ಆ್ಯಪ್ನಗರ

ಕಬಡ್ಡಿ ಆಟಕ್ಕೆ ಪ್ರೋತ್ಸಾಹ ಅಗತ್ಯ

ಧಾರವಾಡ : ಧಾರವಾಡ ಜಿಲ್ಲಾ ಓಲಂಪಿಕ್‌ ಅಸೋಶಿಯೇಶನ್‌ ಆಶ್ರಯದಲ್ಲಿ ರಾಜ್ಯಮಟ್ಟದ ಹಾಕಿ ಮತ್ತು ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗುವುದು ಎಂದು ಧಾರವಾಡ ಜಿಲ್ಲಾ ಓಲಂಪಿಕ್‌ ಅಸೋಶಿಯೇಶನ್‌ ಅಧ್ಯಕ್ಷ ಪಿ.ಎಚ್‌.ನೀರಲಕೇರಿ ಹೇಳಿದರು.

Vijaya Karnataka 15 Jul 2019, 5:00 am
ಧಾರವಾಡ : ಧಾರವಾಡ ಜಿಲ್ಲಾ ಓಲಂಪಿಕ್‌ ಅಸೋಶಿಯೇಶನ್‌ ಆಶ್ರಯದಲ್ಲಿ ರಾಜ್ಯಮಟ್ಟದ ಹಾಕಿ ಮತ್ತು ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗುವುದು ಎಂದು ಧಾರವಾಡ ಜಿಲ್ಲಾ ಓಲಂಪಿಕ್‌ ಅಸೋಶಿಯೇಶನ್‌ ಅಧ್ಯಕ್ಷ ಪಿ.ಎಚ್‌.ನೀರಲಕೇರಿ ಹೇಳಿದರು.
Vijaya Karnataka Web DRW-14RANGA05
ಧಾರವಾಡ ಮಲ್ಲಸಜ್ಜನ ವ್ಯಾಯಾಮ ಶಾಲೆಯಲ್ಲಿ ಜರುಗಿದ ಧಾರವಾಡ ಜಿಲ್ಲಾ ಓಲಂಪಿಕ್‌ ಅಸೋಶಿಯೇಶನ್‌ನ 12 ನೇ ವಾರ್ಷಿಕ ಮಹಾಸಭೆಯಲ್ಲಿ ಪಿ.ಎಚ್‌.ನೀರಲಕೇರಿ ಮಾತನಾಡಿದರು.


ನಗರದ ಮಲ್ಲಸಜ್ಜನ ವ್ಯಾಯಾಮ ಶಾಲೆಯಲ್ಲಿ ಭಾನುವಾರ ಜರುಗಿದ ಧಾರವಾಡ ಜಿಲ್ಲಾ ಓಲಂಪಿಕ್‌ ಅಸೋಶಿಯೇಶನ್‌ನ 12 ನೇ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಹಾಕಿ ಮತ್ತು ಕಬಡ್ಡಿ ಆಟಗಳಿಗೆ ಪ್ರೋತ್ಸಾಹ ನೀಡುವ ಅಗತ್ಯವಿದೆ. ಉದಯೋನ್ಮುಖ ಕ್ರೀಡಾಪಟುಗಳಿಗೆ ಸೂಕ್ತ ಮಾರ್ಗದರ್ಶನ ಸಿಗಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯಮಟ್ಟದ ಪಂದ್ಯಾವಳಿ ಆಯೋಜಿಸಲಾಗುವುದು. ಪಂದ್ಯಾವಳಿ ಯಶಸ್ವಿಗೆ ಇತರ ಸಂಘ-ಸಂಸ್ಥೆಗಳ ಸಹಕಾರ ಕೂಡ ಅಗತ್ಯ ಎಂದರು.

ಇದೇ ವೇಳೆ ಜಿಲ್ಲಾ ಕ್ರೀಡಾಂಗಣದಲ್ಲಿನ ಸಿಂಥೆಟಿಕ್‌ ಟ್ರ್ಯಾಕ್‌ ಸಂರಕ್ಷ ಣೆಗೆ ಹೋರಾಟ, ನವಂಬರ ತಿಂಗಳಲ್ಲಿ ಮಿನಿ ಓಲಂಪಿಕ್‌ ಮತ್ತು ದಿ.ಕಲ್ಲವ್ವ ಸಿಂದೋಗಿ ಸ್ಮರಣಾರ್ಥ ರಾಜ್ಯ ಮಟ್ಟದ ಗುಡ್ಡಗಾಡು ಓಟ ಸ್ಪರ್ಧೆ ಸಂಘಟಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ನಂತರ ಅಸೋಶಿಯೇಶನ್‌ದ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಅಧ್ಯಕ್ಷ ರಾಗಿ ಶಿವು ಹಿರೇಮಠ , ಗೌರವ ಅಧ್ಯಕ್ಷ ರಾಗಿ ಡಾ.ಆನಂದ ನಾಡಗೀರ ಮತ್ತು ಪಿ.ಎಚ್‌.ನೀರಲಕೇರಿ, ಉಪಾಧ್ಯಕ್ಷ ರಾಗಿ ಮೋಹನ ಮೋರೆ, ಜಿ.ಎಸ್‌.ಜಾಧವ , ಕಾರ್ಯದರ್ಶಿ ಬಿ.ಎಸ್‌.ತಾಳಿಕೋಟಿ,ಸಹ ಕಾರ್ಯದರ್ಶಿ ಪ್ರಮೋದ ಗಂಗಾಧರ, ಕೋಶಾಧ್ಯಕ್ಷ ಎಸ್‌.ಎಸ್‌.ಅಗಡಿ , ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕೆ.ಎಸ್‌.ಭೀಮಣ್ಣವರ, ಈಶ್ವರ ಅಂಗಡಿ, ವಿನಯ ನಾಡಗೀರ, ಶ್ರೀಕಾಂತ ಕಂಚಿಬೇಲಿ, ಡಾ.ಶಕುಂತಲಾ ಹಿರೇಮಠ, ಡಿ.ಬಿ.ಗೋವಿಂದಪ್ಪ, ಪಿ.ಜೆ.ಹಾಸಲಕರ, ವಿ.ಪಿ.ಕುರ್ತಕೋಟಿ ಆಯ್ಕೆಯಾದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ