ಆ್ಯಪ್ನಗರ

ಉಗ್ರರ ನಿಗ್ರಹಕ್ಕಾಗಿ ಪತ್ರ ಚಳುವಳಿ: ಶಿಥಿಕಂಠೇಶ್ವರ ಶ್ರೀ

ಕುಂದಗೋಳ : ನಮ್ಮ ನೆರೆರಾಷ್ಟ್ರವಾದ ಪಾಕಿಸ್ತಾನವು ಉಗ್ರರನ್ನು ಉತ್ಪಾದಿಸುವ ಯಂತ್ರವಾಗುತ್ತಿದ್ದು, ಆ ರಾಷ್ಟ್ರವನ್ನು ಟೆರೆರಿಸ್ಟ್‌ಸ್ತಾನವೆಂದು ಘೋಷಿಸಿ ಕೂಡಲೇ ಅಲ್ಲಿನ ಪ್ರತಿಯೊಬ್ಬ ಭಯೋತ್ಪಾದಕನನ್ನು ಬದುಕಲು ಬಿಡಬಾರದು ಎಂದು ಶಿಥಿಕಂಠೇಶ್ವರ ಶ್ರೀ ಹೇಳಿದರು.

Vijaya Karnataka 25 Feb 2019, 5:00 am
ಕುಂದಗೋಳ : ನಮ್ಮ ನೆರೆರಾಷ್ಟ್ರವಾದ ಪಾಕಿಸ್ತಾನವು ಉಗ್ರರನ್ನು ಉತ್ಪಾದಿಸುವ ಯಂತ್ರವಾಗುತ್ತಿದ್ದು, ಆ ರಾಷ್ಟ್ರವನ್ನು ಟೆರೆರಿಸ್ಟ್‌ಸ್ತಾನವೆಂದು ಘೋಷಿಸಿ ಕೂಡಲೇ ಅಲ್ಲಿನ ಪ್ರತಿಯೊಬ್ಬ ಭಯೋತ್ಪಾದಕನನ್ನು ಬದುಕಲು ಬಿಡಬಾರದು ಎಂದು ಶಿಥಿಕಂಠೇಶ್ವರ ಶ್ರೀ ಹೇಳಿದರು.
Vijaya Karnataka Web DRW-23KND3
ಕುಂದಗೋಳ ಪಟ್ಟಣದ ಪಂಚಗ್ರಹ ಹಿರೇಮಠದಲ್ಲಿ ಶಿಥಿಕಂಠೇಶ್ವರ ಶ್ರೀ ಪ್ರಧಾನಿ ಅವರಿಗೆ ಬರೆದ ಪತ್ರ ತೋರಿಸಿದರು.


ಪಟ್ಟಣದ ಪಂಚಗ್ರಹ ಹಿರೇಮಠದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾವಿರಾರು ಭಾರತೀಯ ಯೋಧರು ಹುತಾತ್ಮರಾಗುವುದಕ್ಕೆ ಕಾರಣರಾಗುತ್ತಿರುವ ಅಲ್ಲಿನ ಉಗ್ರರನ್ನು ಸಂಪೂರ್ಣ ನಿಗ್ರಹಗೊಳಿಸಿ ಹುತಾತ್ಮ ಯೋಧರಿಗೆ ನ್ಯಾಯ ದೊರಕಿಸಿಕೊಡಲು ತಾಲೂಕಿನಾದ್ಯಂತ ಪತ್ರಚಳವಳಿ ಹಮ್ಮಿಕೊಳ್ಳಲಾಗಿದೆ.

ಕುಂದಗೋಳ ವಿಧಾನಸಭಾ ಮತಕ್ಷೇತ್ರದ ಪ್ರತಿ ಹಳ್ಳಿಗಳ ಮನೆಮನೆಗೆ ತೆರಳಿ ಅಂಚೆಪತ್ರಗಳನ್ನು ಹಂಚಿ, ಪತ್ರದಲ್ಲಿ ಭಾರತಕ್ಕಾದ ಅನ್ಯಾಯ ಕುರಿತು ಉಗ್ರರ ದಮನವಾಗಲೆಂಬ ಒಕ್ಕಣಿಕೆಯನ್ನು ಬರೆದು ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಲು ತಿಳಿಸಲಾಗುತ್ತದೆ. ಈಗಾಗಲೇ 50 ಸಾವಿರ ಅಂಚೆಪತ್ರಗಳನ್ನು ಖರೀದಿಸಿದ್ದು, ಈ ಪತ್ರಚಳವಳಿ ಕಾರ್ಯ ಮೊದಲಿಗೆ ಪಟ್ಟಣದ ಮೂರಂಗಡಿ ಕೂಟದಲ್ಲಿನ ಮಾರುತಿ ಮಂದಿರದಲ್ಲಿ ಸಂಜೆಯಿಂದಲೇ ಆರಂಭವಾಗಿ ಸುತ್ತಲಿನ ಪ್ರತಿಹಳ್ಳಿಹಳ್ಳಿಗೂ ಪಸರಿಸಲಿದೆ ಎಂದು ತಿಳಿಸಿದರು.

ಪಟ್ಟಣದಲ್ಲಿ ಮಾರುತಿ ಗುಡಿ ಸೇರಿದಂತೆ ಶಂಭುಲಿಂಗೇಶ್ವರ ದೇಗುಲ ಹಾಗೂ ಪಂಚಗ್ರಹ ಹಿರೇಮಠದಲ್ಲಿ ಶಾಖೆಗಳಲ್ಲಿ ಹಾಗೂ ಹಳ್ಳಿಗಳಲ್ಲಿನ ಕಾರ್ಯಕರ್ತರ ಮನೆಗಳಲ್ಲಿ ಪತ್ರಗಳನ್ನು ಶೇಖರಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕರ್ತರು, ರೈತರು, ಮಹಿಳೆಯರು ಸೇರಿದಂತೆ ಒಂದು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಪಾಲ್ಗೊಂಡು ಕುಂದಗೋಳ ವಿಧಾನಸಭಾ ಮತಕ್ಷೇತ್ರದಲ್ಲಿ ಸಂಚರಿಸಲಿದ್ದಾರೆ. ಈ ಚಳವಳಿಯಲ್ಲಿ ಇನ್ನೂ ಹೆಚ್ಚು ಜನ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ಪೃಥ್ವಿರಾಜ ಕಾಳೆ, ಮಂಜುನಾಥ ಅವಾರಿ, ಮಂಜುನಾಥ ಹಿರೇಮಠ, ವಿನಯ ಬೋಸ್ಲೆ, ವಿನಾಯಕ ಹಡಪದ, ಮಂಜುನಾಥ ಅಲ್ಲಾಪುರ, ಕುಮಾರ ಬೋವಿ, ಮಲ್ಲಯ್ಯ ಹಿರೇಮಠ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ