ಆ್ಯಪ್ನಗರ

ವಿದ್ಯಾವಂತರಿಂದಲೇ ದೌರ್ಜನ್ಯ ಹೆಚ್ಚಳ

ಧಾರವಾಡ: ಶಿಕ್ಷಣ ಪಡೆದ ವಿದ್ಯಾವಂತರಿಂದಲೇ ಇತ್ತೀಚೆಗೆ ಮಹಿಳೆಯರ ಮೇಲೆ ಅವ್ಯಾಹತವಾಗಿ ದೌರ್ಜನ್ಯ ನಡೆಯುತ್ತಿವೆ. ಇದು ಸರಿಯಾದ ಬೆಳವಣಿಗೆಯಲ್ಲಎಂದು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಡಾ.ಪಿ.ಈಶ್ವರ ಭಟ್‌ ವಿಷಾದಿಸಿದರು.

Vijaya Karnataka 10 Mar 2020, 5:00 am
ಧಾರವಾಡ: ಶಿಕ್ಷಣ ಪಡೆದ ವಿದ್ಯಾವಂತರಿಂದಲೇ ಇತ್ತೀಚೆಗೆ ಮಹಿಳೆಯರ ಮೇಲೆ ಅವ್ಯಾಹತವಾಗಿ ದೌರ್ಜನ್ಯ ನಡೆಯುತ್ತಿವೆ. ಇದು ಸರಿಯಾದ ಬೆಳವಣಿಗೆಯಲ್ಲಎಂದು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಡಾ.ಪಿ.ಈಶ್ವರ ಭಟ್‌ ವಿಷಾದಿಸಿದರು.
Vijaya Karnataka Web increased violence against educated people
ವಿದ್ಯಾವಂತರಿಂದಲೇ ದೌರ್ಜನ್ಯ ಹೆಚ್ಚಳ


ಕವಿವಿ ಅಪರಾಧಶಾಸ್ತ್ರ ಮತ್ತು ವಿಧಿ ವಿಜ್ಞಾನ ವಿಭಾಗ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗದ ಆಶ್ರಯದಲ್ಲಿಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿಶುಕ್ರವಾರ ಆಯೋಜಿಸಿದ್ದ 'ಕೌಟುಂಬಿಕ ದೌರ್ಜನ್ಯ ತಡೆಗಟ್ಟುವಲ್ಲಿಸಮಸ್ಯೆಗಳು ಮತ್ತು ದೃಷ್ಟಿಕೋನಗಳು' ಎಂಬ ವಿಷಯದ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಷ್ಟ್ರೀಯ ಅಪರಾಧ ಮಂಡಳಿಯ ಅಂಕಿ ಅಂಶಗಳ ಪ್ರಕಾರ ಪ್ರತಿದಿನ ಕೌಟುಂಬಿಕ ದೌರ್ಜನ್ಯಗಳು ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿಕಾನೂನುಗಳನ್ನು ಬಲಪಡಿಸಬೇಕಿದೆ. ಆಧುನಿಕ ಸಾಮಾಜಿಕ ಜೀವನ ಶೈಲಿಯಿಂದ ಇಂದು ಕೌಟುಂಬಿಕ ಕಲಹಗಳ ಸ್ವರೂಪ ಬದಲಾಗುತ್ತಿದೆ. ಈ ಹಿನ್ನೆಲೆಯಲ್ಲಿವಿವಿಧ ರಾಜಕೀಯ ಕಾನೂನು ಮತ್ತು ಆಡಳಿತಾತ್ಮಕ ಪೂರಕ ಸಹಾಯದಿಂದ ದೌರ್ಜನ್ಯವನ್ನು ತಡೆಗಟ್ಟುಬಹುದು ಎಂದರು.

ಭಾರತೀಯ ಅಪರಾಧಶಾಸ್ತ್ರ ಮಂಡಳಿಯ ಚೇರಮನ್‌ ಡಾ.ಪಿ.ಮಾಧವಾ ಸೋಮ ಸುಂದರಮ್‌ ಮಾತನಾಡಿ, ವರ್ಷದಿಂದ ವರ್ಷಕ್ಕೆ ಭಾರತದಲ್ಲಿಕೌಟುಂಬಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು, 2018ರ ರಾಷ್ಟ್ರೀಯ ಅಪರಾಧ ಮಂಡಳಿಯ ಪ್ರಕಾರ 1,65,800 ಪ್ರಕರಣಗಳು ದಾಖಲಾಗಿದ್ದು, ಶೇ.30 ಪ್ರಕರಣಗಳು ಕೌಟುಂಬಿಕ ಹಿನ್ನೆಲೆಯಿಂದ ಕೂಡಿವೆ. ಶೇ.42 ಮಹಿಳೆಯರು ದೈಹಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದು, ಪ್ರಮುಖವಾಗಿ ಲೈಂಗಿಕ ಅತ್ಯಾಚಾರ, ಮಾನಸಿಕ ಮತ್ತು ದೈಹಿಕವಾಗಿ ಮಹಿಳೆಯರು ಮತ್ತು ಮಕ್ಕಳ ಮೇಲೆ ಅವ್ಯಾಹತವಾಗಿ ದೌರ್ಜನ್ಯಗಳು ನಡೆಯುತ್ತಿವೆ. ಈ ನಿಟ್ಟನಲ್ಲಿಮಹಿಳೆಗೆ ಕಾನೂನಿನ ಅರಿವು ನೀಡುವುದರ ಜತೆಗೆ ಸಾಮಾಜಿಕ ಮತ್ತು ಆಡಳಿತಾತ್ಮಕ ಸಹಕಾರ ನೀಡಬೇಕಾಗಿದೆ ಎಂದರು.

ಟಾಟಾ ಸಮಾಜಿಕ ಸಂಶೋಧನಾ ಅಧ್ಯಯನ ಸಂಸ್ಥೆಯ ಕಾನೂನು ವಿಭಾಗದ ಡೀನ್‌ ಡಾ.ಅರವಿಂದ ತಿವಾರಿ ಮಾತನಾಡಿದರು. ಕುಲಪತಿ ಪ್ರೊ.ಟಿ.ಎಂ.ಭಾಸ್ಕರ್‌, ಪ್ರೊ.ಸಿ.ಬಿ.ಹೊನ್ನು ಸಿದ್ಧಾರ್ಥ, ಪ್ರೊ.ಎನ್‌.ಎಂ.ಸಾಲಿ, ಡಾ. ಎಂ.ಎ. ಜಾಲಿಹಾಳ, ಡಾ.ಜಿ.ಎಸ್‌. ವೇಣುಮಾಧವ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ