ಆ್ಯಪ್ನಗರ

ಪತ್ರಿಕೋದ್ಯಮ ಅದ್ಭುತಗಳ ಸಾಗರ

ಧಾರವಾಡ : ಪತ್ರಿಕೋದ್ಯಮ ಅದ್ಭುತಗಳ ಸಾಗರ ಹಾಗೂ ಅವಕಾಶಗಳ ಆಗರ ಎಂದು ಪತ್ರಕರ್ತ ವಾಸುದೇವ ಹೆರಕಲ್‌ ಹೇಳಿದರು. ನಗರದ ರಾಯಾಪೂರದಲ್ಲಿನ ಎಸ್‌ಜೆಎಂವಿ ಮಹಾಂತ ಮಹಾವಿದ್ಯಾಲಯದಲ್ಲಿ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಹೊರತಂದ ಮಹಾಂತವಾಣಿ ಪ್ರಾಯೋಗಿಕ ಪತ್ರಿಕೆಯನ್ನು ಭಾನುವಾರ ಬಿಡುಗಡೆಗೊಳಿಸಿ ಮಾತನಾಡಿದರು.

Vijaya Karnataka 25 Feb 2019, 5:00 am
ಧಾರವಾಡ : ಪತ್ರಿಕೋದ್ಯಮ ಅದ್ಭುತಗಳ ಸಾಗರ ಹಾಗೂ ಅವಕಾಶಗಳ ಆಗರ ಎಂದು ಪತ್ರಕರ್ತ ವಾಸುದೇವ ಹೆರಕಲ್‌ ಹೇಳಿದರು.
Vijaya Karnataka Web DRW-24MAILAR03
ಧಾರವಾಡದ ರಾಯಾಪೂರದಲ್ಲಿನ ಎಸ್‌ಜೆಎಂವಿ ಮಹಾಂತ ಮಹಾವಿದ್ಯಾಲಯದಲ್ಲಿ ಪ್ರಾಯೋಗಿಕ ಪತ್ರಿಕೆ ಮಹಾಂತವಾಣಿಯನ್ನು ಪತ್ರಕರ್ತ ವಾಸುದೇವ ಹೆರಕಲ್‌ ಬಿಡುಗಡೆಗೊಳಿಸಿದರು.

ನಗರದ ರಾಯಾಪೂರದಲ್ಲಿನ ಎಸ್‌ಜೆಎಂವಿ ಮಹಾಂತ ಮಹಾವಿದ್ಯಾಲಯದಲ್ಲಿ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಹೊರತಂದ ಮಹಾಂತವಾಣಿ ಪ್ರಾಯೋಗಿಕ ಪತ್ರಿಕೆಯನ್ನು ಭಾನುವಾರ ಬಿಡುಗಡೆಗೊಳಿಸಿ ಮಾತನಾಡಿದರು.

ಹಿರಿಯ ಪತ್ರಕರ್ತ ಸುಶಿಲೇಂದ್ರ ಕುಂದರಗಿ ಮಾತನಾಡಿ, ಸುದ್ದಿ ಎಂಬ ಪದಕ್ಕೆ ಇಂದಿಗೂ ನಿಜವಾದ ವ್ಯಾಖ್ಯಾನ ಮಾಡಲು ಸಾಧ್ಯವಾಗಿಲ್ಲ. ಕಾರಣ ಅದು ಪತ್ರಿಕಾ ರಂಗದ ವಿಸ್ತಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದರು.

ಪ್ರಾಚಾರ್ಯ ಡಾ.ಸಿ.ಎಂ.ಕಡಕೋಳ ಮಾತನಾಡಿದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಜಯಲಕ್ಷ್ಮೀ ಯಂಡಿಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿದ್ಯಾರ್ಥಿ ಒಕ್ಕೂಟದ ಕಾರ್ಯಾಧ್ಯಕ್ಷೆ ಬಿ.ಜಿ.ರಕರಡ್ಡಿ, ವಿದ್ಯಾರ್ಥಿಗಳಾದ ಎಸ್‌.ಎಚ್‌.ಮಂಜುನಾಥ, ರಾಜಶೇಖರ, ರಬ್ಬಾನಿ, ವಿಜಯಾನಂದ, ಸಂಗನಬಸವ, ಶಿಲ್ಪಾ, ವಿದ್ಯಾರ್ಥಿ ಪ್ರಧಾನ ಕಾರ್ಯದರ್ಶಿ ಗಿರಿಜಾ ಭಜಂತ್ರಿ ಸೇರಿದಂತೆ ಇತರರು ಇದ್ದರು. ಮಮತಾ ಭಜಂತ್ರಿ ಪ್ರಾರ್ಥಿಸಿದರು. ಶಿವರಾಜ ನವಲಗುಂದ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ