ಆ್ಯಪ್ನಗರ

ವಿವಿಗಳು ಜ್ಞಾನ ವಿಸ್ತರಿಸುವ ಕೆಲಸ ಮಾಡಲಿ

ಧಾರವಾಡ : ಪ್ರಾಮಾಣಿಕ ದಕ್ಷ ಆಡಳಿತ ಹಾಗೂ ಕ್ರೀಯಾಶೀಲ ವ್ಯಕ್ತಿತ್ವದ ಮೂಲಕವೇ ಶಿಕ್ಷ ಕ ಹುದ್ದೆಯ ಘನತೆ ಹೆಚ್ಚಿಸಿದವರು ಪ್ರೊ.ಸಿ.ಎ.ಸೋಮಶೇಖರಪ್ಪ ಎಂದು ಗುಲಬರ್ಗಾ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಚ್‌.ಎಂ.ಮಹೇಶ್ವರಯ್ಯ ಅಭಿಪ್ರಾಯಪಟ್ಟರು.

Vijaya Karnataka 12 Feb 2019, 5:00 am
ಧಾರವಾಡ : ಪ್ರಾಮಾಣಿಕ ದಕ್ಷ ಆಡಳಿತ ಹಾಗೂ ಕ್ರೀಯಾಶೀಲ ವ್ಯಕ್ತಿತ್ವದ ಮೂಲಕವೇ ಶಿಕ್ಷ ಕ ಹುದ್ದೆಯ ಘನತೆ ಹೆಚ್ಚಿಸಿದವರು ಪ್ರೊ.ಸಿ.ಎ.ಸೋಮಶೇಖರಪ್ಪ ಎಂದು ಗುಲಬರ್ಗಾ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಚ್‌.ಎಂ.ಮಹೇಶ್ವರಯ್ಯ ಅಭಿಪ್ರಾಯಪಟ್ಟರು.
Vijaya Karnataka Web DRW-10MAILAR02
ಧಾರವಾಡ ಕವಿವಿ ಮಾನಸೋಲ್ಲಾಸ ಸಭಾ ಭವನದಲ್ಲಿ ನಡೆದ ಪ್ರೊ. ಸೋಮಸೇಖರಪ್ಪ ಅಭಿನಂದನಾ ಕಾರ್ಯಕ್ರಮದಲ್ಲಿ ಪುಸ್ತಕವನ್ನು ಗುಲಬುರ್ಗಾ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಚ್‌.ಎಂ. ಮಹೇಶ್ವರಯ್ಯ ಬಿಡುಗಡೆ ಮಾಡಿದರು.


ನಗರದ ಕವಿವಿ ಮಾನಸೋಲ್ಲಾಸ ಸಭಾ ಭವನದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗ ಹಾಗೂ ಪ್ರೊ. ಸೋಮಸೇಖರಪ್ಪ ಅಭಿನಂದನಾ ಸಮಿತಿ ಸಹಯೋಗದಲ್ಲಿ ನಡೆದ ಸೇವಾ ನಿವೃತ್ತಿ ಹೊಂದಿದ ಪ್ರೊ.ಸಿ.ಎ.ಸೋಮಸೇಖರಪ್ಪ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅಗಮಿಸಿ ಶನಿವಾರ ಅವರು ಮಾತನಾಡಿದರು.

ವಿದ್ಯರ್ಥಿಗಳಿಗೆ ಜ್ಞಾನವನ್ನು ವಿಸ್ತರಿಸುವ ಕೆಲಸ ವಿವಿಗಳಿಂದ ನಿರಂತರವಾಗಿ ನಡೆಯಬೇಕು. ಶಿಕ್ಷ ಕರಾದವರು ಪ್ರತಿದಿನ ಮನೆಗೆ ಒಂದರೆಡು ಪತ್ರಿಕೆ ತರಿಸಿ ಓದುವುದನ್ನು ಕಲಿಯಬೇಕು ಎಂದರು.

ಹೊಸದಿಲ್ಲಿಯ ಭಾರತೀಯ ಸಮಾಜಶಾಸ್ತ್ರ ಸಂಘದ ಅಧ್ಯಕ್ಷೆ ಡಾ.ಆರ್‌.ಇಂದಿರಾ ಅವರು ಪುಸ್ತಕ ಪರಿಚಯಿಸಿ ಮಾತನಾಡಿ, ಸಮಕಾಲೀನ ಭಾರತೀಯ ಸಮಾಜ ಕುರಿತು ಹೊಸ ವಿಷಯಗಳ ಬಗ್ಗೆ ಈ ಎರಡು ಪುಸ್ತಕಗಳಲ್ಲಿವೆ. ಸಂಶೋಧಕರಿಗೆ ವಿದ್ಯಾರ್ಥಿಗಳಿಗೆ ಉತ್ತಮ ಆಕರ ಗ್ರಂಥಗಳು ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕವಿವಿ ಕುಲಸಚಿವ ಪ್ರೊ.ಎನ್‌.ಎಂ.ಸಾಲಿ ಮಾತನಾಡಿ, ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರು ಅಹಂ ಬಿಡಬೇಕು.ಅಂದಾಗ ಕೆಲಸ ಕಾರ್ಯಗಳು ಸೇರಿದಂತೆ ಎಲ್ಲವೂ ಚೆನ್ನಾಗಿ ನಡೆಯುತ್ತವೆ ಎಂದರು.

ಇದೇ ವೇಳೆ ಸಮಕಾಲಿನ ಭಾರತೀಯ ಸಮಾಜ:ವಿವಿಧ ನೆಲೆಗಳು ಹಾಗೂ ಎನರ್ಜಿ ಸೋರ್ಸಸ್‌ ಕೂಕಿಂಗ್‌ ಆ್ಯಂಡ್‌ ವುಮೆನ್‌ ಎಂಪಾವರಮೆಂಟ್‌ ಎ ಸ್ಟಡಿ ಆಫ್‌ ಹೌಸ್‌ಹೌಲ್ಡ್‌ ಡೈನಾಮಿಕ್ಸ್‌ ಇನ್‌ ರೂರಲ್‌ ಇಂಡಿಯಾ ಎಂಬ ಎರಡು ಪುಸ್ತಕಗಳನ್ನು ಗುಲಬರ್ಗಾ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಚ್‌.ಎಂ.ಮಹೇಶ್ವರಯ್ಯ ಬಿಡುಗಡೆಗೊಳಿಸಿದರು. ಅಲ್ಲದೇ ನಾನಾ ವಿಶ್ವವಿದ್ಯಾಲಯ ಹಾಗೂ ಪದವಿ ಕಾಲೇಜುಗಳಿಂದ ಆಗಮಿಸಿದ್ದ ಪ್ರಾಧ್ಯಾಪಕರು ಪ್ರೊ.ಸಿ.ಎ.ಸೋಮಶೇಖರಪ್ಪ ದಂಪತಿಗಳನ್ನು ಸನ್ಮಾನಿಸಿದರು.

ಪ್ರೊ.ಸಿ.ಎ.ಸೋಮಶೇಖರಪ್ಪ ಮಾತನಾಡಿದರು.

ಪ್ರೊ.ಶಕುಂತಲಾ ಶೆಟ್ಟರ್‌ ಸಭೆಯ ಅಧ್ಯಕ್ಷ ತೆ ವಹಿಸಿದ್ದರು. ಪ್ರೊ.ಶೌಕತ್‌ಅಜೀಂ, ಪ್ರೊ.ಜಯಶ್ರೀ ಎಸ್‌, ಪ್ರೊ.ದ್ರುವಾಜ್ಯೋತಿ, ರಾಣಿಚೆನ್ನಮ್ಮ ವಿವಿ ಪ್ರಾಧ್ಯಾಪಕಿ ಡಾ.ಚಂದ್ರಿಕಾ, ಡಾ.ರಂಜನಾ, ತುಮಕೂರು ವಿವಿ ಮಾಜಿ ಕುಲಸಚಿವ ಪ್ರೊ ಗುಂಜಾಳ, ಎನ್‌ಎಸ್‌ಎಸ್‌ ಅಧಿಕಾರಿ ಡಾ.ಎಂ.ಬಿ.ದಳಪತಿ, ಡಾ. ಧನಂಜಯ ಸೇರಿದಂತೆ ಇತರರು ಇದ್ದರು. ಡಾ.ಹನಮಗೌಡಸಿ ಸ್ವಾಗತಿಸಿ, ಪರಿಚಯಿಸಿದರು. ಮೇಘಾ, ಅಸ್ಪಿಯಾ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕ ಡಾ.ಸುಭಾಷ ನಾಟೀಕರ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ