ಆ್ಯಪ್ನಗರ

ಕಾರ್ನಾಡ್‌ ಅಗಲಿಕೆಗೆ ಸಂತಾಪದ ಮಹಾಪೂರ

ಹುಬ್ಬಳ್ಳಿ : ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ನಾಟಕಕಾರ, ಸಾಹಿತಿ, ನಟ, ನಿರ್ದೇಶಕ ಡಾ. ಗಿರೀಶ್‌ ಕಾರ್ನಾಡ್‌ ಅವರ ನಿಧನಕ್ಕೆ ಅವಳಿ ನಗರದ ಜನಪ್ರತಿನಿಧಿಗಳು, ಸಾಹಿತಿಗಳು, ಕಲಾವಿದರು ಹಾಗೂ ವಿವಿಧ ಸಂಘ ಸಂಸ್ಥೆಗಳು ತೀವ್ರ ಸಂತಾಪವನ್ನು ಸೂಚಿಸಿವೆ.

Vijaya Karnataka 11 Jun 2019, 5:00 am
ಹುಬ್ಬಳ್ಳಿ : ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ನಾಟಕಕಾರ, ಸಾಹಿತಿ, ನಟ, ನಿರ್ದೇಶಕ ಡಾ. ಗಿರೀಶ್‌ ಕಾರ್ನಾಡ್‌ ಅವರ ನಿಧನಕ್ಕೆ ಅವಳಿ ನಗರದ ಜನಪ್ರತಿನಿಧಿಗಳು, ಸಾಹಿತಿಗಳು, ಕಲಾವಿದರು ಹಾಗೂ ವಿವಿಧ ಸಂಘ ಸಂಸ್ಥೆಗಳು ತೀವ್ರ ಸಂತಾಪವನ್ನು ಸೂಚಿಸಿವೆ.
Vijaya Karnataka Web DRW-Girish Karnad 1


ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್‌ ಮತ್ತು ಚಿಂತನ ವೇದಿಕೆ ಶ್ರದ್ಧಾಂಜಲಿ ಸಭೆ ನಡೆಸಿ ಡಾ.ಗಿರೀಶ ಕಾರ್ನಾಡ್‌ ಅವರ ಅಗಲಿಕೆಯಿಂದ ಕನ್ನಡ ಸೇರಿದಂತೆ ಭಾರತ ಸಾಹಿತ್ಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದೆ.

ವೇದಿಕೆ ಅಧ್ಯಕ್ಷ ಕೃಷ್ಣಮೂರ್ತಿ ಕುಲಕರ್ಣಿ, ನಿರ್ದೇಶಕ ಚನ್ನಬಸಪ್ಪ ಧಾರವಾಡಶೆಟ್ರು, ಪದ್ಮಜಾ ಉಮರ್ಜಿ, ಶಂಕರ ಕುಂಬಿ ಸೇರಿದಂತೆ ಅನೇಕರು ಡಾ. ಕಾರ್ನಾಡ್‌ ಬದುಕು ಬರಹ ಕುರಿತು ಅನಿಸಿಕೆ ಹಂಚಿಕೊಂಡರು. ಮೃತರ ಆತ್ಮಕ್ಕೆ ಶ್ರದ್ಧಾಂಜಲಿ ಸಲ್ಲಿಸಿ ಮೌನಾಚರಣೆ ಮಾಡಲಾಯಿತು.

ಚೇಂಬರ ಆಫ್‌ ಕಾಮರ್ಸ್‌ ಸಂತಾಪ

ಗಿರೀಶ ಕಾರ್ನಡ್‌ ಅವರ ನಿಧನದಿಂದ ಸಾಹಿತ್ಯ ಲೋಕಕ್ಕೆ ಹಾಗೂ ಸಮಾಜಕ್ಕೆ ತುಂಬಲಾರದ ಹಾನಿಯಾಗಿದೆ. ಕಾರ್ನಡ್‌ ಅವರು ಕನ್ನಡ ಸಾಹಿತ್ಯ ಲೋಕ ಕಂಡ ಅದ್ಭುತ ನಾಟಕಕಾರ, ಸಾಹಿತಿ, ಚಿತ್ರನಟ ಮತ್ತು ನಿರ್ದೇಶಕರಾಗಿ ತಮ್ಮ ಜೀವನವನ್ನು ಸಾರ್ಥಕಗೊಳಿಸಾದ್ದಾರೆ ಎಂದು ಚೇಂಬರ್‌ ಆಫ್‌ ಕಾಮರ್ಸ್‌ನ ಅಧ್ಯಕ್ಷ ವಿ. ಪಿ. ಲಿಂಗನಗೌಡರ, ಉಪಾಧ್ಯಕ್ಷ ರಾದ ಮಹೇಂದ್ರ ಲದ್ಧಡ, ಅಶೋಕ ತೋಳನವರ, ಜಿ.ಕೆ.ಆದಪ್ಪಗೌಡರ , ವಿನಯ ಜೆ. ಜವಳಿ, ,ಅಶೋಕ ಗಡಾದ, ಸಿ.ಬಿ.ಪಾಟೀಲ, ಡಿ.ಎಸ್‌.ಗುಡ್ಡೋಡಗಿ, ಶಂಕರಣ್ಣ ಮುನವಳ್ಳಿ, ಎಂ.ಸಿ.ಹಿರೇಮಠ, ಎನ್‌.ಪಿ.ಜವಳಿ, ವಸಂತ ಲದವಾ, ರಮೇಶ ಎ.ಪಾಟೀಲ ಹಾಗೂ ಸಂಸ್ಥೆಯ ಎಲ್ಲ ಸದಸ್ಯರು ಮೃತರ ಆತ್ಮಕ್ಕೆ ಪರಮಾತ್ಮನು ಚಿರಶಾಂತಿಯನ್ನೀಯಲಿ ನೀಡಲಿ ಎಂದು ದು:ಖಸೂಚಕ ಸಂದೇಶದಲ್ಲಿ ತಿಳಿಸಿದ್ದಾರೆ.

ಬಸವ ಕೇಂದ್ರ ಶ್ರದ್ಧಾಂಜಲಿ

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ರಂಗಭೂಮಿ ಶ್ರೇಷ್ಟ ಕಲಾವಿದ ಗಿರೀಶ ಕಾರ್ನಾಡ ಅವರ ನಿಧನಕ್ಕೆ ಬಸವ ಪರಿಸರ ಸಂರಕ್ಷ ಣಾ ಸಮಿತಿಯ ಕಾರ್ಯದರ್ಶಿ, ಸುರೇಶ ಡಿ. ಹೊರಕೇರಿ, ಪ್ರೊ ಎಸ್‌.ಎಂ.ಸಾತ್ಮಾರ, ಡಾ. ಬಿ.ವಿ.ಶಿರೂರ, ಡಾ. ಮಹೇಶ ಡಿ.ಹೊರಕೇರಿ, ಡಾ. ವಿ.ಬಿ.ನಿಟಾಲಿ, ಸಾಹಿತಿ ಪ್ರೊ ಎಸ್‌.ವಿ.ಪಟ್ಟಣಶೆಟ್ಟಿ,ಮೃತ್ಯುಂಜಯ ಮಟ್ಟಿ, ಡಾ.ಬಸವಕುಮಾರ ತಲವಾಯಿ, ಸುವರ್ಣಲತಾ ಗದಿಗೆಪ್ಪಗೌಡರ, ಡಾ.ಸರ್ವಮಂಗಳಾ ಕುದರಿ, ಮುಂತಾದವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಜೆ.ಕೆ.ಸ್ಕೂಲ್‌ ಸಂತಾಪ

ಗಿರೀಶ ಕಾರ್ನಾಡರವರ ನಿಧನದಿಂದ ಸಾರಸ್ವತ ಜಗತ್ತಿಗೆ ತುಂಬಲಾರದಂತಹ ನಷ್ಟವಾಗಿದೆ. ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲೆಂದು ಭಗವಂತನಲ್ಲಿ ಜೆ.ಕೆ.ಸ್ಕೂಲ್‌ ಚೇರಮನ್‌ ಜಗದೀಶ ಕಲ್ಯಾಣ ಶೆಟ್ಟರ, ಪ್ರಾಂಶುಪಾಲರು, ಶಿಕ್ಷ ಕವೃಂದ ಹಾಗೂ ಮಕ್ಕಳು ಪ್ರಾರ್ಥಿಸಿದ್ದಾರೆ.

ಐಜಿ ಸನದಿ ಶೋಕ ಸಂದೇಶ

ಗಿರೀಶ್‌ ಕಾರ್ನಾಡ ಅವರು ತಮ್ಮದೇ ಆದ ಮಾತಿನ ಶೈಲಿ ಹಾಗೂ ನಟನಾ ಕೌಶಲ ಮೂಲಕ ಭಾರತೀಯ ರಂಗಭೂಮಿ ಹಾಗೂ ಚಿತ್ರ ರಂಗದಲ್ಲಿ ಹೊಸ ಛಾಪನ್ನು ಮೂಡಿಸಿದ್ದರು. ಅವರ ಅಗಲಿಕೆಯಿಂದ ಇವರ ನಿಧನದಿಂದ ಕನ್ನಡ ಸಾರಸ್ವತ ಲೋಕವು ಒಬ್ಬ ದೊಡ್ಡ ಜ್ಞಾನಿಯನ್ನು ಕಳೆದುಕೊಂಡಂತಾಗಿದೆ ಎಂದು ಮಾಜಿ ಸಂಸದ ಪ್ರೊ.ಐ.ಜಿ.ಸನದಿ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಬಾಬುರಾವ್‌ ಹಾನಗಲ್‌ ಸಂತಾಪ

ಜ್ಞಾನಪೀಠ ಪುರಸ್ಕೃತ ನಾಟಕಕಾರ ಡಾ.ಗಿರೀಶ ಕಾರ್ನಾಡ್‌ ಅವರ ನಿಧನದಿಂದ ಸಾಹಿತ್ಯಿಕ, ಸಾಂಸ್ಕೃತಿಕ ಲೋಕ ಬಡವಾಗಿದೆ. ಅವರ ಆತ್ಮಕ್ಕೆ ದೇವರು ಚಿರಶಾಂತಿ ನೀಡಲೆಂದು ಡಾ.ಗಂಗೂಬಾಯಿ ಹಾನಗಲ್‌ ಅವರ ಮಗ ಬಾಬುರಾವ್‌ ಹಾನಗಲ್‌ ತೀವ್ರ ಸಂತಾಪ ಸೂಚಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ