ಆ್ಯಪ್ನಗರ

ಕರೋಕೆ ಗಾಯನ ಸ್ಪರ್ಧೆ ವಿಜೇತರು

ಧಾರವಾಡ : ನಗರದ ರಂಗಾಯಣದ ಸುವರ್ಣ ಸಮುಚ್ಛಯ ಸಭಾಂಗಣದಲ್ಲಿ ಪ್ರಿಮಿಯರ್‌ ಸಿಟಿಜನ್ಸ್‌ ಕ್ಲಬ್‌ ದಿ. ಜಾನಕಿ ಜೋಶಿ ಸ್ಮರಣಾರ್ಥ ಕರೋಕೆ ಚಲನಚಿತ್ರ ಗಾಯನ ಸ್ಪರ್ಧೆ ನಡೆಸಲಾಯಿತು.

Vijaya Karnataka 15 Feb 2019, 5:00 am
ಧಾರವಾಡ : ನಗರದ ರಂಗಾಯಣದ ಸುವರ್ಣ ಸಮುಚ್ಛಯ ಸಭಾಂಗಣದಲ್ಲಿ ಪ್ರಿಮಿಯರ್‌ ಸಿಟಿಜನ್ಸ್‌ ಕ್ಲಬ್‌ ದಿ. ಜಾನಕಿ ಜೋಶಿ ಸ್ಮರಣಾರ್ಥ ಕರೋಕೆ ಚಲನಚಿತ್ರ ಗಾಯನ ಸ್ಪರ್ಧೆ ನಡೆಸಲಾಯಿತು.
Vijaya Karnataka Web karaoke vocal competition winners
ಕರೋಕೆ ಗಾಯನ ಸ್ಪರ್ಧೆ ವಿಜೇತರು


ಕರೋಕೆ ಚಲನಚಿತ್ರ ಗಾಯನÜ ಸ್ಪರ್ಧೆಯಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ 1975ಕ್ಕೂ ಪೂರ್ವದಲ್ಲಿ ಬಿಡುಗಡೆಯಾದ ಹಿಂದಿ ಚಲನಚಿತ್ರ ಗೀತೆಗಳ ಸ್ಪರ್ಧೆಯಲ್ಲಿ ನಗರದ ಅನೇಕ ಮಹಾವಿದ್ಯಾಲಯಗಳಿಂದ 25ಕ್ಕೂ ಹೆಚ್ಚು ಕಲಾವಿದರು ಪಾಲ್ಗೊಂಡಿದ್ದರು.

ಅಂತಿಮವಾಗಿ ಪ್ರಶಸ್ತಿಗೆ ಮುತ್ತಿಟ್ಟವರು ಜೆಎಸ್‌ಎಸ್‌ ಕಾಲೇಜಿನ ಹರೀಶ್‌ ಅಬ್ಬಿಗೇರಿ (ಪ್ರ), ಕರ್ನಾಟಕ ಕಾಲೇಜಿನ ಮೇಘಾ ಕೊತ್ವಾಲ್‌ (ದ್ವಿ), ಜೆಎಸ್‌ಎಸ್‌ ಕಾಲೇಜಿನ ಸ್ನೇಹಾ ಪೊರವಾಲ್‌ (ತೃ) ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ, ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ಸಂಗೀತಗಾರ ಶ್ರೀನಿವಾಸ ಜೋಶಿ ಹಾಗೂ ಜಗದೀಶ್‌ ಮಳಗಿ ಸ್ಪರ್ಧೆಯ ನಿರ್ಣಾಯಕರಾಗಿದ್ದರು. ರಾಮಚಂದ್ರ ಜೋಶಿ, ಕ್ಲಬ್‌ನ ಅಧ್ಯಕ್ಷ ಸಿ.ಎಸ್‌. ಅಂಗಡಿ, ಕಾರ್ಯದರ್ಶಿ ಸುಧೀಂದ್ರ ಜಾಲಿಹಾಳ, ಸಂಘಟಕ ರಮೇಶ ತಂಡಿ ಸೇರಿದಂತೆ ಕ್ಲಬ್‌ನ ಸದಸ್ಯರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ