ಆ್ಯಪ್ನಗರ

ವಿಜ್ಞಾನ ಅಗತ್ಯತೆ ಅರಿತು ತಂತ್ರಜ್ಞಾನ ಅಳವಡಿಸಿಕೊಳ್ಳಿ

ಧಾರವಾಡ : ನಗರದ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರಕಾರ ಮತ್ತು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಸಹಯೋಗದೊಂದಿಗೆ ವಿಶ್ವ ವಿಜ್ಞಾನ ದಿನಾಚರಣೆ ಅಂಗವಾಗಿ ನಡೆದ ರಸಪ್ರಶ್ನೆ ಸ್ಪರ್ಧೆಯ ಸಮಾರೋಪ ಸಮಾರಂಭ ಶನಿವಾರ ಸಂಪನ್ನಗೊಂಡಿತು.

Vijaya Karnataka 4 Mar 2019, 5:00 am
ಧಾರವಾಡ : ನಗರದ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರಕಾರ ಮತ್ತು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಸಹಯೋಗದೊಂದಿಗೆ ವಿಶ್ವ ವಿಜ್ಞಾನ ದಿನಾಚರಣೆ ಅಂಗವಾಗಿ ನಡೆದ ರಸಪ್ರಶ್ನೆ ಸ್ಪರ್ಧೆಯ ಸಮಾರೋಪ ಸಮಾರಂಭ ಶನಿವಾರ ಸಂಪನ್ನಗೊಂಡಿತು.
Vijaya Karnataka Web DRW-3MAILAR01
ಧಾರವಾಡದ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ವಿಶ್ವ ವಿಜ್ಞಾನ ದಿನಾಚರಣೆ ಅಂಗವಾಗಿ ನಡೆದ ರಸಪ್ರಶ್ನೆ ಸ್ಪರ್ಧೆಯ ಸಮಾರೋಪದಲ್ಲಿ ವಿಧಾನ ಪರಿಷತ್‌ ಸದಸ್ಯ ಸಂಕನೂರ ಮಾತನಾಡಿದರು.


ವಿಧಾನ ಪರಿಷತ್‌ ಸದಸ್ಯ ಸಂಕನೂರ ಮಾತನಾಡಿ, ಏಷ್ಯಾದಲ್ಲೇ ಅತೀ ಕಡಿಮೆ ವಯಸ್ಸಿನಲ್ಲಿ ನೋಬೆಲ್‌ ಪಾರಿತೋಷಕ ಪಡೆದ ವಿಜ್ಞಾನಿ ಸರ್‌.ಸಿ.ವಿ.ರಾಮನ್‌ ನಮ್ಮ ದೇಶದ ಹೆಮ್ಮೆಯ ಪುತ್ರ ಎಂದ ಅವರು, ರಾಷ್ಟ್ರೀಯ ಮತ್ತು ವಿಶ್ವ ವಿಜ್ಞಾನ ದಿನಾಚರಣೆಗೆ ಪ್ರತಿ ವರ್ಷವೂ ಒಂದೊಂದು ಘೋಷ ವಾಕ್ಯ ನೀಡುತ್ತಾರೆ. ಆ ಘೋಷ ವಾಕ್ಯದ ಅರ್ಥವನ್ನು ಸಾರ್ಥಕವಾಗಿಸುವಂತ ಕೆಲಸಗಳನ್ನು ಮತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಶಿವಾನಂದ ಕಣವಿ ಮಾತನಾಡಿ, ವಿದ್ಯಾರ್ಥಿಗಳು ವಿಜ್ಞಾನದ ಅಗತ್ಯತೆ ಅರಿತು ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ಅಲ್ಲದೆ ಅದರಲ್ಲಿನ ನ್ಯೂನತೆ ನೋಡಿಕೊಂಡು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಆವಿಷ್ಕಾರ ಮಾಡುವುದರೊಂದಿಗೆ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದರು.

ಕೇಂದ್ರದ ನಿರ್ದೇಶಕ ಡಾ.ಕೆ.ಬಿ.ಗುಡಸಿ ಅಧ್ಯಕ್ಷ ತೆ ವಹಿಸಿದ್ದರು. ಇದೇ ವೇಳೆ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು.

ವಿಜಯಕುಮಾರ ಗಿಡ್ನವರ, ಸಂದೀಪ ರಂಜಣಗಿ, ವಿಶಾಲಾಕ್ಷಿ ಎಸ್‌.ಜೆ., ಅಡಿವೆಪ್ಪ ಅಂತಣ್ಣವರ, ಎಂ.ಸಿ. ಕಂದಗಲ್ಲ, ಎಸ್‌.ಎಫ್‌. ಆಡಿನ, ಆರ್‌. ಪಿ. ಗಾಳಿ, ಅಭಿಷೇಕ ಸಿ., ಶಶಿಧರ ಬಿ., ಪ್ರಮೋದ ಆರ್‌., ಎಂ.ಕೆ. ಹೊರಕೇರಿ, ಕೆ.ಎನ್‌.ಲಕ್ಷ ್ಮಣ, ಬಿ.ಎಸ್‌.ಗಾಂವಕರ, ಶ್ಯಾಮ ತೇಲಗಾರ, ಎಂ.ಸಿ. ಶಂಕರೇಗೌಡ, ಆರ್‌.ಎನ್‌.ಕಿಲ್ಲೇದಾರ, ಶಂಕರ ಹಿರೇಮಠ, ಪದವಿ ವಿದ್ಯಾರ್ಥಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು. ಸಿ.ಎಫ್‌.ಚಂಡೂರ ಅವರು ನಿರೂಪಿಸಿದರು. ವಿಶಾಲಾಕ್ಷಿ ಎಸ್‌.ಜೆ. ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ