ಆ್ಯಪ್ನಗರ

ವೀಕೆಂಡ್‌ ಕರ್ಫ್ಯೂ ರದ್ಧು, ವ್ಯಾಪಾರ ವಹಿವಾಟಿಗೆ ಕಳೆ; ಹುಬ್ಬಳ್ಳಿ -ಧಾರವಾಡ ಮಾರ್ಕೆಟ್ ನಲ್ಲಿ ಭಾರಿ ಜನಸಂದಣಿ!

ವೀಕೆಂಡ್‌ ಕರ್ಫ್ಯೂ ಹಿನ್ನೆಲೆಯಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಮಾರುಕಟ್ಟೆಗಳಲ್ಲಿ ಜನರಿಲ್ಲದೇ, ಬಣಗುಡುತ್ತಿದ್ದವು. ಗ್ರಾಹಕರಿಲ್ಲದೇ, ವ್ಯಾಪಾರಸ್ಥರು ಕೂಡಾ ಆರ್ಥಿಕ ತೊಂದರೆ ಅನುಭವಿಸುವಂತಾಗಿತ್ತು. ಕರ್ಫ್ಯೂ ರದ್ದತಿಯಿಂದಾಗಿ ಮತ್ತೇ ಮಾರುಕಟ್ಟೆಗಳಿಗೆ ಹೊಸ ಕಳೆ ಬಂದಂತಾಗಿದ್ದು, ಗ್ರಾಹಕರು ತಮ್ಮ ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದ ದೃಶ್ಯಗಳು ಅಲ್ಲಲ್ಲಿ ಕಂಡು ಬಂದವು.

Vijaya Karnataka Web 23 Jan 2022, 12:56 pm
ಹುಬ್ಬಳ್ಳಿ/ಧಾರವಾಡ: ರಾಜ್ಯ ಸರಕಾರ ಕೋವಿಡ್‌ ಕಾರಣಕ್ಕೆ ಘೋಷಿಸಿದ ವೀಕೆಂಡ್‌ ಕರ್ಫ್ಯೂ ರದ್ದುಗೊಳಿಸಿದ್ದರಿಂದ ಹುಬ್ಬಳ್ಳಿ-ಧಾರವಾಡದಲ್ಲಿ ಜನಜೀವನ, ವ್ಯಾಪಾರ-ವಹಿವಾಟುಗಳು ಎಂದಿನಂತೆ ಕಂಡು ಬಂದಿತು.
Vijaya Karnataka Web ಸಂತೆ
ಸಾಂದರ್ಭಿಕ ಚಿತ್ರ

ಹುಬ್ಬಳ್ಳಿಯ ದುರ್ಗದ ಬೈಲ್‌, ಕೊಪ್ಪೀಕರ ರಸ್ತೆ, ಸ್ಟೇಶನ್‌ ರಸ್ತೆ, ಚೆನ್ನಮ್ಮ ಸರ್ಕಲ್‌ ಹಾಗೂ ಧಾರವಾಡದ ಲೈನ್‌ ಬಝಾರ್‌, ಸುಭಾಷ ರಸ್ತೆ, ಸಪ್ತಾಪುರ, ಎಮ್ಮಿಕೇರಿ, ಕೋರ್ಟ್‌ ಸರ್ಕಲ್‌ ಸೇರಿದಂತೆ ಹಲವೆಡೆ ಎಂದಿನಂತೆ ಜನದಟ್ಟಣೆ ಕಂಡು ಬಂದಿತು.

ಮೊದಲೇ ವ್ಯಾಪಾರವಿಲ್ಲದೇ ಬಣಗುಡುತ್ತಿದ್ದ ಅಟೊಮೊಬೈಲ್‌, ಶೋರೂಮ್‌ಗಳು ಹಾಗೂ ಹೋಟೆಲ್‌, ಮದ್ಯದ ಅಂಗಡಿಗಳ ಮಾಲೀಕರು ವೀಕೆಂಡ್‌ ಕರ್ಫ್ಯೂಗೆ ಒಕ್ಕೊರಲಿನಿಂದ ವಿರೋಧಿಸಿದ್ದರು. ಎಲ್ಲೆಡೆ ಸಾಕಷ್ಟು ವಿರೋಧ ವ್ಯಕ್ತವಾದ ಹಿನ್ನಲೆ ಹಾಗೂ ಕೋವಿಡ್‌ ಪ್ರಕರಣದಲ್ಲಿ ಕೊಂಚ ಇಳಿಕೆ ಕಂಡ ಕಾರಣಕ್ಕೆ ಸರಕಾರ ವೀಕೆಂಡ್‌ ಕರ್ಫ್ಯೂವನ್ನು ಹಿಂತೆಗೆದುಕೊಂಡಿತು. ವೀಕೆಂಡ್‌ ಕರ್ಫ್ಯೂಗೆ ಮೊದಲಿನಿಂದಲೂ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದ ಮಧ್ಯಮ ವರ್ಗದವರು, ಕೂಲಿ ಕಾರ್ಮಿಕರು ಹಾಗೂ ವ್ಯಾಪಾರಸ್ಥರು ಕರ್ಫ್ಯೂ ರದ್ದತಿಯಿಂದಾಗಿ ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. ಎಂದಿನಂತೆ ತಮ್ಮ ದೈನಂದಿನ ಕೆಲಸದಲ್ಲಿ ತೊಡಗಿಕೊಳ್ಳುವಂತಾಯಿತು.

ಮಾರುಕಟ್ಟೆಗೆ ಹೊಸ ಕಳೆ
ವೀಕೆಂಡ್‌ ಕರ್ಫ್ಯೂ ಹಿನ್ನೆಲೆಯಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಮಾರುಕಟ್ಟೆಗಳಲ್ಲಿ ಜನರಿಲ್ಲದೇ, ಬಣಗುಡುತ್ತಿದ್ದವು. ಗ್ರಾಹಕರಿಲ್ಲದೇ, ವ್ಯಾಪಾರಸ್ಥರು ಕೂಡಾ ಆರ್ಥಿಕ ತೊಂದರೆ ಅನುಭವಿಸುವಂತಾಗಿತ್ತು. ಕರ್ಫ್ಯೂ ರದ್ದತಿಯಿಂದಾಗಿ ಮತ್ತೇ ಮಾರುಕಟ್ಟೆಗಳಿಗೆ ಹೊಸ ಕಳೆ ಬಂದಂತಾಗಿದ್ದು, ಗ್ರಾಹಕರು ತಮ್ಮ ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದ ದೃಶ್ಯಗಳು ಅಲ್ಲಲ್ಲಿ ಕಂಡು ಬಂದವು. ಅವಳಿ ನಗರದ ಬಹುತೇಕ ಜನರು ವಾರದ ಕೊನೆಯ ದಿನವಾದ ಭಾನುವಾರವೇ ಮಾರುಕಟ್ಟೆಗೆ ಹೋಗಿ ಕಾಯಿ ಪಲ್ಲೆ, ದಿನಸಿ ವಸ್ತುಗಳು ಹಾಗೂ ವಾರಕ್ಕೆ ಆಗುವಷ್ಟು ಮೊಟ್ಟೆ, ಮಾಂಸವನ್ನು ಖರೀದಿಸುವುದು ರೂಢಿ. ಆದರೆ ವೀಕೆಂಡ್‌ ಕರ್ಫ್ಯೂ ಘೋಷಣೆಯಾಗಿದ್ದರಿಂದ ಅದಕ್ಕೆ ತಡೆ ಉಂಟಾಗಿತ್ತು. ಈಗ ಸರಕಾರ ಕರ್ಫ್ಯೂ ವಾಪಸ್‌ ಪಡೆದ ಹಿನ್ನಲೆ ಗ್ರಾಹಕರು ಮತ್ತೇ ಮಾರುಕಟ್ಟೆಗೆ ಆಗಮಿಸಿ ಖರೀದಿ ನಡೆಸಿದರು.

ದ್ವಿಚಕ್ರವಾಹನ, ಕಾರು ಶೂರೂಂ, ಅಟೊಮೊಬೈಲ್‌ ಅಂಗಡಿ, ಜವಳಿ, ದಿನಸಿ ವಸ್ತುಗಳ ಮಳಿಗೆ ಹಾಗೂ ಚಿನ್ನಾಭರಣ ಅಂಗಡಿಗಳಲ್ಲಿ ಜನ ದಟ್ಟಣೆ ಕಂಡು ಬಂದಿತು. ಉಳಿದಂತೆ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌, ಹೊಟೇಲ್‌ಗಳಲ್ಲಿಯೂ ಗ್ರಾಹಕರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿತು. ವೀಕೆಂಡ್‌ ಕರ್ಫ್ಯೂ ರದ್ದುಗೊಳಿಸಿರುವ ಸರಕಾರಕ್ಕೆ ಹಾಗೂ ಜಿಲ್ಲಾಡಳಿತಕ್ಕೆ ವ್ಯಾಪಾರಸ್ಥರ ಸಂಘವು ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದೆ.
ಬೆಂಗಳೂರಿನಲ್ಲಿ ಜ.31ರ ವರೆಗೆ ನಿಷೇಧಾಜ್ಞೆ ಜಾರಿ, ನೈಟ್‌ ಕರ್ಫ್ಯೂ ಮುಂದುವರಿಕೆ : ಕಮಲ್ ಪಂತ್
ವೀಕೆಂಡ್‌ ಕರ್ಫ್ಯೂ ರದ್ದತಿಯಿಂದ ಹೋಟೆಲ್‌ ಸೇರಿದಂತೆ ಎಲ್ಲ ವ್ಯಾಪಾರಸ್ಥರಿಗೂ ಬಹಳಷ್ಟು ಅನುಕೂಲವಾಗುವಂತಾಗಿದೆ. ವ್ಯಾಪಾರಸ್ಥರ ಕಷ್ಟಕ್ಕೆ ಸ್ಪಂದಿಸಿ ಸಿಎಂ ಬಸವರಾಜ ಬೊಮ್ಮಾಯಿಯವರು ವೀಕೆಂಡ್‌ ಕರ್ಫ್ಯೂ ರದ್ದುಗೊಳಿಸಿರುವುದಕ್ಕೆ ಉದ್ಯಮಿಗಳ ಪರವಾಗಿ ಧನ್ಯವಾದ ಸಲ್ಲಿಸುತ್ತೇವೆ.
ಸುಗ್ಗಿ ಸುಧಾಕರ್‌ ಶೆಟ್ಟಿ, ಹು-ಧಾ ಬಂಟರ್‌ ಸಂಘದ ಉಪಾಧ್ಯಕ್ಷ

ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ಮಾಲೀಕರಿಗೆ ವೀಕೆಂಡ್‌ ಕರ್ಫ್ಯೂ ರದ್ದತಿಯಿಂದ ಕೊಂಚ ನಿಟ್ಟುಸಿರು ಬಿಡುವಂತಾಗಿದೆ. ಪ್ರತಿಯೊಬ್ಬರು ಕೋವಿಡ್‌ ನಿಯಮಾವಳಿಯನ್ನು ಪಾಲಿಸುವ ಮೂಲಕ ವ್ಯಾಪಾರ-ವಹಿವಾಟು ನಡೆಸಿಕೊಂಡು ಹೋಗಬೇಕು.
ದೀಪಕ್‌ ಮುಗಜಿಕೊಂಡಿ, ಅಧ್ಯಕ್ಷರು, ಹುಬ್ಬಳ್ಳಿ ಲಿಕ್ಕರ್‌ ಡಿಲರ್ಸ್ ಅಸೋಸಿಯೇಶನ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ