ಆ್ಯಪ್ನಗರ

ಕಲಘಟಗಿ: ಲಾಡ್‌ ತುರುಸಿನ ಪ್ರಚಾರ

ಕಲಘಟಗಿ :ಕಾಂಗ್ರೆಸ್‌ ಅಭ್ಯರ್ಥಿ ಕಾರ್ಮಿಕ ಸಚಿವ ಸಂತೋಷ ಲಾಡ್‌ ವಿವಿಧ ಗ್ರಾಮಗಳಿಗೆ ತೆರಳಿ ಬಿರುಸಿನ ಪ್ರಚಾರ ಕೈಗೊಂಡರು. ​ಅವರು ತಾಲೂಕಿನ ತುಮರಿಕೊಪ್ಪ, ಹುಲ್ಲಂಬಿ, ಹಸರಂಬಿ,ಅರೆಬಸನಕೊಪ್ಪ,ಶಿಗ್ಗಟ್ಟಿ,ಶಿಗ್ಗಟ್ಟುಡೆ, ಮುತ್ತಗಿ, ಎಮ್ಮಟ್ಟಿ, ಗಂಭ್ಯಾಪೃ,ಲಿಂಗನಕೊಪ್ಪ, ಜಮ್ಮಿಹಾಳ, ಗುಡಿಹಾಳ ಗ್ರಾಮಗಳ ಮನೆ ಮನೆಗೆ ತೆರಳಿ ಮತಯಾಚಿಸಿ ಮಾತನಾಡಿ ಕ್ಷೇತ್ರದಲ್ಲಿ

Vijaya Karnataka 28 Apr 2018, 5:00 am
ಕಲಘಟಗಿ :ಕಾಂಗ್ರೆಸ್‌ ಅಭ್ಯರ್ಥಿ ಕಾರ್ಮಿಕ ಸಚಿವ ಸಂತೋಷ ಲಾಡ್‌ ವಿವಿಧ ಗ್ರಾಮಗಳಿಗೆ ತೆರಳಿ ಬಿರುಸಿನ ಪ್ರಚಾರ ಕೈಗೊಂಡರು.
Vijaya Karnataka Web kalaghatgi the lad campaign
ಕಲಘಟಗಿ: ಲಾಡ್‌ ತುರುಸಿನ ಪ್ರಚಾರ

ಅವರು ತಾಲೂಕಿನ ತುಮರಿಕೊಪ್ಪ, ಹುಲ್ಲಂಬಿ, ಹಸರಂಬಿ,ಅರೆಬಸನಕೊಪ್ಪ,ಶಿಗ್ಗಟ್ಟಿ,ಶಿಗ್ಗಟ್ಟುಡೆ, ಮುತ್ತಗಿ, ಎಮ್ಮಟ್ಟಿ, ಗಂಭ್ಯಾಪೃ,ಲಿಂಗನಕೊಪ್ಪ, ಜಮ್ಮಿಹಾಳ, ಗುಡಿಹಾಳ ಗ್ರಾಮಗಳ ಮನೆ ಮನೆಗೆ ತೆರಳಿ ಮತಯಾಚಿಸಿ ಮಾತನಾಡಿ ಕ್ಷೇತ್ರದಲ್ಲಿ ಅಭಿವೃದ್ದಿ ಮಾಡಿರುವ ತೃಪ್ತಿ ನನಗಿದ್ದು ಕ್ಷೇತ್ರದ ಜನರು ನನಗೆ ಆಶಿರ್ವದಿಸಲಿದ್ದು ಜನರ ಋುಣತೀರಿಸುವ ಕಾರ್ಯ ಮಾಡುವದಾಗಿ ತಿಳಿಸಿದ ಅವರು ತಾಲೂಕಿನ ದಶಕಗಳ ಬೇಡಿಕೆಯಾದ ಬಸ್‌ ಡಿಪೋ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಮತಕ್ಷೇತ್ರದಲ್ಲಿ ಲೋಕೊಪಯೋಗಿ ರಸ್ತೆಗಳನ್ನು ಅಭಿವೃದ್ಧಿ ಪಡಿಸಿ ಸಂಚಾರಯೋಗ್ಯ ರಸ್ತೆಗಳನ್ನಾಗಿ ಪರಿವರ್ತಿಸಲಾಗಿದೆ ಎಂದರು.ಈ ಸಂದರ್ಭದಲ್ಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಂಜುನಾಥ ಮುರಳ್ಳಿ, ತಾ.ಪಂ ಸದಸ್ಯೆ ಬಸವ್ವ ಮುಗಣ್ಣವರ, ನಿಂಗಪ್ಪ ಬೆಳ್ಳಿವಾಲಿ, ಪ್ರಭು ರಾಮನಾಳ,ವೈ ಬಿ ದಾಸನಕೊಪ್ಪ,ಶಂಕ್ರಪ್ಪ ಸಾದರ, ಬಸವರಾಜ ಬಿಸರಳ್ಳಿ, ಸದಾಶಿವ ರಾಮನಾಳ, ಸಿದ್ದು ತಲಬಾಗಿಲ,ಬಸವರಾಜ ಬಡಿಗೇರ, ಸಿದ್ದಪ್ಪ ಪಟ್ಟಣಶೇಟ್ಟಿ, ಶಿವಲಿಂಗ ಮುಗಣ್ಣವರ, ಸೋಮಶೇಕರ ಬೆನ್ನುರ, ಬಾಬು ಅಂಚಟಗೇರಿ ಅಭಿಮಾನಿಗಳು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ