ಆ್ಯಪ್ನಗರ

ಕಥಕ್‌, ಭರತನಾಟ್ಯ ನೃತ್ಯ ಪ್ರದರ್ಶನ

ಧಾರವಾಡ: ನಗರದ ಸೃಜನಾ ರಂಗಮಂದಿರದಲ್ಲಿಶಾಂತಲಾ ನೃತ್ಯಾಲಯದ 3ನೇ ವಾರ್ಷಿಕೋತ್ಸವದ ನಿಮಿತ್ತ ಅ.19ರಂದು ಸಂಜೆ 5ಕ್ಕೆ 90ಕ್ಕೂ ಹೆಚ್ಚು ವಿದ್ಯಾರ್ಥಿಗಳ ಕಥಕ್‌ ಹಾಗೂ ಭರತನಾಟ್ಯ ನೃತ್ಯ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಶಾಂತಲಾ ನೃತ್ಯಾಲಯದ ವಿದೂಷಿ ವಿಜೇತಾ ವೆರ್ಣೆಕರ ಹೇಳಿದರು.

Vijaya Karnataka 17 Oct 2019, 5:00 am
ಧಾರವಾಡ: ನಗರದ ಸೃಜನಾ ರಂಗಮಂದಿರದಲ್ಲಿಶಾಂತಲಾ ನೃತ್ಯಾಲಯದ 3ನೇ ವಾರ್ಷಿಕೋತ್ಸವದ ನಿಮಿತ್ತ ಅ.19ರಂದು ಸಂಜೆ 5ಕ್ಕೆ 90ಕ್ಕೂ ಹೆಚ್ಚು ವಿದ್ಯಾರ್ಥಿಗಳ ಕಥಕ್‌ ಹಾಗೂ ಭರತನಾಟ್ಯ ನೃತ್ಯ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಶಾಂತಲಾ ನೃತ್ಯಾಲಯದ ವಿದೂಷಿ ವಿಜೇತಾ ವೆರ್ಣೆಕರ ಹೇಳಿದರು.
Vijaya Karnataka Web kathak bharatanatyam dance performance
ಕಥಕ್‌, ಭರತನಾಟ್ಯ ನೃತ್ಯ ಪ್ರದರ್ಶನ


ಬುಧವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಸುಮಾರು 16 ವರ್ಷಗಳಿಂದ ಭರತನಾಟ್ಯ ಹಾಗೂ ಕಥಕ್‌ ನೃತ್ಯವನ್ನು ಕುಮುದಿನಿ ರಾವ್‌ ಗುಣವಂತೆ ಹಾಗೂ ವಿದೂಷಿ ರೋಹಿಣಿ ಇಮಾರತಿ ಬಳಿಯಲ್ಲಿಮತ್ತು ವಿದೂಷಿ ಸಹನಾ ಭಟ್‌ ಅವರಲ್ಲಿಕಲಿತು, ಭರತನಾಟ್ಯದಲ್ಲಿವಿದ್ವತ್‌ ಹಂತದ ನಂತರ, ಕಥಕ್‌ನಲ್ಲಿವಿಶಾರದ ಹಂತ ಪೂರೈಸಿದ್ದೇನೆ. ಬಳಿಕ ಕಥಕ್‌ ಹಾಗೂ ಭರತನಾಟ್ಯ ರಂಗಪ್ರವೇಶ ಮಾಡಿದ್ದು, ಕಳೆದ 3 ವರ್ಷಗಳಿಂದ ನಗರದಲ್ಲಿಶಾಂತಲಾ ನೃತ್ಯಾಲಯ ನಡೆಸುತ್ತಿದ್ದು, ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನೃತ್ಯ ಕಲಿಸಿ ಭಾರತದ ಕಲೆ ಉಳಿಸಿ ಬೆಳೆಸುವ ಪ್ರಯತ್ನದಲ್ಲಿತೊಡಗಿದ್ದೇನೆ ಎಂದರು.

ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಾಯಕ ನಿರ್ದೇಶಕ ಮಂಜುಳಾ ಎಲಿಗಾರ ಉದ್ಘಾಟಿಸುವರು. ವಿದೂಷಿ ಪ್ರಮೋದಾ ಉಪಾಧ್ಯಾಯ, ಸಿಸ್ಟರ್‌ ವೇರೋನಿಕಾ, ಮಾಜಿ ಕಾಪೊರ್‍ರೇಟರ್‌ ನಿರ್ಮಲಾ ಜವಳಿ, ಶ್ರೀಶೈಲ ರಾಚಣ್ಣನವರ ಅತಿಥಿಯಾಗಿ ಆಗಮಿಸುವರು. ಡಾ.ಶಶಿಧರ ನರೇಂದ್ರ ಅಧ್ಯಕ್ಷತೆ ವಹಿಸುವರು ಎಂದರು.

ವಿದ್ವಾನ್‌ ಸದಾಶಿವ ಐಹೊಳೆ, ಬಿ.ಮಂಜುನಾಥ, ಪದಂತ್‌ ವೇರ್ಣೇಕರ ಹಾಡುವರು. ಪರಮೇಶ್ವರ ತೇಲಿ ಹಾರ್ಮೋನಿಯಂ, ಪಂ.ಹರೀಶ ಕುಲಕರ್ಣಿ ಕೊಳಲು, ಉಸ್ತಾದ ನಿಸಾರಅಹಮ್ಮದ ಹಾಗೂ ದಯಾನಂದ ಸುತಾರ ತಬಲಾ ನುಡಿಸುವರು. ಪ್ರವೀಣ ಹೂಗಾರ ಹಾಗೂ ನೂರ್ಜಹಾನ ನಧಾಪ ಸಿತಾರ ವಾದ್ಯಕ್ಕೆ ಸಹಕಾರ ನೀಡಲಿದ್ದಾರೆ. ಪ್ರಸಾದನವನ್ನು ಸಂತೋಷ ಮಹಾಲೆ ಮತ್ತು ವಸ್ತಾ್ರಲಂಕಾರವನ್ನು ಮುಕ್ತಾ ವೆರ್ಣೆಕರ ನಿರ್ವಹಿಸಲಿದ್ದಾರೆ ಎಂದರು.

ಮಂಜುನಾಥ ವೆರ್ಣೆಕರ, ರಾಜೇಶ್ವರಿ ಪೂಜಾರ, ಕವಿತಾ ಕಟ್ಟಿಮನಿ ಮುಕ್ತಾ ವೆರ್ಣೆಕರ, ಸಂತೋಷ ಮಹಾಲೆ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ