ಆ್ಯಪ್ನಗರ

ಬಾಲ ಮಂದಿರದಲ್ಲಿ ಕಾನೂನು ಸಾಕ್ಷರತೆ

ಹುಬ್ಬಳ್ಳಿ : ಹೆಣ್ಣು ಮಕ್ಕಳು ಶಿಕ್ಷಣ ಪಡೆದು ಸ್ವಾವಲಂಬಿಯಾಗಬೇಕು. ಯಾರಿಗೂ ಹೊರೆಯಾಗಿರಬಾರದು ಎಂದು ಹುಬ್ಬಳ್ಳಿ ನ್ಯಾಯಾಲಯದ 5ನೇ ಹೆಚ್ಚುವರಿ ನ್ಯಾಯಾಧೀಶೆ ಅನುರಾಧಾ ಹೆಚ್‌.ಟಿ ಹೇಳಿದರು.

Vijaya Karnataka 15 Nov 2019, 5:16 pm
ಹುಬ್ಬಳ್ಳಿ : ಹೆಣ್ಣು ಮಕ್ಕಳು ಶಿಕ್ಷಣ ಪಡೆದು ಸ್ವಾವಲಂಬಿಯಾಗಬೇಕು. ಯಾರಿಗೂ ಹೊರೆಯಾಗಿರಬಾರದು ಎಂದು ಹುಬ್ಬಳ್ಳಿ ನ್ಯಾಯಾಲಯದ 5ನೇ ಹೆಚ್ಚುವರಿ ನ್ಯಾಯಾಧೀಶೆ ಅನುರಾಧಾ ಹೆಚ್‌.ಟಿ ಹೇಳಿದರು.
Vijaya Karnataka Web legal literacy at the childbirth
ಬಾಲ ಮಂದಿರದಲ್ಲಿ ಕಾನೂನು ಸಾಕ್ಷರತೆ


ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪೊಲೀಸ್‌ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ, ಮಕ್ಕಳ ದಿನಾಚರಣೆ ಅಂಗವಾಗಿ ನಗರದ ಘಂಟಿಕೇರಿಯ ಬಾಲಕಿಯರ ಬಾಲ ಮಂದಿರದಲ್ಲಿಆಯೋಜಿಸಿದ್ದ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಕೀಲರ ಸಂಘದ ಲೈಬ್ರರಿ ಕಮಿಟಿ ವೈಸ್‌ ಚೇರಮನ್‌ ಸವಿತಾ ಹಾನಗಲ್‌ ಅವರು, ಹೆಣ್ಣು ಮಗುವನ್ನು ಉಳಿಸಿ-ಹೆಣ್ಣು ಮಗುವನ್ನು ಓದಿಸುವ ಕುರಿತು ಉಪನ್ಯಾಸ ನೀಡಿದರು.

ಪಿಯುಸಿ ಹಾಗೂ ಎಸ್‌ಎಸ್‌ಎಲ…ಸಿ ಪರೀಕ್ಷೆಯಲ್ಲಿಅತಿ ಹೆಚ್ಚು ಅಂಕ ಪಡೆದ ಮಕ್ಕಳು ಹಾಗೂ ಕ್ರೀಡೆಗಳಲ್ಲಿವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಬೆಂಡಿಗೇರಿ ಠಾಣೆ ಪಿಐ ಅರುಣಕುಮಾರ ಸೋಳಂಕಿ ವೈಯಕ್ತಿಕವಾಗಿ ನೋಟ್‌ ಪುಸ್ತಕ ಹಾಗೂ ಪೆನ್‌ಗಳನ್ನು ವಿತರಿಸಿದರು. ಬಾಲಮಂದಿರದ ಅಧೀಕ್ಷಕಿ ಅನ್ನಪೂರ್ಣ ಸಂಗಳದ ಅಧ್ಯಕ್ಷತೆ ವಹಿಸಿದ್ದರು. ಬಾಲಮಂದಿರದ ಇತರ ಸಿಬ್ಬಂದಿ ಉಪಸ್ಥಿರಿದ್ದರು. ಬಾಲ ಮಂದಿರದ ಮಕ್ಕಳು ಪ್ಯಾನ್ಸಿ ಡ್ರೆಸ್‌ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತ ಪಡಿಸಿ ಗಮನ ಸೆಳೆದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ