ಆ್ಯಪ್ನಗರ

‘ಸಮಾಜವಾದ ಆಚರಣೆಗೆ ತಂದ ಲೆನಿನ್‌’

ಧಾರವಾಡ : 1917ರ ನ.17ರ ರಷ್ಯಾದ ಮಹಾಕ್ರಾಂತಿಯ ನೆನಪಿನಲ್ಲಿ ಸೋಷಲಿಸ್ಟ್‌ ಯೂನಿಟಿ ಸೆಂಟರ್‌ ಆಫ್‌ ಇಂಡಿಯಾ , ಎಸ್‌ಯುಸಿಐ(ಸಿ) ಪಕ್ಷ ದ ಧಾರವಾಡ ಜಿಲ್ಲಾ ಸಮಿತಿಯು ಶನಿವಾರ ಪಕ್ಷ ದ ಕಚೇರಿಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿತ್ತು.

Vijaya Karnataka 19 Nov 2018, 5:00 am
ಧಾರವಾಡ : 1917ರ ನ.17ರ ರಷ್ಯಾದ ಮಹಾಕ್ರಾಂತಿಯ ನೆನಪಿನಲ್ಲಿ ಸೋಷಲಿಸ್ಟ್‌ ಯೂನಿಟಿ ಸೆಂಟರ್‌ ಆಫ್‌ ಇಂಡಿಯಾ , ಎಸ್‌ಯುಸಿಐ(ಸಿ) ಪಕ್ಷ ದ ಧಾರವಾಡ ಜಿಲ್ಲಾ ಸಮಿತಿಯು ಶನಿವಾರ ಪಕ್ಷ ದ ಕಚೇರಿಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿತ್ತು.
Vijaya Karnataka Web lenin brought to socialism
‘ಸಮಾಜವಾದ ಆಚರಣೆಗೆ ತಂದ ಲೆನಿನ್‌’


ಪಕ್ಷದ ರಾಜ್ಯ ಸಮಿತಿ ಸದಸ್ಯ ರಾಮಾಂಜನಪ್ಪ ಆಲ್ದಳ್ಳಿ ಕಾಮ್ರೇಡ್‌ ಲೆನಿನ್‌ ಹಾಗೂ ಕಮ್ರೇಡ್‌ ಸ್ಟಾಲಿನ್‌ ಅವರ ಭಾವಚಿತ್ರಗಳಿಗೆ ಪುಷ್ಪಗುಚ್ಛವಿರಿಸಿ, ಮಾತನಾಡಿ ಮಹಾಕ್ರಾಂತಿ ಜಗತ್ತಿನ ದುಡಿಯುವ ಜನಗಳಿಗೆ ವಿಮೋಚನೆಯ ದಾರಿ ತೋರಿಸಿದ ದಿನ. ಸಮಾಜವಾದವು ಕೇವಲ ಕಾಲ್ಪನಿಕವಾಗಿದ್ದು, ಎಂದಿಗೂ ಅದು ಸಮಾಜದಲ್ಲಿ ಆಚರಣೆಗೆ ಬರುವುದಿಲ್ಲ ಎಂಬ ನಂಬಿಕೆಯಿಂದ ಅದನ್ನು ಕಡೆಗಣಿಸಲಾಗಿತ್ತು. ಕಾರ್ಲ್‌ಮಾರ್ಕ್ಸ್‌ರವರು ಸಮಾಜವಾದವನ್ನು ಸ್ಥಾಪಿಸಬಹುದೆಂದು ಪ್ರತಿಪಾದಿಸಿದ್ದನ್ನು ಲೆನಿನ್‌ರವರು ರಷ್ಯಾದಲ್ಲಿ ನೈಜ ಕ್ರಾಂತಿಕಾರಿ ಪಕ್ಷ ದಡಿ ಅಶಿಕ್ಷಿತರು, ಸಮಾಜದಲ್ಲಿ ತುಳಿತಕ್ಕೊಳಗಾದವರನ್ನು ಒಗ್ಗೂಡಿಸಿ ಚೈತನ್ಯ ತುಂಬಿ ಸಮಾಜವಾದಿ ವ್ಯವಸ್ಥೆಯನ್ನು ಸ್ಥಾಪಿಸಿ ಇದು ಸಾಧ್ಯ ಎಂದು ಪ್ರಪಂಚಕ್ಕೆ ತೋರಿಸಿಕೊಟ್ಟರು ಎಂದರು.

ನೈಜ ಕಮ್ಯುನಿಸ್ಟ್‌ ಪಕ್ಷ ದಿಂದ ಮಾತ್ರ ವೈಜ್ಞಾನಿಕ ಸಮಾಜವಾದವನ್ನು ಸ್ಥಾಪಿಸಲು ಸಾಧ್ಯ ಎಂಬುದನ್ನು ಇದು ಸಾಬೀತು ಪಡಿಸಿತು. ಎಸ್‌ಯುಸಿಐ(ಸಿ) ಪಕ್ಷ ವು ಕಾರ್ಮಿಕ ವರ್ಗದ ಮಹಾನ್‌ ನಾಯಕ ಶಿವದಾಸ್‌ ಘೋಷ್‌ರವರ ಚಿಂತನೆಯ ಆಧಾರದ ಮೇಲೆ ಮೂಲ ಬದಲಾವಣೆಯಲ್ಲಿ ನಂಬಿಕೆಯಿಟ್ಟು ನಿಜವಾದ ಕಮ್ಯುನಿಸ್ಟ್‌ ಪಕ್ಷ ವಾಗಿ ಹುಟ್ಟಿ, ಬೆಳೆದು ಇಂದು ದೇಶವ್ಯಾಪಿ ವಿಸ್ತರಿಸಿದೆ. ಕಾರ್ಮಿಕ ವರ್ಗದ ಹೋರಾಟದಲ್ಲಿ ಗಂಭೀರವಾಗಿ ತನ್ನನ್ನು ತೊಡಗಿಸಿಕೊಂಡಿದೆ. ನವೆಂಬರ್‌ ಕ್ರಾಂತಿಯನ್ನು ನೆನಪಿಸಿಕೊಳ್ಳುವ ಮೂಲಕ, ಭಾರತದಲ್ಲಿ ಕ್ರಾಂತಿಯನ್ನು ನೆರವೇರಿಸಲು ಎಸ್‌ಯುಸಿಐ(ಸಿ) ಪಕ್ಷ ವನ್ನು ಬಲಪಡಿಸಬೇಕು ಎಂದರು.

ಪಕ್ಷ ದ ಜಿಲ್ಲಾ ಸಮಿತಿ ಸದಸ್ಯರಾದ ಗಂಗಾಧರ ಬಡಿಗೇರ, ಭುವನಾ, ದೀಪಾ, ಶರಣು ಗೋನವಾರ, ರಮೇಶ ಹೊಸಮನಿ, ಮಧುಲತಾ, ಭವಾನಿಶಂಕರ್‌ ಸೇರಿದಂತೆ ಸದಸ್ಯರು, ಕಾರ್ಯಕರ್ತರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ