡ

ರಾಜ್ಯದ ಬೆಳೆಹಾನಿಗೆ ಕೇಂದ್ರ ತಂಡ ಆಗಮಿಸಲಿದ್ದು, ಅ. 6ರಂದು ಗದಗ ಜಿಲ್ಲೆಯಲ್ಲಿಪ್ರವಾಸ ಕೈಗೊಳ್ಳಲಿದೆ. ಅ. 6ರಂದು ಬೆಳಗ್ಗೆ 8 ಗಂಟೆಗೆ ಲಕ್ಷ್ಮೇಶ್ವರ ತಾಲೂಕಿನ ಗೋಜನೂರ ಗ್ರಾಮದಿಂದ ಸಮೀಕ್ಷೆ ಆರಂಭಿಸಿ, ಲಕ್ಷ್ಮೇಶ್ವರ, ದೊಡ್ಡೂರು, ಸೂರಣಗಿ, ಚಿಕ್ಕಸವಣೂರ, ಬೆಳ್ಳಟ್ಟಿ, ವಡವಿ, ದೇವಿಹಾಳ, ಛಬ್ಬಿ, ಶೆಟ್ಟಿಕೆರೆ ಕ್ರಾಸ್‌, ಮುಳಗುಂದ ಗ್ರಾಮದ ವ್ಯಾಪ್ತಿಯಲ್ಲಿಪರಿಶೀಲನೆ ನಡೆಸಲಿದೆ.
ಲೇಖಕರ ಬಗ್ಗೆ
ಚೇತನ್ ಓ.ಆರ್.
ಪ್ರಸ್ತುತ, ವಿಜಯ ಕರ್ನಾಟಕ ವೆಬ್ ನಲ್ಲಿ ಪತ್ರಕರ್ತನಾಗಿ 2022ರಿಂದ ಪತ್ರಕರ್ತನಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2007ರಲ್ಲಿ ತುಮಕೂರು ವಿವಿಯಿಂದ ಪತ್ರಿಕೋದ್ಯಮದಲ್ಲಿ 5ನೇ ರ‍್ಯಾಂಕ್ ನೊಂದಿಗೆ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಮೈಸೂರು ವಿವಿಯಿಂದ ಪತ್ರಿಕೋದ್ಯಮದಲ್ಲಿ ಪಿಎಚ್ ಡಿ ಪದವಿ ಪಡೆದಿದ್ದಾರೆ. ಜಿಲ್ಲಾ ಸುದ್ದಿಗಳಿಂದ ಹಿಡಿದು ಕ್ರೀಡೆ, ದೇಶ- ವಿದೇಶ, ಸಿನಿಮಾ, ವಿಜ್ಞಾನ- ತಂತ್ರಜ್ಞಾನ ಇತ್ಯಾದಿ ವೈವಿಧ್ಯಯಮ ವಿಷಯಗಳ ಬಗ್ಗೆ ಬರೆಯುವ ಇವರಿಗೆ, ನಾನಾ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಈವರೆಗೆ 16 ವರ್ಷ ಕೆಲಸ ಮಾಡಿದ ಅನುಭವವಿದೆ. ಫೋಟೋಗ್ರಫಿ ಇವರ ಅಚ್ಚುಮೆಚ್ಚಿನ ಹವ್ಯಾಸ. ಸಿನಿಮಾ, ಸಾಕ್ಷ್ಯಚಿತ್ರ, ಸಾಹಿತ್ಯ, ವಿಡಿಯೋ ಸಂಕಲನ, ಪತ್ರಿಕೆ ಪುಟ ವಿನ್ಯಾಸ, ಹಾಡುಗಾರಿಕೆ, ಚಿತ್ರಕಲೆ, ಅನಿಮೇಶನ್, ಸಂಗೀತದಲ್ಲಿಯೂ ಆಸಕ್ತಿಯಿದೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ