ಆ್ಯಪ್ನಗರ

ಮಾತೃಭಾಷೆ ಬೆಳೆಸುವ ಕೆಲಸವಾಗಲಿ

ಧಾರವಾಡ : ಚಂಚಲ ಮನಸ್ಸನ್ನು ಹತೋಟಿಗೆ ತರಲು ವಿದ್ಯಾರ್ಥಿಗಳು ಅಭ್ಯಾಸದ ಕಡೆಗೆ ಗಮನ ಹರಿಸುವುದರಿಂದ ನಿಯಂತ್ರಣ ಸಾಧಿಸಬಹುದು ಎಂದು ಗದಗಿನ ತೋಂಟದ ಶ್ರೀ ಜಗದ್ಗುರು ಸಿದ್ಧರಾಮ ಮಹಾಸ್ವಾಮಿಜಿ ಹೇಳಿದರು.

Vijaya Karnataka 1 Sep 2019, 5:00 am
ಧಾರವಾಡ : ಚಂಚಲ ಮನಸ್ಸನ್ನು ಹತೋಟಿಗೆ ತರಲು ವಿದ್ಯಾರ್ಥಿಗಳು ಅಭ್ಯಾಸದ ಕಡೆಗೆ ಗಮನ ಹರಿಸುವುದರಿಂದ ನಿಯಂತ್ರಣ ಸಾಧಿಸಬಹುದು ಎಂದು ಗದಗಿನ ತೋಂಟದ ಶ್ರೀ ಜಗದ್ಗುರು ಸಿದ್ಧರಾಮ ಮಹಾಸ್ವಾಮಿಜಿ ಹೇಳಿದರು.
Vijaya Karnataka Web let it be the work of cultivating the mother tongue
ಮಾತೃಭಾಷೆ ಬೆಳೆಸುವ ಕೆಲಸವಾಗಲಿ


ನಗರದ ಡಾ.ಅಣ್ಣಾಜಿರಾವ್‌ ಸಿರೂರ ಸೃಜನಾ ರಂಗಮಂದಿರದಲ್ಲಿ ಶ್ರೀ ಜಗದ್ಗುರು ತೋಂದಾರ್ಯ ವಿದ್ಯಾಪೀಠದ ಹಿರೇಮಲ್ಲೂರ ಈಶ್ವರನ್‌ ಪದವಿಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ 2019-20ನೇ ಸಾಲಿನ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಶನಿವಾರ ಅವರು ಮಾತನಾಡಿದರು.

ಮಾತೃಭಾಷೆಯನ್ನು ಉಳಿಸಿಕೊಂಡು ಅನ್ಯ ಭಾಷೆಯನ್ನು ಗೌರವಿಸಿಕೊಂಡು, ಬಳಸಿಕೊಂಡು ತಂತ್ರಜ್ಞಾನದ ಮೂಲಕ ಯುವ ಪೀಳಿಗೆ ದೇಶವನ್ನು ಸದೃಢವನ್ನಾಗಿಸಲು ಮುಂದಾಗಬೇಕುಮಾತೃಭಾಷೆಯನ್ನು ಬೆಳೆಸುವ ಕಾರ್ಯ ಮಾಡಬೇಕು ಎಂದರು.

ಕರ್ನಾಟಕ ಕಲಾ ಮಹಾವಿದ್ಯಾಲಯದ ವಿಶ್ವಾಂತ ಪ್ರಾಚಾರ್ಯ ಎಸ್‌.ಜಿ.ಚಚಡಿ ಮಾತನಾಡಿ, ಇದೇ ರೀತಿ ಮೊಬೈಲ್‌ ಬಳಕೆ ಮುಂದುವರಿದರೆ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಅಡ್ಡಿಯಾಗಲಿದೆ. ಸರಕಾರಗಳು ಯುವ ಶಕ್ತಿಯನ್ನು ಸರಿಯಾಗಿ ಬಳಸಿಕೊಳ್ಳದೇ ಇದ್ದರೆ ಬರುವ ದಿನಗಳಲ್ಲಿ ಪರಿಣಾಮ ಬೀರಲಿದೆ ಎಂದರು.

ಪ್ರೊ.ಶಿವಾನಂದ ಕಣವಿ ಮಾತನಾಡಿದರು.ಪ್ರಾಚಾರ್ಯ ಶಶಿಧರ ತೋಡಕರ ಅಧ್ಯಾಪಕರು, ವಿದ್ಯಾರ್ಥಿಗಳು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ