ಆ್ಯಪ್ನಗರ

ನೀರಿನ ಉಳಿತಾಯಕ್ಕೆ ಇಸ್ರೇಲ್‌ ಮಾದರಿ ಕೃಷಿ ಅಗತ್ಯ

ಹುಬ್ಬಳ್ಳಿ : ಇಸ್ರೇಲ್‌ ಮಾದರಿ ಕೃಷಿಯನ್ನು ಭಾರತದಲ್ಲಿ ಅಳವಡಿಕೆ ಮಾಡುವುದರಿಂದ ಶೇ. 40 ರಿಂದ 70ರಷ್ಟು ನೀರನ್ನು ಉಳಿತಾಯ ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನ ಬಳಕೆ ಹೆಚ್ಚಾಗಬೇಕಿದೆ ಎಂದು ಧಾರವಾಡ ಕೃಷಿ ವಿಶ್ವವಿದ್ಯಾನಿಲಯ ಕುಲಪತಿ ಡಾ. ಮಹಾದೇವ ಚಟ್ಟಿ ಹೇಳಿದರು.

Vijaya Karnataka 16 Feb 2019, 5:00 am
ಹುಬ್ಬಳ್ಳಿ : ಇಸ್ರೇಲ್‌ ಮಾದರಿ ಕೃಷಿಯನ್ನು ಭಾರತದಲ್ಲಿ ಅಳವಡಿಕೆ ಮಾಡುವುದರಿಂದ ಶೇ. 40 ರಿಂದ 70ರಷ್ಟು ನೀರನ್ನು ಉಳಿತಾಯ ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನ ಬಳಕೆ ಹೆಚ್ಚಾಗಬೇಕಿದೆ ಎಂದು ಧಾರವಾಡ ಕೃಷಿ ವಿಶ್ವವಿದ್ಯಾನಿಲಯ ಕುಲಪತಿ ಡಾ. ಮಹಾದೇವ ಚಟ್ಟಿ ಹೇಳಿದರು.
Vijaya Karnataka Web DRW-15MANJU5
ಹುಬ್ಬಳ್ಳಿಯಲ್ಲಿ ನಡೆದ ಧ್ಯಾನ ಸಂಗಮ ರಾಷ್ಟ್ರೀಯ ಸಮ್ಮೇಳನ ಸಮಾರೋಪ ಸಮಾರಂಭದಲ್ಲಿ ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಸ್‌.ಬಿ. ಹೊಸಮನಿ ಮಾತನಾಡಿದರು. ಕೃಷಿ ವಿವಿ ಕುಲಪತಿ ಡಾ. ಮಹಾದೇವ ಚೆಟ್ಟಿ ಸೇರಿದಂತೆ ಅನೇಕರು ಹಾಜರಿದ್ದರು.


ಪ್ರಜ್ಞಾ ಪ್ರವಾಹ ಹಾಗೂ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯ ವತಿಯಿಂದ ಇಲ್ಲಿಯ ಬಿವಿಬಿ ಆವರಣದ ದೇಶಪಾಂಡೆ ಫೌಂಡೇಶನ್‌ ಸಭಾವನದಲ್ಲಿ ಶುಕ್ರವಾರ ನಡೆದ ಧ್ಯಾನ ಸಂಗಮ-2019 ರಾಷ್ಟ್ರೀಯ ಸಮ್ಮೇಳನ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಪ್ರಸ್ತುತ ದೇಶದಲ್ಲಿ ಅಂತರ್ಜಲ ಮಟ್ಟ ಕುಸಿತ ಕಂಡಿದೆ. ಈ ಮೊದಲು 30-40ಪುಟ್‌ ಕೊಳವೆ ಬಾವಿ ಕೊರೆಸಿದರೆ ನೀರು ಸಿಗುತ್ತಿತ್ತು. ಆದರೀಗ 300-1000 ಪುಟ್‌ ಕೊಳವೆ ಬಾವಿ ಕೊರೆಸಿದರೂ ನೀರು ಸಿಗುತ್ತಿಲ್ಲ. ಆದ್ದರಿಂದ ನೀರಿನ ಮಟ್ಟ ಹೆಚ್ಚಿಸುವ ಮತ್ತು ನೀರಿನ ಮಿತ ಬಳಕೆಗೆ ಹೆಚ್ಚು ಒತ್ತು ನೀಡಬೇಕಾದ ಅವಶ್ಯಕತೆ ಇದೆ ಎಂದರು.

ಆವಿಷ್ಕಾರಕ್ಕೆ ಪೇಟೆಂಟ್‌ ಸಿಗಲಿ

ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಸ್‌.ಬಿ. ಹೊಸಮನಿ ಮಾತನಾಡಿ, ಭಾರತದಲ್ಲಿ ಹಳೇ ಕಾಲದಿಂದಲೂ ಬಳಕೆಯಾಗುತ್ತಿದ್ದ ತಂತ್ರಜ್ಞಾನ ಈಗ ಬೆಳೆದು ಮುಂದುವರಿದೆ. ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆವಿಷ್ಕಾರಗಳಾಗುತ್ತಿದ್ದರೂ, ಬೆಳಕಿಗೆ ಬರುತ್ತಿಲ್ಲ. ಜಪಾನ್‌, ಚೈನಾದಂತಹ ದೇಶಗಳು ತಮ್ಮ ಆವಿಷ್ಕಾರಗಳಿಗೆ ಪೇಟೆಂಟ್‌ ಪಡೆದು ಮುಂದಾಗುತ್ತಿವೆ. ಆದ್ದರಿಂದ ಆವಿಷ್ಕಾರಕ್ಕೆ ಸೂಕ್ತ ಗೌರವ ಸಿಗಬೇಕಾದ ಪೇಟೆಂಟ್‌ ಪಡೆಯಲು ಮುಂದಾಗಬೇಕು ಎಂದು ಸಲಹೆ ಮಾಡಿದರು.

ಕ್ರಿಯಾಶೀಲ ಕೌಶಲಕ್ಕೆ ಪೂರಕವಾದ ಆವಿಷ್ಕಾರಗಳು ಜನರ ಜೀವನಮಟ್ಟ ಸುಧಾರಣೆಗೆ ಪೂರಕವಾಗಿರುತ್ತವೆ. ಅಲ್ಲದೆ, ನವ ಭಾರತ ನಿರ್ಮಾಣ ಪರಿಕಲ್ಪನೆಗೂ ಇಂತಹ ಆವಿಷ್ಕಾರಗಳು ಸಹಾಯಕವಾಗಿರುತ್ತವೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಆವಿಷ್ಕಾರಕ್ಕೆ ಹೆಚ್ಚು ಒತ್ತು ನೀಡಬೇಕು ಎಂದರು.

ಪ್ರಜ್ಞಾ ಪ್ರವಾಹ ರಾಷ್ಟ್ರೀಯ ಸಂಚಾಲಕ ಜೆ. ನಂದಕುಮಾರ ಮಾತನಾಡಿ, ಧ್ಯಾನ ಸಂಗಮದಂತಹ ಸಮ್ಮೇಳನಗಳು ನಿರಂತರವಾಗಿ ನಡೆಯುತ್ತಿರಬೇಕು. ಇಂತಹ ಸಮ್ಮೇಳನಗಳಲ್ಲಿ ಭಾಗವಹಿಸುವ ಸಾಧಕರಿಂದ ಅನೇಕರಿಗೆ ಪ್ರೇರಣೆ ಜತೆಗೆ ಆತ್ಮವಿಶ್ವಾಸ ಹೆಚ್ಚಲಿದೆ. ಅಲ್ಲದೆ, ಸಮಾಜ ಮತ್ತು ರಾಷ್ಟ್ರಕ್ಕೆನಾದರೂ ಕೊಡುಗೆ ನೀಡಬೇಕೆಂಬ ಹಂಬಲಕ್ಕೆ ಸ್ಪೂರ್ತಿ ನೀಡಿದಂತಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಸಂಚಾಲಕ ಜಗದೀಶ ಹಿರೇಮಠ, ಸಹ ಸಂಚಾಲಕ ಡಾ. ಸುಶಾಂತ ಜೋಶಿ, ಸಂದೀಪ ನಾಯರ್‌ ಸೇರಿದಂತೆ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ