ಆ್ಯಪ್ನಗರ

ಹು-ಧಾ ಅಭಿವೃದ್ಧಿಗೆ ನಾಗರಿಕರ ಜತೆ ಸಂವಾದ

ಹುಬ್ಬಳ್ಳಿ: ಕರ್ನಾಟಕ ರಾಷ್ಟ್ರ ಸಮಿತಿ ವತಿಯಿಂದ ಹುಬ್ಬಳ್ಳಿ-ಧಾರವಾಡ ನಗರದ ಅಭಿವೃದ್ಧಿಗೆ ಫೆ.29 ಮತ್ತು ಮಾರ್ಚ್ 1 ರಂದು ಸಂಜೆ 4ಕ್ಕೆ ಹು-ಧಾ ನಾಗರಿಕ ಸಮುದಾಯದೊಂದಿಗೆ ಸಂವಾದ ಕಾರ್ಯಕ್ರಮ ಅವಳಿನಗರದಲ್ಲಿಆಯೋಜಿಸಲಾಗಿದೆ ಎಂದು ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ದೀಪಕ ಸಿ.ಎನ್‌. ಹೇಳಿದರು.

Vijaya Karnataka 26 Feb 2020, 5:00 am
ಹುಬ್ಬಳ್ಳಿ: ಕರ್ನಾಟಕ ರಾಷ್ಟ್ರ ಸಮಿತಿ ವತಿಯಿಂದ ಹುಬ್ಬಳ್ಳಿ-ಧಾರವಾಡ ನಗರದ ಅಭಿವೃದ್ಧಿಗೆ ಫೆ.29 ಮತ್ತು ಮಾರ್ಚ್ 1 ರಂದು ಸಂಜೆ 4ಕ್ಕೆ ಹು-ಧಾ ನಾಗರಿಕ ಸಮುದಾಯದೊಂದಿಗೆ ಸಂವಾದ ಕಾರ್ಯಕ್ರಮ ಅವಳಿನಗರದಲ್ಲಿಆಯೋಜಿಸಲಾಗಿದೆ ಎಂದು ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ದೀಪಕ ಸಿ.ಎನ್‌. ಹೇಳಿದರು.
Vijaya Karnataka Web interaction with citizens for the development of hu dha
ಹು-ಧಾ ಅಭಿವೃದ್ಧಿಗೆ ನಾಗರಿಕರ ಜತೆ ಸಂವಾದ


ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಅವಳಿ ನಗರದಲ್ಲಿಹಲವಾರು ಸಮಸ್ಯೆಗಳಿದ್ದು, ಅವುಗಳಿಗೆ ತಾರ್ಕಿಕ ಅಂತ್ಯ ಒದಗಿಸುವ ನಿಟ್ಟಿನಲ್ಲಿಸಂಘವು ನಿರಂತರ ಶ್ರಮಿಸಲಿದೆ ಎಂದರು.

ಫೆ.29ರಂದು ಸಂಜೆ 4ಕ್ಕೆ ಧಾರವಾಡದ ತತ್ವಾನ್ವೇಷಣೆ ಮಂದಿರ ಸಭಾಭವನದಲ್ಲಿಸಂವಾದ ನಡೆಯಲಿದ್ದು, ಮಾ.1ರಂದು ಹುಬ್ಬಳ್ಳಿಯ ಲ್ಯಾಮಿಂಗ್ಟನ್‌ ಹೈಸ್ಕೂಲ್‌ ಬಳಿಯ ಅಶೋಕ ಹೋಟೆಲ್‌ ಸಭಾಭವನದಲ್ಲಿನಡೆಯಲಿದೆ. ಸಂವಾದದಲ್ಲಿಕರ್ನಾಟಕ ರಾಷ್ಟ್ರ ಸಮಿತಿ ರಾಜ್ಯಾಧ್ಯಕ್ಷ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ಭಾಗವಹಿಸಲಿದ್ದು, ಹು-ಧಾ ನಾಗರಿಕ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿಆಗಮಿಸಬೇಕು ಎಂದು ಮನವಿ ಮಾಡಿದರು.

ಮುಂಬರುವ ಹು-ಧಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿಎಲ್ಲವಾರ್ಡ್‌ಗಳಿಗೂ ಕರ್ನಾಟಕ ರಾಷ್ಟ್ರ ಸಮಿತಿಯ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಆ ನಿಟ್ಟಿನಲ್ಲಿಮಹಾನಗರದ ಜನತೆಗೆ ಜತೆ ಸಮಸ್ಯೆ ಹಾಗೂ ಮುಂದಿನ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸುವ ಮೂಲಕ ಅತ್ಯುತ್ತಮ ಪ್ರಣಾಳಿಕೆ ತಯಾರಿಸಲಾಗುವುದು. ಅವಳಿ ನಗರದ ಜತೆಗೆ ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲ ನೀಡುವ ಮೂಲಕ ನಗರದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಕೋರಿದರು.

ಸುದ್ದಿಗೋಷ್ಠಿಯಲ್ಲಿಹುಬ್ಬಳ್ಳಿ ತಾಲೂಕು ಘಟಕದ ಅಧ್ಯಕ್ಷ ಗುರುನಾಥ ಎಚ್‌.ಶಿವರಾಜ, ಧಾರವಾಡ ಜಿಲ್ಲಾಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಜಿ.ಐ.ಬಡಬಡೆ, ಹುಬ್ಬಳ್ಳಿ ತಾಲೂಕು ಘಟಕದ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಇಮ್ತಿಯಾಜ ಮನಿಯಾರ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ