ಆ್ಯಪ್ನಗರ

ಕ್ಷತ್ರೀಯ ಒಕ್ಕೂಟ ಸಂಘಟನೆ ಪದಾಧಿಕಾರಿಗಳ ಪ್ರತಿಭಟನೆ

ಹುಬ್ಬಳ್ಳಿ: ಕಲಘಟಗಿಯಲ್ಲಿಛತ್ರಪತಿ ಶಿವಾಜಿ ಜಯಂತಿಯ ಬ್ಯಾನರ್‌ ಹರಿದು ಹಾಕಿದ ದುಷ್ಕರ್ಮಿಗಳನ್ನು ಒಂದು ವಾರದಲ್ಲಿಬಂಧಿಸಬೇಕೆಂದು ಒತ್ತಾಯಿಸಿ ಕರ್ನಾಟಕ ಕ್ಷತ್ರಿಯ ಒಕ್ಕೂಟ ಸಂಘಟನೆ ಪದಾಧಿಕಾರಿಗಳು ಇಲ್ಲಿನ ಮಿನಿ ವಿಧಾನಸೌಧದ ಎದುರು ಸೋಮವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.

Vijaya Karnataka 17 Mar 2020, 5:00 am
ಹುಬ್ಬಳ್ಳಿ: ಕಲಘಟಗಿಯಲ್ಲಿಛತ್ರಪತಿ ಶಿವಾಜಿ ಜಯಂತಿಯ ಬ್ಯಾನರ್‌ ಹರಿದು ಹಾಕಿದ ದುಷ್ಕರ್ಮಿಗಳನ್ನು ಒಂದು ವಾರದಲ್ಲಿಬಂಧಿಸಬೇಕೆಂದು ಒತ್ತಾಯಿಸಿ ಕರ್ನಾಟಕ ಕ್ಷತ್ರಿಯ ಒಕ್ಕೂಟ ಸಂಘಟನೆ ಪದಾಧಿಕಾರಿಗಳು ಇಲ್ಲಿನ ಮಿನಿ ವಿಧಾನಸೌಧದ ಎದುರು ಸೋಮವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
Vijaya Karnataka Web kshatriya federation organizers protest
ಕ್ಷತ್ರೀಯ ಒಕ್ಕೂಟ ಸಂಘಟನೆ ಪದಾಧಿಕಾರಿಗಳ ಪ್ರತಿಭಟನೆ

ಕಳೆದ ವಾರ ಕಲಘಟಗಿಯಲ್ಲಿಛತ್ರಪತಿ ಶಿವಾಜಿ ಜಯಂತ್ಯುತ್ಸವ ಆಚರಣೆ ವೇಳೆ ಕಟ್ಟಲಾಗಿದ್ದ ಬ್ಯಾನರನ್ನು ದುಷ್ಕರ್ಮಿಗಳು ಹರಿದು ಹಾಕಿದ್ದಾರೆ. ಈ ಬಗ್ಗೆ ಸ್ಥಳೀಯ ಆಡಳಿತಕ್ಕೆ ದೂರು ನೀಡಲಾಗಿದ್ದರೂ ಯಾವುದೇ ಕ್ರಮವಾಗಿಲ್ಲ. ಇದರಿಂದ ತೀವ್ರ ಬೇಸರವಾಗಿದೆ. ಇನ್ನೊಂದು ವಾರದಲ್ಲಿದುಷ್ಕರ್ಮಿಗಳನ್ನು ಬಂಧಿಸಿ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು. ಅಲ್ಲದೆ, ಆರೋಪಿಗಳನ್ನು ಗಡಿಪಾರು ಮಾಡಬೇಕು. ಇಲ್ಲದಿದ್ದರೆ, 'ಎಸ್‌ಪಿ ಹಠಾವ್‌ ಶಾಂತಿ ಬಚಾವ್‌' ಘೋಷಣೆಯಡಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ಮಾತನಾಡಿದ ಸಂಘಟನೆ ಹುಬ್ಬಳ್ಳಿ ಶಹರ ಘಟಕ ಅಧ್ಯಕ್ಷ ಹನುಮಂತಸಾ ನಿರಂಜನ, ಯಾವುದೇ ಕಾರಣಕ್ಕೂ ಪ್ರಕರಣ ನಿರ್ಲಕ್ಷಿಸಬಾರದು. ದೇಶದ ಐಕ್ಯತೆಗಾಗಿ ಹೋರಾಡಿದ ಶಿವಾಜಿ ಮಹಾರಾಜರು ಕೇವಲ ಒಂದು ಪ್ರಾಂತಕ್ಕೆ ಸೀಮಿತವಲ್ಲ. ರಾಷ್ಟ್ರ ನಾಯಕನಿಗೆ ಸಲ್ಲಬೇಕಾದ ಗೌರವ ನೀಡಲೇಬೇಕು. ಶಿವಾಜಿ ಕುರಿತಂತೆ ಜನತೆಯಲ್ಲಿಸಾಕಷ್ಟು ಗೌರವ ಭಾವನೆ ಇದ್ದು, ಅದಕ್ಕೆ ಚ್ಯುತಿ ತರುವ ಯತ್ನ ನಡೆಸಿದಾಗ ಸರಕಾರ ಅಗತ್ಯ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿಲಕ್ಷ್ಮಣ ಗಂಡಗಾಳೇಕರ, ನಾರಾಯಣ ವೈದ್ಯ, ಬಸವಂತ ಶಿಂಧೆ, ಕೇಶವ ಯಾದವ, ತ್ರಿವೇಣಿ ಶಿಂಧೆ, ಶ್ರೀನಿವಾಸ ಮುರಗೋಡ, ಸಿ.ಎಲ್‌. ಬಸವಾ ಸೇರಿದಂತೆ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ