ಆ್ಯಪ್ನಗರ

ಕಳಸಾ ಬಂಡೂರಿ ಹೋರಾಟಗಾರ ಸಾವು

ಅನಾರೋಗ್ಯದಿಂದ ಬಳಲುತ್ತಿದ್ದ ಮಹದಾಯಿ ಹೋರಾಟಗಾರ ಕಲ್ಲಪ್ಪ ದೇವಪ್ಪ ಅಳಗವಾಡಿ ಅವರು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.

ವಿಕ ಸುದ್ದಿಲೋಕ 1 Mar 2017, 3:45 pm
ಹುಬ್ಬಳ್ಳಿ: ಅನಾರೋಗ್ಯದಿಂದ ಬಳಲುತ್ತಿದ್ದ ಮಹದಾಯಿ ಹೋರಾಟಗಾರ ಕಲ್ಲಪ್ಪ ದೇವಪ್ಪ ಅಳಗವಾಡಿ ಅವರು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.
Vijaya Karnataka Web kalasa banduri fighters death
ಕಳಸಾ ಬಂಡೂರಿ ಹೋರಾಟಗಾರ ಸಾವು


ಕೆಲ ದಿನಗಳಿಂದ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಇವರು ಎಸ್‌ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಕಳೆದ ಬಾರಿ ನಡೆದ ಮಹದಾಯಿ ಹೋರಾಟದಲ್ಲಿ ಅಳಗವಾಡಿ ಗ್ರಾಮದ ಕಲ್ಲಪ್ಪ ದೇವಪ್ಪ ಅಳಗವಾಡಿ(49) ಅವರು ಸಹ ಬಂಧನವಾಗಿದ್ದು, ಹದಿನೈದು ದಿನ ಚಿತ್ರದುರ್ಗದಲ್ಲಿ ಜೈಲುವಾಸ ಅನುಭವಿಸಿದ್ದರು.

ಪೊಲೀಸರ ಹಲ್ಲೆಯಿಂದಲೇ ಕಲ್ಲಪ್ಪ ಅಳಗವಾಡಿ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ನವಲಗುಂದ ರೈತ ಭವನದಲ್ಲಿ ಶವವಿಟ್ಟು ಪ್ರತಿಭಟನೆ ನಡೆಸಲಾಯಿತು. ಹೋರಾಟಗಾರನ ಸಾವಿನ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ಏರ್ಪಡಿಸಲಾಗಿದೆ.

ಹೋರಾಟಗಾರನ ಸಾವಿಗೆ ಕಂಬನಿ ಮಿಡಿದ ಜೆಡಿಎಸ್ ಶಾಸಕ ಎನ್.ಎಚ್.ಕೋನರೆಡ್ಡಿ, ಹೋರಾಟಗಾರನ ಕುಟುಂಬಕ್ಕೆ ಒಂದು ಲಕ್ಷ ಪರಿಹಾರದ ಜೊತೆಗೆ ಅಂತ್ಯಕ್ರಿಯೆಗೆ 20 ಸಾವಿರ ಧನಸಹಾಯ ಘೋಷಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ