ಆ್ಯಪ್ನಗರ

ಸ್ವಾಸ್ಥತ್ರ್ಯ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ

ಧಾರವಾಡ: ಪ್ರಸ್ತುತದಲ್ಲಿವಿದ್ಯಾರ್ಥಿಗಳು ಮಹಾತ್ಮ ಗಾಂಧೀಜಿ ಹಾಗೂ ಲಾಲ್‌ ಬಹದ್ಧೂರ ಶಾಸ್ತ್ರಿಜೀ ಮಹಾನ್‌ ಪುರುಷರ ತತ್ವಾದರ್ಶಗಳನ್ನು ಜೀವನದಲ್ಲಿಅಳವಡಿಸಿಕೊಳ್ಳುವ ಮೂಲಕ ಸ್ವಾಸ್ಥತ್ರ್ಯ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಡಾ.ಸಿ.ಎಂ.ಕಡಕೋಳ ಹೇಳಿದರು.

Vijaya Karnataka 8 Oct 2019, 9:03 pm
ಧಾರವಾಡ: ಪ್ರಸ್ತುತದಲ್ಲಿವಿದ್ಯಾರ್ಥಿಗಳು ಮಹಾತ್ಮ ಗಾಂಧೀಜಿ ಹಾಗೂ ಲಾಲ್‌ ಬಹದ್ಧೂರ ಶಾಸ್ತ್ರಿಜೀ ಮಹಾನ್‌ ಪುರುಷರ ತತ್ವಾದರ್ಶಗಳನ್ನು ಜೀವನದಲ್ಲಿಅಳವಡಿಸಿಕೊಳ್ಳುವ ಮೂಲಕ ಸ್ವಾಸ್ಥತ್ರ್ಯ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಡಾ.ಸಿ.ಎಂ.ಕಡಕೋಳ ಹೇಳಿದರು.
Vijaya Karnataka Web involve the creation of a freedom society
ಸ್ವಾಸ್ಥತ್ರ್ಯ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ


ನಗರದ ರಾಯಾಪೂರದ ಮಹಾಂತ ಮಹಾವಿದ್ಯಾಲಯ ಸಭಾ ಭವನದಲ್ಲಿಜರುಗಿದ ಮಹಾತ್ಮ ಗಾಂಧೀಜಿ ಹಾಗೂ ಲಾಲ್‌ ಬಹದ್ಧೂರ ಶಾಸ್ತ್ರಿ ಜಯಂತಿ ದಿನಾಚರಣೆ ಕಾರ್ಯಕ್ರಮದಲ್ಲಿಅಧ್ಯಕ್ಷತೆ ವಹಿಸಿ ಮಾತನಾಡಿದರು.

ಎನ್‌ಎಸ್‌ಎಸ್‌ ಘಟಕ-1 ಕಾರ್ಯಕ್ರಮಾಧಿಕಾರಿ ಕೆ.ಎಸ್‌.ಮೇಲ್ಮಾಳಗಿ ಮಾತನಾಡಿ, ಗಾಂಧೀಜಿ ಕೇವಲ ಭಾರತಕಷ್ಟೇ ಅಲ್ಲವಿಶ್ವಕ್ಕೆ ಮಾದರಿಯಾಗಿದ್ದಾರೆ. ಸಮಾಜದ ಬದಲಾವಣೆಗೆ ಚಿಂತನೆಗಳು ಪ್ರೇರಣೆಯಾಗಿವೆ ಎಂದರು.

ಇದೇ ವೇಳೆ ಪ್ಲಾಸ್ಟಿಕ್‌ ಮುಕ್ತ ಭಾರತ ಪ್ರತಿಜ್ಞಾ ವಿಧಿಯನ್ನು ಎನ್‌ಎಸ್‌ಎಸ್‌ ಘಟಕ-2 ಕಾರ್ಯಕ್ರಮಾಧಿಕಾರಿ ಸಿ.ಕೆ.ಹುಬ್ಬಳ್ಳಿ ಬೋಧಿಸಿದರು.

ವಿದ್ಯಾರ್ಥಿ ಒಕ್ಕೂಟದ ಕಾರ್ಯಾಧ್ಯಕ್ಷ ಡಾ.ಕೆ.ಎಸ್‌.ಶಾಂತಯ್ಯ, ಸಾಂಸ್ಕ್ರತಿಕ ಸಂಘದ ಸಂಯೋಜಕಿ ಎ.ಬಿ.ಶಿರಿಯಣ್ಣವರ ಪಾಲ್ಗೊಂಡಿದ್ದರು. ಕಾವೇರಿ ಸೂರ್ಯವಂಶಿ, ಬಸೀರಾ ಸಾವಂತನವರ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ