ಆ್ಯಪ್ನಗರ

ಡಿಜಿಟಲೀಕರಣದತ್ತ ಲಿಡ್ಕರ್‌ ನಿಗಮ

ಹುಬ್ಬಳ್ಳಿ : ಲಿಡ್ಕರನ ಚರ್ಮ ಕೈಗಾರಿಕಾ ವಸ್ತುಗಳನ್ನು ಆಧುನಿಕತೆಗೆ ತಕ್ಕಂತೆ ಸುಂದರವಾಗಿ ಹಾಗೂ ಅತ್ಯಾಕರ್ಷಕವಾಗಿ ವಿನ್ಯಾನಗೊಳಿಸುವ ಜೊತೆಗೆ ಅವುಗಳನ್ನು ಆನ್‌ ಲೈನ್‌ ಶಾಪಿಂಗ್‌ ಮೂಲಕ ಮಾರಾಟ ಮತ್ತು ಖರೀದಿಸುವಂತೆ ಮಾಡಲು ಯೋಜನೆ ರೂಪಿಸಿರುವ ಶಾಸಕ ಹಾಗೂ ಲಿಡ್ಕರ್‌ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಅವರು ಶುಕ್ರವಾರ ಬೆಂಗಳೂರಿನ ಡಿಜಿಟಲ್‌ ಮಾರ್ಕೆಟಿಂಗ್‌ನ ಜಾಹೀರಾತು ವಿಭಾಗದ ಸಂಸ್ಥೆಯೊಂದಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಿದರು.

Vijaya Karnataka 30 Jun 2019, 5:00 am
ಹುಬ್ಬಳ್ಳಿ : ಲಿಡ್ಕರನ ಚರ್ಮ ಕೈಗಾರಿಕಾ ವಸ್ತುಗಳನ್ನು ಆಧುನಿಕತೆಗೆ ತಕ್ಕಂತೆ ಸುಂದರವಾಗಿ ಹಾಗೂ ಅತ್ಯಾಕರ್ಷಕವಾಗಿ ವಿನ್ಯಾನಗೊಳಿಸುವ ಜೊತೆಗೆ ಅವುಗಳನ್ನು ಆನ್‌ ಲೈನ್‌ ಶಾಪಿಂಗ್‌ ಮೂಲಕ ಮಾರಾಟ ಮತ್ತು ಖರೀದಿಸುವಂತೆ ಮಾಡಲು ಯೋಜನೆ ರೂಪಿಸಿರುವ ಶಾಸಕ ಹಾಗೂ ಲಿಡ್ಕರ್‌ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಅವರು ಶುಕ್ರವಾರ ಬೆಂಗಳೂರಿನ ಡಿಜಿಟಲ್‌ ಮಾರ್ಕೆಟಿಂಗ್‌ನ ಜಾಹೀರಾತು ವಿಭಾಗದ ಸಂಸ್ಥೆಯೊಂದಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಿದರು.
Vijaya Karnataka Web DRW-29 NADAF 7
ಲಿಡ್ಕರ್‌ ಉತ್ಪನ್ನಗಳನ್ನು ಡಿಜಿಟಲ್‌ ಮಾರ್ಕೆಟಿಂಗ್‌ ಮೂಲಕ ಮಾರಾಟ ಸಲುವಾಗಿ ಶಾಸಕ ಹಾಗೂ ಲಿಡ್ಕರ್‌ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಅವರು ಬೆಂಗಳೂರಿನ ಡಿಜಿಟಲ್‌ ಮಾರ್ಕೆಟಿಂಗ್‌ನ ಜಾಹೀರಾತು ವಿಭಾಗದ ಸಂಸ್ಥೆಯೊಂದಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಿದರು.

ಈ ಚಿಂತನೆಯಿಂದ ಮುಂಬರುವ ದಿನಗಳಲ್ಲಿ ಚರ್ಮ ಕೈಗಾರಿಕೆಯಲ್ಲಿ ನಿರತ ಕುಶಲಕರ್ಮಿಗಳಿಗೆ ರಾಜ್ಯ- ರಾಷ್ಟ್ರಮಟ್ಟದಲ್ಲೂ ತಮ್ಮ ಉತ್ಪನ್ನಗಳನ್ನು ಬ್ರ್ಯಾಂಡಿಂಗ್‌ ಮಾಡಿ ಮಾರಾಟ ಮಾಡಲು ಅವಕಾಶ ಸಿಗುವ ಜೊತೆಗೆ ತಮ್ಮನೆಚ್ಚಿನ ವಿನ್ಯಾಸದ ಚರ್ಮದ ಉತ್ಪನ್ನಗಳನ್ನು ಕುಳಿತಲ್ಲಿಯೇ ಖರೀದಿ ಮಾಡಲು ಸಹ ಖರೀದಿದಾರರಿಗೆ ಅನುಕೂಲವಾಗಲಿದೆ. ಈ ಮೂಲಕ ನಿಗಮಕ್ಕೆ ತನ್ನದೇ ಆದ ಹೊಸ ಇಮೇಜ್‌ ಮೂಡಲಿದೆ ಎಂದು ಅಧ್ಯಕ್ಷ ರು ಅಭಿಪ್ರಾಯಪಟ್ಟಿದ್ದಾರೆ. ಲಿಡ್ಕರ್‌ನ ಸಲಹಾ ಸಮಿತಿ ಸದಸ್ಯ ಫರ್ವೇಜ್‌ ಕೊಣ್ಣೂರು, ಇನ್ನಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ