ಆ್ಯಪ್ನಗರ

ಪರಿಸರ ಬೇಳೆಸೋಣ ನಿಸ್ವಾರ್ಥ ಸೇವೆ ಮಾಡೋಣ

ಕಲಘಟಗಿ : ಪರಿಸರ ರಕ್ಷ ಣೆಗೆ ನಾವೆಲ್ಲ ಮುಂದಾಗುವ ಅವಶ್ಯಕತೆ ಇದ್ದು, ಪರಿಸರ ಬೇಳೆಸೋಣ, ನಿಸ್ವಾರ್ಥ ಸೇವೆ ಮಾಡೋಣ ಎಂದು ವಿಜ್ಞಾನ ಶಿಕ್ಷ ಕಿ ಹಾಗೂ ಸಂಪನ್ಮೂಲ ವ್ಯಕ್ತಿ ಪೂರ್ಣಿಮಾ ಭಟ್ಟ ಹೇಳಿದರು.

Vijaya Karnataka 7 Jun 2019, 5:00 am
ಕಲಘಟಗಿ : ಪರಿಸರ ರಕ್ಷ ಣೆಗೆ ನಾವೆಲ್ಲ ಮುಂದಾಗುವ ಅವಶ್ಯಕತೆ ಇದ್ದು, ಪರಿಸರ ಬೇಳೆಸೋಣ, ನಿಸ್ವಾರ್ಥ ಸೇವೆ ಮಾಡೋಣ ಎಂದು ವಿಜ್ಞಾನ ಶಿಕ್ಷ ಕಿ ಹಾಗೂ ಸಂಪನ್ಮೂಲ ವ್ಯಕ್ತಿ ಪೂರ್ಣಿಮಾ ಭಟ್ಟ ಹೇಳಿದರು.
Vijaya Karnataka Web lets take an environmental selfless service
ಪರಿಸರ ಬೇಳೆಸೋಣ ನಿಸ್ವಾರ್ಥ ಸೇವೆ ಮಾಡೋಣ


ಅವರು ತಾಲೂಕಿನ ದೇವಿಕೊಪ್ಪ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ವಾಯು ಮಾಲಿನ್ಯ ಎಂಬ ವಿಶ್ವ ಸಂಸ್ಥೆಯ ಧ್ಯೇಯ ವಾಕ್ಯದ ಅಂಗವಾಗಿ ಉಸಿರು ಉಳಿಸಿ ನಮ್ಮನ್ನೆಲ್ಲ ರಕ್ಷಿಸಿ ವಿಶಿಷ್ಟ ಕಾರ್ಯಕ್ರದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.

ಪರಿಸರ ಸಂರಕ್ಷ ಣೆಗಾಗಿ ಈಗಾಗಲೇ ಹಲವಾರು ಯೋಜನೆಗಳು ಜಾರಿಯಲ್ಲಿವೆ. ಬರದ ಸಮಯದಲ್ಲಿ ಮೋಡ ಬಿತ್ತನೆ ಮಾಡಿ ಕೃತಕ ಮಳೆಗಾಗಿ ನಾವು ಕೋಟಿ ಕೋಟಿ ರೂಪಾಯಿ ಟೆಂಡರ್‌ ಕರೆಯುತ್ತೆವೆ. ಆದರೆ ಶಾಲೆ ಮತ್ತು ಮನೆಗಳಲ್ಲಿ ಗಿಡ ಬೆಳೆಸೋಣ ಎಂದರು.

ಡಿ.ವೈ.ಅರ್‌.ಎಫ್‌.ಓ ಐ.ಎಸ್‌.ಹಳ್ಯಾಳ ಮಾತನಾಡಿ, ಹಸಿರು ನಮ್ಮೆಲ್ಲರ ಉಸಿರೆಂದು ತಿಳಿದವರು ಕೂಡಾ ಹಸಿರಿನ ಉಸಿರನ್ನೇ ನಿಲ್ಲಿಸಿದ್ದಾರೆ. ಮೂಕ ಪ್ರಾಣಿ ಪಕ್ಷಿಗಳನ್ನು,ನಿಸ್ವಾರ್ಥದ ಪ್ರತಿರೂಪದಂತಿರುವ ಗಿಡಮರಳನ್ನು ಮಾನವ ತನ್ನ ಸ್ವಾರ್ಥಕ್ಕಾಗಿ ನಾಶ ಮಾಡುತ್ತಿದ್ದಾರೆ. ಮುಂದೆ ಬಾಳಿ ಬದುಕ ಬೇಕಾದ ನಾವು ಮುಂದಿನ ಪೀಳಿಗೆಗೆ ಶುದ್ಧ ಗಾಳಿ ಹಾಗೂ ಪರಿಸರ ಉಳಿಸಿ ನೀಡಬೇಕಾಗಿದೆ.

ಗಾಳಿ ಮಾಲಿನ್ಯ ಹಿಮ್ಮೆಟ್ಟಿಸುವ ಬಗ್ಗೆ ಪ್ರಬಂಧ ಹಾಗೂ ಚಿತ್ರಕಲೆ ಸ್ಪರ್ಧೆಯಲಿ ಲಕ್ಷ್ಮೀ ಕೊಪ್ಪದ,ಸ್ವಾತಿ ಲಮಾಣಿ, ಪ್ರಥಮ ಸ್ಥಾನ ,ದರ್ಶನಾ ಗೌಡ್ರ,ಪ್ರಿಯಾಂಕ ಕಾಟಾಪೂರ, ದ್ವಿತೀಯ,ನಿಕಿತಾ ಲಮಾಣಿ, ಶ್ವೇತಾ ಕಬನೂರ ತೃತಿಯ ಸ್ಥಾನ ಪಡೆದರು. ಸಾವಿತ್ರಿ ಹೊನ್ನಿಹಳ್ಳಿ ಮತ್ತು ಸಂಗಡಿಗರು ಕರ್ಪಾಲಿ ಕಲೆ ಪ್ರದರ್ಶನ ಮಾಡಿದರು.

ಪ್ರಿಯಾಂಕ ಕಾಟಾಪುರ ಮತ್ತು ಸಂಗಡಿಗರು ಪರಿಸರ ಗೀತೆ ಹಾಡಿದರು.ಮೂಖ್ಯೋಪಾಧ್ಯಯ ಕುಮಾರ್‌ ಕೆ.ಎಫ್‌.ಅಧ್ಯಕ್ಷ ತೆ ವಹಿಸಿದ್ದರು. ಎಸ್‌ಡಿಎಂಸಿ ಉಪಾಧ್ಯಕ್ಷ ಹುಲೇಪ್ಪ ಭೋವಿ, ಮಾಹಾದೇವಿ ಸಂಗಮೇಶ್ವರ, ಅರಣ್ಯ ರಕ್ಷ ಕ ಎಚ್‌ ಆರ್‌ ಹಾವನಿ,ಶಾಂತಲಿಂಗ ಬೇರುಡಗಿ, ಶಂಕ್ರಯ್ಯಾ ವಸ್ತ್ರಕಾಂತಿಮಠ, ಪಂಚಾಕ್ಷ ರಿ ಟೊಂಗಳೆ,ಗೀತಾ ದೇವಜಿ ,ಪಾರವ್ವ ಉಣಕಲ್‌,ಪೂರ್ಣಿಮಾ ಭಟ್ಟ,ಮಂಜುನಾಥ ಟೊಂಗಳೆ,ಮಲಿಕಾರ್ಜುನ ದೊಡಮನಿ,ಯಲ್ಲಪ್ಪ ಧಾರವಾಡ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ