ಆ್ಯಪ್ನಗರ

ನಾಳೆಯಿಂದ ‘ಜ್ಞಾನ ಸಂಗಮ-19 ರಾಷ್ಟ್ರೀಯ ಸಮ್ಮೇಳನ’

ಹುಬ್ಬಳ್ಳಿ : ಪ್ರಜ್ಞಾ ಪ್ರವಾಹ ಮತ್ತು ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯ ಆಶ್ರಯದಲ್ಲಿ ಫೆ.14, 15 ರಂದು ನಗರದ ಬಿವಿಬಿ ಬಿಟಿ ಆಡಿಟೋರಿಯಂನಲ್ಲಿ 'ಜ್ಞಾನ ಸಂಗಮ-19 ರಾಷ್ಟ್ರೀಯ ಸಮ್ಮೇಳನ' ನಡೆಯಲಿದೆ.

Vijaya Karnataka 13 Feb 2019, 5:00 am
ಹುಬ್ಬಳ್ಳಿ : ಪ್ರಜ್ಞಾ ಪ್ರವಾಹ ಮತ್ತು ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯ ಆಶ್ರಯದಲ್ಲಿ ಫೆ.14, 15 ರಂದು ನಗರದ ಬಿವಿಬಿ ಬಿಟಿ ಆಡಿಟೋರಿಯಂನಲ್ಲಿ 'ಜ್ಞಾನ ಸಂಗಮ-19 ರಾಷ್ಟ್ರೀಯ ಸಮ್ಮೇಳನ' ನಡೆಯಲಿದೆ.
Vijaya Karnataka Web knowledge conference 19 national conference by tomorrow
ನಾಳೆಯಿಂದ ‘ಜ್ಞಾನ ಸಂಗಮ-19 ರಾಷ್ಟ್ರೀಯ ಸಮ್ಮೇಳನ’


ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ತಿಳಿಸಿದ ಸಮ್ಮೇಳನದ ಸಂಚಾಲಕ ಜಗದೀಶ ಹಿರೇಮಠ, ರಾಷ್ಟ್ರವಾದಿ ಚಿಂತನೆವುಳ್ಳ ಪ್ರಜ್ಞಾ ಪ್ರವಾಹ ಸಂಘಟನೆಯು, ವಿವಿಧ ಕ್ಷೇತ್ರಗಳ ಸಾಧಕರ, ಚಿಂತಕರ, ವಿಜ್ಞಾನಿಗಳ, ಸಂಶೋಧಕರ, ಶಿಕ್ಷಣ ತಜ್ಞರ, ಪ್ರಾಜ್ಞರ ಸಂಘಟನೆಯಾಗಿದ್ದು, ದೇಶದ್ಯಂತ ಉಪನ್ಯಾಸ, ಸಮ್ಮೇಳನಗಳನ್ನು ಆಯೋಜಿಸುತ್ತಿದೆ. ರಾಷ್ಟ್ರೀಯ ಅಸ್ಮಿತೆ ಉಳಿಸಿ ಬೆಳೆಸುವ ಕಾರ್ಯದಲ್ಲಿ ತೊಡಗಿರುವ ಪ್ರಜ್ಞಾ ಪ್ರವಾಹ ಸಂಘಟನೆಯು, ಈ ಭಾರಿ ವಿಜ್ಞಾನ, ತಂತ್ರಜ್ಞಾನ, ಆವಿಷ್ಕಾರ ಮತ್ತು ಉದ್ಯಮಶೀಲತೆ ಕುರಿತು ರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಕೇಂದ್ರ ವಿಜ್ಞಾನ, ತಂತ್ರಜ್ಞಾನ, ಪರಿಸರ, ಅರಣ್ಯ, ಹವಾಮಾನ ಮತ್ತು ಭೂ ವಿಜ್ಞಾನಗಳ ಸಚಿವ ಡಾ.ಹರ್ಷವರ್ಧನ ಸಮ್ಮೇಳನ ಉದ್ಘಾಟಿಸುವರು. ನ್ಯೂಯಾರ್ಕ್‌ನ ಆರ್‌ಐಟಿ ಕಾಲೇಜು ಪ್ರಾಧ್ಯಾಪಕ ಡಾ.ಪಿ.ಆರ್‌.ಮುಕುಂದ ಆಶಯ ಭಾಷಣ ಮಾಡುವರು. ಕೆಎಲ್‌ಇ ತಾಂತ್ರಿಕ ವಿವಿ ಕುಲಪತಿ ಡಾ.ಅಶೋಕ ಶೆಟ್ಟರ್‌, ಕವಿವಿ ಕುಲಪತಿ ಡಾ.ಪ್ರಮೋದ ಗಾಯಿ, ತಾಂತ್ರಿಕ ವಿವಿ ಕುಲಪತಿ ಡಾ.ಕರಿಸಿದ್ದಪ್ಪ ಅತಿಥಿಗಳಾಗಿ ಭಾಗವಹಿಸುವರು.

ಎರಡು ದಿನಗಳ ಸಮ್ಮೇಳನದಲ್ಲಿ ಮೊದಲ ದಿನ ಭಾರತದ ಹಿರಿಮೆ ಕುರಿತು ವಿಜ್ಞಾನ ಭಾರತೀಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಜಯಂತ ಸಹಸ್ರಬುದ್ಧೆ, ಜನೋಪಯೋಗಿ ತಾಂತ್ರಿಕ ಆವಿಷ್ಕಾರಗಳ ಕುರಿತು ಪರಾಗ್‌ ನಾಯ್ಕ, ಸೆಂಥಿಲ್‌ ಕುಮಾರ, ದಿವೇಶ ಶಹಾ, ಅನೂಪ ಭಾರ್ಗವ ಮಾತನಾಡುವರು.

ವಿಜ್ಞಾನ, ತಂತ್ರಜ್ಞಾನ, ಉದ್ಯಮದಲ್ಲಿ ಹೊಸತನ ಮತ್ತು ಆವಿಷ್ಕಾರ ಬಗ್ಗೆ ಕೆ.ಎಸ್‌.ಕಿರಣಕುಮಾರ, ವಿಶಾಲ ಕೇಳ್ಕರ ಹಾಗೂ ಭಾರತೀಯ ಸಂಗೀತ ಮತ್ತು ನಾಟ್ಯಶಾಸ್ತ್ರದ ವಿಜ್ಞಾನ ಬಗ್ಗೆ ಪ್ರಾತ್ಯಕ್ಷಿಕೆಯೊಂದಿಗೆ ಕವಿವಿ ಪ್ರಾಧ್ಯಾಪಕ ಡಾ.ಶಾಂತಾರಾಮ ಹೆಗಡೆ, ಸಹನಾ ಭಟ್‌ ನಡೆಸಿಕೊಡುವರು ಎಂದು ವಿವರಿಸಿದರು.

ಎರಡನೇ ದಿನ ಫೆ.15 ರಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಆಸಕ್ತರು hಠಿಠಿp:ಜya್ಞsa್ಞಜaಞ.ಜ್ಞಿ/ ಹೆಸರು ನೋಂದಾಯಿಸಿಕೊಳ್ಳಬಹುದು. ಇಲ್ಲವೆ 9880766954, 9886635260 ಮೊಬೈಲ್‌ಗೆ ಸಂಪರ್ಕಿಸಬಹುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂದೀಪ ಬೂದಿಹಾಳ, ಉದ್ಯಮಿ ಶಿವಾನಂದ ಅವಟೆ, ಮನೋಹರ ಜೋಶಿ, ಜನಮೇಜಯ ಜಯಂತ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ