ಆ್ಯಪ್ನಗರ

ಸಿದ್ದಸಿರಿ ಸೊಸೈಟಿ ವಲಯ ಕಚೇರಿ ಉದ್ಘಾಟನೆ

ಹುಬ್ಬಳ್ಳಿ : ಎರಡು, ಮೂರು, ಐದು ಪರ್ಸೆಂಟ್‌ ಬಡ್ಡಿಯಲ್ಲಿಸಾಲ ಪಡೆದು ಜನ ತೀರಿಸಲಾಗದೆ ಸಾಕಷ್ಟು ಸಂಕಷ್ಟ ಅನುಭವಿಸುತ್ತಿದ್ದಾರೆ. ಬಡವರಿಂದ ಇಷ್ಟೊಂದು ಬಡ್ಡಿ ತಿಂದು ಶ್ರೀಮಂತರಾದವರು ಸರ್ವನಾಶವಾಗುತ್ತಾರೆ ಎಂದು ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.

Vijaya Karnataka 15 Nov 2019, 5:28 pm
ಹುಬ್ಬಳ್ಳಿ : ಎರಡು, ಮೂರು, ಐದು ಪರ್ಸೆಂಟ್‌ ಬಡ್ಡಿಯಲ್ಲಿಸಾಲ ಪಡೆದು ಜನ ತೀರಿಸಲಾಗದೆ ಸಾಕಷ್ಟು ಸಂಕಷ್ಟ ಅನುಭವಿಸುತ್ತಿದ್ದಾರೆ. ಬಡವರಿಂದ ಇಷ್ಟೊಂದು ಬಡ್ಡಿ ತಿಂದು ಶ್ರೀಮಂತರಾದವರು ಸರ್ವನಾಶವಾಗುತ್ತಾರೆ ಎಂದು ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.
Vijaya Karnataka Web inauguration of siddhasiri society zone office
ಸಿದ್ದಸಿರಿ ಸೊಸೈಟಿ ವಲಯ ಕಚೇರಿ ಉದ್ಘಾಟನೆ


ನಗರದಲ್ಲಿವಿಜಯಪುರದ ಸಿದ್ದಸಿರಿ ಸಹಾರ್ದ ಸಹಕಾರಿಯ ವಲಯ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಸಿದ್ದಸಿರಿ ಸಂಸ್ಥೆ ಇಂತಹ ಸಂದರ್ಭದಲ್ಲಿಕಡಿಮೆ ಬಡ್ಡಿ ದರದಲ್ಲಿಸಾಲ ನೀಡುವುದು, ರೈತರಿಗೆ ನೆರವಾಗುವ ಕಾರ್ಯಕ್ರಮಗಳ ಮೂಲಕ ಜನಾನುರಾಗಿಯಾಗಿದೆ ಎಂದು ಬಣ್ಣಿಸಿದರು.

ಇತ್ತೀಚಿನ ವರ್ಷಗಳಲ್ಲಿಸಹಕಾರಿ ಕ್ಷೇತ್ರ ಸಾಕಷ್ಟು ಹಿನ್ನಡೆ ಅನುಭವಿಸುತ್ತಿದೆ. ಮೊದಲು ಜನ ಪ್ರಾಮಾಣಿಕರಾಗಿದ್ದರಿಂದ ಸಹಕಾರಿ ಸಂಸ್ಥೆಗಳು ಸಾಕಷ್ಟು ಬೆಳವಣಿಗೆ ಕಂಡಿದ್ದವು. ಆದರೆ ಇಂದು ಅಪ್ರಾಮಾಣಿಕರೇ ಹೆಚ್ಚಿದ್ದರಿಂದ ಬ್ಯಾಂಕ್‌, ಸಹಕಾರಿ ಸಂಸ್ಥೆಗಳು ನಷ್ಟ ಹೊಂದುತ್ತಿವೆ. ಇಂತಹ ಸಂದರ್ಭದಲ್ಲಿಸಿದ್ದಸಿರಿ ಸಂಸ್ಥೆ ಬೆಳವಣಿಗೆ ಹೊಂದುತ್ತಿರುವುದು ಅದ್ಬುತ ಸಾಧನೆಯಾಗಿದೆ ಎಂದು ಪ್ರಶಂಸಿಸಿದರು.

ಸಂಸ್ಥೆಯ ಅಧ್ಯಕ್ಷ, ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಸಂಸ್ಥೆ ರೈತರ ಅನುಕೂಲಕ್ಕಾಗಿ ವಿಜಯಪುರದಲ್ಲಿ'ಸಿದ್ಧಸಿರಿ ಕೋಲ್ಡ್‌ ಸ್ಟೋರೇಜ್‌ ಘಟಕ' ನಿರ್ಮಾಣ ಆರಂಭಿಸಿದ್ದು, ಶೀಘ್ರ ಕಾಮಗಾರಿ ಮುಕ್ತಾಯವಾಗಲಿದೆ ಎಂದು ತಿಳಿಸಿದರು.

ಮಾಜಿ ಶಾಸಕ ಅಶೋಕ ಕಾಟವೆ, ಲಿಂಗರಾಜ ಪಾಟೀಲ, ಹನುಮಾನ ಕರವೇ, ಪ್ರಭು ಶೆಟ್ಟರ, ಜಗದೀಶ ಕ್ಷತ್ರಿ, ಉಮೇಶ ಕೋರೆ, ನಾಡಗೌಡ, ಸಾಯಿಬಾಬಾ ಸಿಂದಗೇರಿ, ಶಿವಾನಂದ ಅಣ್ಣಪ್ಪನವರ, ಪ್ರಭುಗೌಡ ದೇಸಾಯಿ, ವಿಜಯಕುಮಾರ ಚವ್ಹಾಣ, ಸೋಮಶೇಖರ ಬಂಡಿ ಹಾಗೂ ಬ್ಯಾಂಕ್‌ನ ಸಿಬ್ಬಂದಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ