ಆ್ಯಪ್ನಗರ

ಗ್ರಾಮೀಣಾಭಿವೃದ್ಧಿ ವಿವಿಗೆ ಪಂ ಪುಟ್ಟರಾಜರ ನಾಮಕರಣಕ್ಕೆ ಒತ್ತಾಯ

ಧಾರವಾಡ: ಗದಗದಲ್ಲಿನ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ವಿಶ್ವವಿದ್ಯಾಲಯಕ್ಕೆ ಡಾ. ಪಂಡಿತ್‌ ಪುಟ್ಟರಾಜ ಗವಾಯಿಗಳ ನಾಮಕರಣ ಮಾಡುವಂತೆ ಒತ್ತಾಯಿಸಿ ಮುಖ್ಯಮಂತ್ರಿಯವರಿಗೆ ಪತ್ರ ಬರೆಯಬೇಕು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರಿಗೆ ಅಖಿಲ ಕರ್ನಾಟಕ ಗಾನಯೋಗಿ ಸಂಗೀತ ಪರಿಷತ್‌ ವತಿಯಿಂದ ಶುಕ್ರವಾರ ಮನವಿ ಸಲ್ಲಿಸಲಾಯಿತು.

Vijaya Karnataka 12 Jul 2020, 5:00 am
ಧಾರವಾಡ: ಗದಗದಲ್ಲಿನ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ವಿಶ್ವವಿದ್ಯಾಲಯಕ್ಕೆ ಡಾ. ಪಂಡಿತ್‌ ಪುಟ್ಟರಾಜ ಗವಾಯಿಗಳ ನಾಮಕರಣ ಮಾಡುವಂತೆ ಒತ್ತಾಯಿಸಿ ಮುಖ್ಯಮಂತ್ರಿಯವರಿಗೆ ಪತ್ರ ಬರೆಯಬೇಕು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರಿಗೆ ಅಖಿಲ ಕರ್ನಾಟಕ ಗಾನಯೋಗಿ ಸಂಗೀತ ಪರಿಷತ್‌ ವತಿಯಿಂದ ಶುಕ್ರವಾರ ಮನವಿ ಸಲ್ಲಿಸಲಾಯಿತು.
Vijaya Karnataka Web insist on the nomination of p puttaraja for rural development
ಗ್ರಾಮೀಣಾಭಿವೃದ್ಧಿ ವಿವಿಗೆ ಪಂ ಪುಟ್ಟರಾಜರ ನಾಮಕರಣಕ್ಕೆ ಒತ್ತಾಯ

ಪಂಡಿತ್‌ ಪುಟ್ಟರಾಜ ಗವಾಯಿಗಳು ನಾಡು ಕಂಡ ಶ್ರೇಷ್ಠ ಸಮಾಜ ಸುಧಾರಕರು. ಅವರು ತಮ್ಮ ಜೀವಿತಾವಧಿಯಲ್ಲಿಗ್ರಾಮೀಣ ಪ್ರದೇಶದ ಅಂಧ ಬಡ ಮಕ್ಕಳನ್ನು ಭಿಕ್ಷೆರೂಪದಲ್ಲಿಪಡೆದು ಅವರಿಗೆ ಸಂಗೀತ ಕಲಿಸಿ ಸ್ವಾವಲಂಭಿಯಾಗಿ ಬದುಕುವಂತೆ ಮಾಡಿದ್ದಾರೆ. ಅವರಿಂದ ವಿದ್ಯೆ ಕಲಿತ ಸಾವಿರಾರು ಅಂಧ ಬಡ ಮಕ್ಕಳು ಸಂಗೀತಗಾರರಾಗಿ, ಕಲಾವಿದರಾಗಿ ದೇಶದಲ್ಲಿಪ್ರಸಿದ್ಧಿಯಾಗಿದ್ದಾರೆ. ಹೀಗಾಗಿ ಅವರ ಹೆಸರನ್ನು ವಿಶ್ವವಿದ್ಯಾಲಯಕ್ಕೆ ಇಡಬೇಕು ಎಂದು ಮನವಿಯಲ್ಲಿಕೋರಲಾಗಿದೆ.

ಲಕ್ಷತ್ರ್ಮಣ ಬಕ್ಕಾಯಿ, ಯಮನಪ್ಪ ಜಾಲಗಾರ, ಸಾಹಿತಿ ಮಾರ್ತಂಡಪ್ಪ ಕತ್ತಿ, ಬಿ.ಬಿ. ಚಕ್ರಸಾಲಿ, ಪ್ರಕಾಶ ಮಲ್ಲಿಗವಾಡ, ನಾಗರಾಜ ಹೂಗಾರ, ಭೀಮ ಶಂಕರ ಆರ್‌.ಎಂ., ಸುರೇಶ ಮಾದರ, ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ