ಆ್ಯಪ್ನಗರ

ಶಾಲಾ ಹಂತದಲ್ಲೇ ಕಾನೂನು ಕಲಿಕೆ ಅವಶ್ಯ

ನವಲಗುಂದ: ಶಾಲಾ ಹಂತದಲ್ಲಿಯೇ ಹೆಣ್ಣುಮಕ್ಕಳಿಗೆ ಶಿಕ್ಷಣದ ಜತೆಗೆ ಕಾನೂನು ಅರಿವು ಮೂಡಿಸುವ ಕಾರ್ಯವಾಗಬೇಕಿದ್ದು, ಈ ಮೂಲಕ ಮಹಿಳೆಯರು ತಮ್ಮನ್ನು ರಕ್ಷಣೆ ಮಾಡಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಸ್ಥಳೀಯ ಪಿಎಸ್‌ಐ ಜಯಪಾಲ್‌ ಪಾಟೀಲ್‌ ಅಭಿಪ್ರಾಯ ಪಟ್ಟರು.

Vijaya Karnataka 20 Feb 2020, 5:00 am
ನವಲಗುಂದ: ಶಾಲಾ ಹಂತದಲ್ಲಿಯೇ ಹೆಣ್ಣುಮಕ್ಕಳಿಗೆ ಶಿಕ್ಷಣದ ಜತೆಗೆ ಕಾನೂನು ಅರಿವು ಮೂಡಿಸುವ ಕಾರ್ಯವಾಗಬೇಕಿದ್ದು, ಈ ಮೂಲಕ ಮಹಿಳೆಯರು ತಮ್ಮನ್ನು ರಕ್ಷಣೆ ಮಾಡಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಸ್ಥಳೀಯ ಪಿಎಸ್‌ಐ ಜಯಪಾಲ್‌ ಪಾಟೀಲ್‌ ಅಭಿಪ್ರಾಯ ಪಟ್ಟರು.
Vijaya Karnataka Web legal learning is essential at school level
ಶಾಲಾ ಹಂತದಲ್ಲೇ ಕಾನೂನು ಕಲಿಕೆ ಅವಶ್ಯ


ತಾಲೂಕಿನ ಯಮನೂರ ಗ್ರಾಮದ ಅಂಬೇಡ್ಕರ ಭವನದಲ್ಲಿಮಹಿಳಾ ಸಮಾಖ್ಯ ಕರ್ನಾಟಕ ಸಂಸ್ಥೆಯಿಂದ ಕಿಶೋರಿ ಮೇಳಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳಾ ಸಮಾಖ್ಯ ಕರ್ನಾಟಕದ ಜಿಲ್ಲಾಸಂಯೋಜಕಿ ಆರತಿ ಸಬರದ ಮಾತನಾಡಿ, ಬಾಲಕಿಯರು ತಮ್ಮ ಬಾಲ್ಯಾವಸ್ಥೆಯಲ್ಲಿಪಾಲಕರ ಒತ್ತಡಕ್ಕೆ ಮಣಿದು ವಿವಾಹದ ಸುಳಿಯಲ್ಲಿಸಿಲುಕದೇ, ಶಿಕ್ಷಣ ಪಡೆಯಬೇಕು. ಉತ್ತಮ ಜೀವನ ರೂಪಿಸಿಕೊಳ್ಳುವುದಕ್ಕೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಶಿಕ್ಷಣ ಮುಗಿದ ನಂತರ ಸರಕಾರದಿಂದ ದೊರಕುವ ಕೌಶಲ್ಯಾಭಿವೃದ್ಧಿ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಬಲಿಷ್ಠರಾಗಲು ಪ್ರಯತ್ನಿಸಬೇಕೆಂದು ಹೇಳಿದರು.

ನಮ್ಮ ಸಂಸ್ಥೆಯು ರಾಜ್ಯದ 9 ಜಿಲ್ಲೆಗಳಲ್ಲಿತನ್ನ ಕಾರ್ಯವನ್ನು ಮಾಡುತ್ತಿದೆ. ಬಾಲಕಿಯರಿಗೆ ಜಾಗೃತಿ ಮೂಡಿಸಿ ಮಹಿಳೆಯರಿಗಿರುವ ಕಾನೂನುಗಳ ಕುರಿತು ಮಾಹಿತಿ ನೀಡಿ ಅವರು ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕು ಎನ್ನುವುದೇ ನಮ್ಮ ಸಂಸ್ಥೆಯ ಮೂಲ ಉದ್ದೇಶವಾಗಿದೆ ಎಂದು ಹೇಳಿದರು.

ತಾ.ಪಂ. ಇಒ ಪವಿತ್ರಾ ಪಾಟೀಲ ಬಾಲಕಿಯರ ಜಾಗೃತಿ ಹಾಗೂ ರಕ್ಷಣೆ ಕುರಿತು ಆಯೋಜಿಸುವ ಇಂತಹ ಕಾರ್ಯಕ್ರಮಗಳಿಂದ ಸಾಕಷ್ಟು ಮಾಹಿತಿ ನೀಡಲಾಗುತ್ತಿದ್ದು, ಎಲ್ಲರೂ ಈ ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಎಸ್‌ಡಿಎಂಸಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಮುಂದಿನಮನಿ, ವಿಠ್ಠಲ ಮೋಹಿತೆ, ಶಂಕರಗೌಡ ಪಾಟೀಲ, ಮುಖ್ಯೋಪಾಧ್ಯಾಯ ಎನ್‌.ಎನ್‌.ಹಾಲಿಗೇರಿ, ಸಾವಿತ್ರಿ ಬೂದಿಹಾಳ, ಕುಸುಮಾ ಕೆ., ಚಂದ್ರಕಲಾ ಕೆ., ಗೀತಾ ವೈ., ಎ.ಎನ್‌.ಹಿರೇಹೊಳಿ, ಐ.ಬಿ.ಚಿಕ್ಕಮಠ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ