ಆ್ಯಪ್ನಗರ

ಕರ್ನಾಟಕ ವಿಶ್ವವಿದ್ಯಾಲಯ ; ಆಡಳಿತಾಧಿಕಾರಿ ನೇಮಕಕ್ಕೆ ಆಗ್ರಹ

ಧಾರವಾಡ: ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದಲ್ಲಿಅನೇಕ ನಿಯಮಬಾಹಿರ ಚಟುವಟಿಕೆಗಳು ನಡೆಯುತ್ತಿವೆ. ಇದಕ್ಕೆ ಆಡಳಿತ ವಿಭಾಗದ ಕುಲಸಚಿವರೆ ನೇರ ಹೊಣೆಯಾಗಿದ್ದು, ತಕ್ಷಣವೇ ಅವರನ್ನು ವಜಾ ಮಾಡಿ ಆಡಳಿತಾಧಿಕಾರಿ ನೇಮಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಚಾಲಕ ಲಕ್ಷತ್ರ್ಮಣ ದೊಡ್ಡಮನಿ ಹೇಳಿದರು.

Vijaya Karnataka 8 Aug 2020, 5:00 am
ಧಾರವಾಡ: ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದಲ್ಲಿಅನೇಕ ನಿಯಮಬಾಹಿರ ಚಟುವಟಿಕೆಗಳು ನಡೆಯುತ್ತಿವೆ. ಇದಕ್ಕೆ ಆಡಳಿತ ವಿಭಾಗದ ಕುಲಸಚಿವರೆ ನೇರ ಹೊಣೆಯಾಗಿದ್ದು, ತಕ್ಷಣವೇ ಅವರನ್ನು ವಜಾ ಮಾಡಿ ಆಡಳಿತಾಧಿಕಾರಿ ನೇಮಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಚಾಲಕ ಲಕ್ಷತ್ರ್ಮಣ ದೊಡ್ಡಮನಿ ಹೇಳಿದರು.
Vijaya Karnataka Web kud


ನಗರದಲ್ಲಿಶುಕ್ರವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಕವಿವಿ ಅಧೀನದ ಕಾಲೇಜುಗಳ ಪ್ರಾಚಾರ್ಯರ ಹುದ್ದೆಗಳ ಭರ್ತಿಗೆ ಹೊರಡಿಸಿರುವ ನೋಟಿಫಿಕೇಶನ್‌ಗಳು ಕಾನೂನುಬಾಹಿರವಾಗಿವೆ. ಈ ಹಿಂದೆ ಸಮಿತಿಯು ಯುಜಿಸಿ ಮತ್ತು ಸರಕಾರದ ನಿಯಮಾವಳಿನುಸಾರ ಮತ್ತು ನ್ಯಾಯಯುತ ನೋಟಿಫಿಕೇಶನ್‌ ಹೊರಡಿಸಲು ಆಗ್ರಹಿಸಿತ್ತು. ಆದರೆ, ಈಗ ನಿಯಮಬಾಹಿರವಾಗಿ ಕರ್ನಾಟಕ ವಿಶ್ವವಿದ್ಯಾಲಯದ ಸಂಲಗ್ನ ಕರ್ನಾಟಕ ವಿಜ್ಞಾನ ಕಾಲೇಜು, ಕರ್ನಾಟಕ ಆರ್ಟ್ಸ್ ಕಾಲೇಜು, ಸಂಗೀತ ಮಹಾವಿದ್ಯಾಲಯ, ಕಾನೂನು ಮಹಾವಿದ್ಯಾಲಯ ಮತ್ತು ಶಿಕ್ಷಣ ಮಹಾವಿದ್ಯಾಲಯಗಳ ಪ್ರಾಚಾರ್ಯರ ಹುದ್ದೆಗಳ ನೇಮಕಾತಿಗೆ ನೋಟಿಫೀಕೇಶನ್‌ ಹೊರಡಿಸಿದೆ ಎಂದರು.

ಈ ನೋಟಿಫಿಕೇಶನ್‌ಗಳಲ್ಲಿಎಸ್‌ಸಿ, ಎಸ್‌ಟಿ, ಒಬಿಸಿ, ಅಂಗವಿಲಕರಿಗೆ ಸಂವಿಧಾನರೀತ್ಯ ನೀಡಬೇಕಾದ ಶೇ.5ರ ಸಡಿಲಿಕೆಯನ್ನು ನೀಡಿಲ್ಲ. ಅಲ್ಲದೇ ಉನ್ನತ ಶಿಕ್ಷಣ ಇಲಾಖೆಯ ಅನುಮತಿಯನ್ನು ಕವಿವಿ ಪಡೆದಿಲ್ಲ. ಇದಲ್ಲದೇ ಸೇವಾ ಜೇಷ್ಠತೆ ಮತ್ತು ಅರ್ಹತೆ ಕಡೆಗಣಿಸಿ ನೇಮಕಾತಿಗೆ ಕವಿವಿ ಆಡಳಿತ ಮುಂದಾಗಿದೆ. ಕೊರೊನಾ ಕಾರಣದಿಂದ ಸದ್ಯ ಯಾವುದೇ ನೇಮಕಾತಿ ಮಾಡಬಾರದು ಎಂದು ಸರಕಾರ ತಿಳಿಸಿದ್ದರೂ ಕವಿವಿ ಆಡಳಿತ ಪ್ರಾಚಾರ್ಯರ ಹುದ್ದೆಗಳ ನೇಮಕಾತಿ ಮಾಡಲು ಮುಂದಾಗಿರುವುದನ್ನು ಸಮಿತಿ ಖಂಡಿಸುತ್ತದೆ ಎಂದರು.

ವಿಶ್ವವಿದ್ಯಾಲಯ ಕೂಡಲೇ ಈ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಳಿಸದಿದ್ದರೆ ರಾಜಭವನ ಚಲೋ ಹಮ್ಮಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದರು. ನಾರಾಯಣ ಮಾದರ, ಪ್ರಕಾಶ ಹೂಗಾರ, ಲಕ್ಷತ್ರ್ಮಣ ದೊಡ್ಡಮನಿ, ಲಿಂಗರಾಜ ಅದರಖಂಡಿ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ