ಆ್ಯಪ್ನಗರ

ಮೂರು ರೈಲ್ವೆ ನಿಲ್ದಾಣಗಳಿಗೆ ಐಎಸ್‌ಒ ಪ್ರಶಸ್ತಿ

ಹುಬ್ಬಳ್ಳಿ : ಪರಿಸರ ನಿರ್ವಹಣಾ ವ್ಯವಸ್ಥೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಕ್ಕೆ ನೈರುತ್ಯ ರೈಲ್ವೆ ವಲಯ ಹುಬ್ಬಳ್ಳಿ ವಿಭಾಗದ ಧಾರವಾಡ, ಬೆಳಗಾವಿ ಮತ್ತು ವಾಸ್ಕೋ ಡಾ ಗಾಮಾ ನಿಲ್ದಾಣಗಳಿಗೆ ಐಎಸ್‌ಒ 14001- 2015 ಪ್ರಮಾಣೀಕರಣ ಪತ್ರ ದೊರೆತಿದೆ. ಆಯಾ ನಿಲ್ದಾಣ ವ್ಯವಸ್ಥಾಪಕರಿಗೆ ವಿಭಾಗೀಯ ವ್ಯವಸ್ಥಾಪಕ ಅರವಿಂದ ಮಳಖೇಡ ಪ್ರಮಾಣ ಪತ್ರಗಳನ್ನು ವಿತರಿಸಿದರು.

Vijaya Karnataka 15 Jan 2020, 5:49 pm
ಹುಬ್ಬಳ್ಳಿ : ಪರಿಸರ ನಿರ್ವಹಣಾ ವ್ಯವಸ್ಥೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಕ್ಕೆ ನೈರುತ್ಯ ರೈಲ್ವೆ ವಲಯ ಹುಬ್ಬಳ್ಳಿ ವಿಭಾಗದ ಧಾರವಾಡ, ಬೆಳಗಾವಿ ಮತ್ತು ವಾಸ್ಕೋ ಡಾ ಗಾಮಾ ನಿಲ್ದಾಣಗಳಿಗೆ ಐಎಸ್‌ಒ 14001- 2015 ಪ್ರಮಾಣೀಕರಣ ಪತ್ರ ದೊರೆತಿದೆ. ಆಯಾ ನಿಲ್ದಾಣ ವ್ಯವಸ್ಥಾಪಕರಿಗೆ ವಿಭಾಗೀಯ ವ್ಯವಸ್ಥಾಪಕ ಅರವಿಂದ ಮಳಖೇಡ ಪ್ರಮಾಣ ಪತ್ರಗಳನ್ನು ವಿತರಿಸಿದರು.
Vijaya Karnataka Web iso award for three railway stations
ಮೂರು ರೈಲ್ವೆ ನಿಲ್ದಾಣಗಳಿಗೆ ಐಎಸ್‌ಒ ಪ್ರಶಸ್ತಿ

ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ(ನ್ಯಾಷನಲ್‌ ಗ್ರೀನ್‌ ಟ್ರಿಬ್ಯೂನಲ್‌-ಎನ್‌ಜಿಟಿ) ಒದಗಿಸಿದ ಮಾರ್ಗಸೂಚಿಗಳನ್ನು ಅನುಸರಿಸಿ ಮತ್ತು ಇಂಟರ್‌ನ್ಯಾಷನಲ್‌ ಆರ್ಗನೈಸೇಶನ್‌ ಫಾರ್‌ ಸ್ಟ್ಯಾಂಡರ್ಡೈಸೇಶನ್‌ (ಐಎಸ್‌ಒ) ನಿಗದಿಪಡಿಸಿದ ನಂತರ ಈ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಪ್ರಮಾಣ ಪತ್ರವು ಮೂರು ವರ್ಷಗಳವರೆಗೆ ಮಾನ್ಯತೆ ಹೊಂದಿರುತ್ತದೆ. ನಿಲ್ದಾಣಗಳಲ್ಲಿನ ಕಾಯ್ದಿರಿಸಿದ ಕೋಣೆ, ವೇಟಿಂಗ್‌ ರೂಂ, ಉಪಹಾರ ಕೊಠಡಿಗಳು, ಉತ್ತಮ ಕುಡಿಯುವ ನೀರು, ನೈರ್ಮಲ್ಯ ಮತ್ತು ಪರಿಸರ ಸ್ನೇಹಿ ರೀತಿಯಲ್ಲಿಉತ್ಪತ್ತಿಯಾಗುವ ತ್ಯಾಜ್ಯ ನಿರ್ವಹಿಸಿದ್ದಕ್ಕಾಗಿ ಪ್ರಮಾಣ ಪತ್ರ ದೊರೆತಿದೆ.

ಐಎಸ್‌ಒ 14001-2015 (ಪರಿಸರ ನಿರ್ವಹಣಾ ವ್ಯವಸ್ಥೆ) ಪ್ರಮಾಣಪತ್ರಗಳನ್ನು ಅಂತಾರಾಷ್ಟ್ರೀಯ ನಿರ್ವಹಣಾ ವ್ಯವಸ್ಥೆ ಪ್ರಮಾಣೀಕರಣದ ಪ್ರತಿನಿಧಿಗಳು ವಿಭಾಗೀಯ ವ್ಯವಸ್ಥಾಪಕರಿಗೆ ನೀಡಿದ್ದರು.

ಎಡಿಆರ್‌ಎಂ ಎಸ್‌.ಕೆ. ಝಾ, ವಡೋದರ ಅಂತಾರಾಷ್ಟ್ರೀಯ ಮ್ಯಾನೇಜಮೆಂಟ್‌ ಸಿಸ್ಟಮ್‌ ಸರ್ಟಿಫಿಕೇಶನ್‌ನ ಅಧಿಕಾರಿಗಳಾದ ಎಸ್‌.ಕೆ.ಭಟ್ಟಾಚಾರ್ಯ, ವೀರೇಂದ್ರ ಶರ್ಮಾ ಈ ಸಂದರ್ಭದಲ್ಲಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ