ಆ್ಯಪ್ನಗರ

ಇಂಧನ ಕೊರತೆಯಾಗದಂತೆ ಪೂರೈಸಲು ಜೋಶಿ ಸೂಚನೆ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿನಗರಗಳು ನಾಳೆಯಿಂದ ಪೆಟ್ರೋಲ್‌, ಡೀಸೆಲ್‌ ಪೂರೈಕೆಯಾಗುವುದಿಲ್ಲ. ಆದ್ದರಿಂದ ಇಂಧನ ದೊರೆಯುವುದಿಲ್ಲವೆಂಬ ಸುದ್ದಿ ಹರಿದಾಡುತ್ತಿದ್ದು ಆದರೆ ಇದು ಸತ್ಯವಲ್ಲ, ಈ ಕುರಿತು ಎಚ್‌ಪಿಸಿಎಲ್‌ ಐಓಸಿಎಲ್‌ ಮತ್ತು ಬಿಪಿಸಿಎಲ್‌ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಮಾತನಾಡಿದ್ದು ಯಾವುದೇ ತೊಂದರೆಯಾಗದಂತೆ ಇಂಧನ ಪೂರೈಸಲು ಸೂಚಿಸಿದ್ದಾರೆ.

Vijaya Karnataka 9 Aug 2019, 5:00 am
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿನಗರಗಳು ನಾಳೆಯಿಂದ ಪೆಟ್ರೋಲ್‌, ಡೀಸೆಲ್‌ ಪೂರೈಕೆಯಾಗುವುದಿಲ್ಲ. ಆದ್ದರಿಂದ ಇಂಧನ ದೊರೆಯುವುದಿಲ್ಲವೆಂಬ ಸುದ್ದಿ ಹರಿದಾಡುತ್ತಿದ್ದು ಆದರೆ ಇದು ಸತ್ಯವಲ್ಲ, ಈ ಕುರಿತು ಎಚ್‌ಪಿಸಿಎಲ್‌ ಐಓಸಿಎಲ್‌ ಮತ್ತು ಬಿಪಿಸಿಎಲ್‌ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಮಾತನಾಡಿದ್ದು ಯಾವುದೇ ತೊಂದರೆಯಾಗದಂತೆ ಇಂಧನ ಪೂರೈಸಲು ಸೂಚಿಸಿದ್ದಾರೆ.
Vijaya Karnataka Web joshi instructed to meet lack of fuel
ಇಂಧನ ಕೊರತೆಯಾಗದಂತೆ ಪೂರೈಸಲು ಜೋಶಿ ಸೂಚನೆ

ಪ್ರತಿದಿನದಂತೆ ಟ್ಯಾಂಕರ್‌ಗಳ ಮೂಲಕ ಇಂಧನ ಸರಬರಾಜು ನಡೆಯುತ್ತದೆ. ಹೀಗಾಗಿ ಯಾರೂ ಕೂಡಾ ಪೆಟ್ರೋಲ್‌ ಮತ್ತು ಡೀಸೆಲ್‌ ಪೂರೈಕೆ ಕುರಿತು ಅನುಮಾನ ಪಡಬೇಕಿಲ್ಲ ಪ್ರತಿದಿನದಂತೆ ಎಲ್ಲ ಪೆಟ್ರೋಲ್‌ ಬಂಕ್‌ಗಳಲ್ಲಿ ಇಂಧನ ದೊರೆಯುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

ಅಲ್ಲದೇ ಅತೀವೃಷ್ಟಿಯಿಂದ ತೊಂದರೆಗೀಡಾದ ಸಾರ್ವಜನಿಕರು ಚಿಟಗುಪ್ಪಿ ಆವರಣದಲ್ಲಿರುವ ತಮ್ಮ ಕಾರ್ಯಾಲಯಕ್ಕೆ ಯಾವುದೇ ಸಹಾಯ ಹಾಗೂ ಪರಿಹಾರಕ್ಕಾಗಿ ನೇರವಾಗಿ ಹಾಗೂ ದೂರವಾಣಿ ಮುಖಾಂತರ 0836-2251055 ಅಥವಾ 2258955 ಸಂಪರ್ಕಿಸಿದಲ್ಲಿ ಸೂಕ್ತ ನೆರವು ನೀಡಲು ಸಹಕರಿಸುವುದಾಗಿ ಸಚಿವ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ