ಆ್ಯಪ್ನಗರ

ಸರಕಾರಿ ಯೋಜನೆಗಳ ಪ್ರದರ್ಶನ ಉದ್ಘಾಟನೆ

ಧಾರವಾಡ : ಮುರಘಾಮಠದ ಜಾತ್ರಾಮಹೋತ್ಸವದ ಅಂಗವಾಗಿ ಸರಕಾರಿ ಯೋಜನೆಗಳ ಪ್ರದರ್ಶನ ಮತ್ತು ಮಾಹಿತಿಗಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಮುರುಘಾಮಠದ ಆವರಣದಲ್ಲಿ ಆರಂಭಿಸಿರುವ ಮಳಿಗೆಯನ್ನು ಮಾಜಿ ಸಚಿವ ಹಾಗೂ ಶ್ರೀ ಜಗದ್ಗುರು ಮುರಘರಾಜೇಂದ್ರ ಉಚಿತ ಪ್ರಸಾದ ನಿಲಯ ಟ್ರಸ್ಟ್‌ ಕಾರ್ಯಾಧ್ಯಕ್ಷ ವಿನಯ ಕುಲಕರ್ಣಿ ಶುಕ್ರವಾರ ಉದ್ಘಾಟಿಸದರು.

Vijaya Karnataka 10 Feb 2019, 5:00 am
ಧಾರವಾಡ : ಮುರಘಾಮಠದ ಜಾತ್ರಾಮಹೋತ್ಸವದ ಅಂಗವಾಗಿ ಸರಕಾರಿ ಯೋಜನೆಗಳ ಪ್ರದರ್ಶನ ಮತ್ತು ಮಾಹಿತಿಗಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಮುರುಘಾಮಠದ ಆವರಣದಲ್ಲಿ ಆರಂಭಿಸಿರುವ ಮಳಿಗೆಯನ್ನು ಮಾಜಿ ಸಚಿವ ಹಾಗೂ ಶ್ರೀ ಜಗದ್ಗುರು ಮುರಘರಾಜೇಂದ್ರ ಉಚಿತ ಪ್ರಸಾದ ನಿಲಯ ಟ್ರಸ್ಟ್‌ ಕಾರ್ಯಾಧ್ಯಕ್ಷ ವಿನಯ ಕುಲಕರ್ಣಿ ಶುಕ್ರವಾರ ಉದ್ಘಾಟಿಸದರು.
Vijaya Karnataka Web inauguration of government plans
ಸರಕಾರಿ ಯೋಜನೆಗಳ ಪ್ರದರ್ಶನ ಉದ್ಘಾಟನೆ

ಈ ವೇಳೆ ಮಾತನಾಡಿದ ಅವರು ಸರಕಾರದ ಯೋಜನೆಗಳನ್ನು ಜಾತ್ರೆ, ಉತ್ಸವ ,ರಾಷ್ಟ್ರೀಯ ಹಬ್ಬಗಳ ಆಚರಣೆ ಸಂದರ್ಭದಲ್ಲಿ ಪ್ರದರ್ಶಿಸುವದರಿಂದ ಸಾರ್ವಜನಿಕರಿಗೆ ಹೆಚ್ಚು ಉಪಯುಕ್ತವಾಗುತ್ತದೆ. ಜಾತ್ರೆಗಳಿಗಳಿಗೆ ಗ್ರಾಮೀಣ ಭಾಗದ ಜನರು ಹೆಚ್ಚಾಗಿ ಬರುವುದರಿಂದ ಅರ್ಹ ಫಲಾನುಭವಿಗಳಿಗೆ ಸರಕಾರಿ ಯೋಜನೆಗಳ ಸೌಲತ್ತು, ಸೌಲಭ್ಯ ಮತ್ತು ಮಾಹಿತಿ ಸುಲಭವಾಗಿ ತಲುಪುತ್ತವೆ. ಈ ಮೂಲಕ ವಾರ್ತಾ ಇಲಾಖೆ ಸರಕಾರದ ಯೋಜನೆಗಳ ಪ್ರಚಾರ ರಾಯಭಾರಿಯಾಗಿ ಕೆಲಸ ಮಾಡುತ್ತಿದೆ ಎಂದರು.

ಈ ಸಂದರ್ಭದಲ್ಲಿ ಟ್ರಸ್ಟ್‌ ಉಪಾಧ್ಯಕ್ಷ ನಾಗರಾಜ ಪಟ್ಟಣಶಟ್ಟಿ, ಕಾರ್ಯದರ್ಶಿ ಡಿ.ಬಿ.ಲಕಮನಹಳ್ಳಿ, ಶರಣಪ್ಪ ಕೊಟಬಾಗಿ, ಮೋಹನ ಹೊಸಮನಿ, ಶಿವಶಂಕರ ಹಂಪಣ್ಣವರ, ಸಿದ್ದು ತೇಜಿ, ಶೇಖರ ಕವಳಿ, ನಂದೇಶ್ವರ ನಾಯಕ, ಮಂಜುನಾಥ ಕಟ್ಟಿ ಸೇರಿದಂತೆ ಇತರರು ಭಾಗವಹಿಸಿದ್ದರು.

ವಾರ್ತಾ ಸಹಾಯಕ ಅಧಿಕಾರಿ ಡಾ.ಎಸ್‌.ಎಮ್‌.ಹಿರೇಮಠ ಸ್ವಾಗತಿಸಿ, ಮಾಹಿತಿ ಮಳಿಗೆಯ ವಿವರಣೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ