ಆ್ಯಪ್ನಗರ

ಮೂಲ ಸೌಕರ್ಯ ಒದಗಿಸಲು ಒತ್ತಾಯ

ಹುಬ್ಬಳ್ಳಿ : ನಗರದ ವಾರ್ಡ್‌ ನಂ. 41ರಲ್ಲಿ ಹೆಗ್ಗೇರಿ ಸಮೀಪದ ಜೆಪಿ ನಗರಕ್ಕೆ ಮೂಲ ಸೌಕರ್ಯ ಒದಗಿಸಬೇಕು ಎಂದು ಸಮಗ್ರ ಕರ್ನಾಟಕ ರಕ್ಷಣಾ ಸೇನೆ ನೇತೃತ್ವದಲ್ಲಿ ನಿವಾಸಿಗಳು ಶನಿವಾರ ಪಾಲಿಕೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

Vijaya Karnataka 21 Jul 2019, 5:00 am
ಹುಬ್ಬಳ್ಳಿ : ನಗರದ ವಾರ್ಡ್‌ ನಂ. 41ರಲ್ಲಿ ಹೆಗ್ಗೇರಿ ಸಮೀಪದ ಜೆಪಿ ನಗರಕ್ಕೆ ಮೂಲ ಸೌಕರ್ಯ ಒದಗಿಸಬೇಕು ಎಂದು ಸಮಗ್ರ ಕರ್ನಾಟಕ ರಕ್ಷಣಾ ಸೇನೆ ನೇತೃತ್ವದಲ್ಲಿ ನಿವಾಸಿಗಳು ಶನಿವಾರ ಪಾಲಿಕೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
Vijaya Karnataka Web insist on providing basic infrastructure
ಮೂಲ ಸೌಕರ್ಯ ಒದಗಿಸಲು ಒತ್ತಾಯ


ಜೆಪಿ ನಗರದಲ್ಲಿ ಸುಮಾರು 120 ಮನೆಗಳಿವೆ. ಮಳೆಯಿಂದ ಬಿದ್ದ ನೀರು ಹರಿದು ಹೋಗಲಿಕ್ಕೆ ಸರಿಯಾದ ವ್ಯವಸ್ಥೆ ಇಲ್ಲದ್ದರಿಂದ ಇತ್ತೀಚೆಗೆ ಸುರಿದ ಮಳೆಯಿಂದ 2 ಮನೆಗಳು ಸಂಪೂರ್ಣ ಕುಸಿದಿವೆ. ಹೆಚ್ಚಿನ ಹಾನಿಯಾಗುವ ಮುನ್ನ ಪಾಲಿಕೆ ಎಚ್ಚೆತ್ತುಕೊಂಡು ಗಟಾರು ಸೇರಿದಂತೆ ಮೂಲ ಸೌಕರ್ಯ ಒದಗಿಸಬೇಕೆಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದರು.

ಸಮಗ್ರ ಕರ್ನಾಟಕ ರಕ್ಷಣಾ ಸೇನೆಯ ಜಿಲ್ಲಾ ಅಧ್ಯಕ್ಷ ರಾಜು ಅನಂತಸಾ ನಾಯಕವಾಡಿ ಮಾತನಾಡಿ,

ಶೌಚಾಲಯ, ಚರಂಡಿ, ಒಳಚರಂಡಿ ವ್ಯವಸ್ಥೆ ಇಲ್ಲದೇ ಕೊಳಚೆ ಪ್ರದೇಶದಂತಾಗಿದೆ. ದುರ್ನಾತ, ಸೊಳ್ಳೆಗಳ ಕಾಟ ಆರೋಗ್ಯ ಸಮಸ್ಯೆ, ಸಾಂಕ್ರಾಮಿಕ ರೋಗಗಳ ಹರಡುವಿಕೆಗೆ ಕಾರಣವಾಗಿವೆ ಎಂದರು.

ಕಳೆದ ಇಪ್ಪತ್ತು ವರ್ಷದಿಂದ ಪಾಲಿಕೆ ಈ ಬಡಾವಣೆಯತ್ತ ಗಮನ ಹರಿಸಿಲ್ಲ. ಈ ಕುರಿತು ನಗರ ಪಾಲಿಕೆಗೆ ಹಾಗೂ ಜನಪ್ರತಿನಿಧಿಗಳಿಗೆ ಹಲವಾರು ಬಾರಿ ದೂರು ನೀಡಿದ್ದರೂ ನಿರ್ಲಕ್ಷ್ಯವಹಿಸಲಾಗಿದೆ. ಕೂಡಲೇ ಈ ಪ್ರದೇಶಕ್ಕೆ ಮೂಲ ಸೌಕರ್ಯ ಒದಗಿಸಲು ಮುಂದಾಗಬೇಕು ಇಲ್ಲವಾದರೆ ಪಾಲಿಕೆ ಎದುರು ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಉದಯಕುಮಾರ ಎ.ಅಂಬಿಗೇರಿ. ಉಮೇಶ ಸವದತ್ತಿ ಮುಂತಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ