ಆ್ಯಪ್ನಗರ

ಲಿಂಗಾಯತ ವರದಿ ರಾಜ್ಯ ಸರಕಾರ ಪ್ರಾಯೋಜಿತ: ಶೆಟ್ಟರ್‌

ಲಿಂಗಾಯತ ಧರ್ಮಕ್ಕೆ ಸಂಬಂಧಿಸಿದಂತೆ ನಿವೃತ್ತ ನ್ಯಾಯ ಮೂರ್ತಿ ನಾಗಮೋಹನದಾಸ್ ವರದಿ ರಾಜ್ಯ ಸರಕಾರದ ಪ್ರಾಯೋಜಿತ ವರದಿ ಎಂದು ಬಿಜೆಪಿ ಮುಖಂಡ ಜಗದೀಶ್‌ ಶೆಟ್ಟರ್‌ ಹೇಳಿದ್ದಾರೆ.

Vijaya Karnataka Web 19 Mar 2018, 2:43 pm
ಹುಬ್ಬಳ್ಳಿ: ವೀರಶೈವ ಲಿಂಗಾಯತ ವಿಚಾರವನ್ನು ಚುನಾವಣೆ ಹಿನ್ನಲೆಯಲ್ಲಿ ಕ್ರಿಯೇಟ್ ಮಾಡಿದ್ದಾರೆ. ಇದರಿಂದ ಯಾರಿಗೂ ಲಾಭವಿಲ್ಲ, ಇದೊಂದು ರಾಜಕೀಯ ಕುತಂತ್ರ. ನಿವೃತ್ತ ನ್ಯಾಯ ಮೂರ್ತಿ ನಾಗಮೋಹನದಾಸ್ ವರದಿ ರಾಜ್ಯ ಸರಕಾರದ ಪ್ರಾಯೋಜಿತ ವರದಿ ಎಂದು ಬಿಜೆಪಿ ಮುಖಂಡ ಜಗದೀಶ್‌ ಶೆಟ್ಟರ್‌ ಹೇಳಿದ್ದಾರೆ.
Vijaya Karnataka Web lingayat report is govt sponsored says shettar
ಲಿಂಗಾಯತ ವರದಿ ರಾಜ್ಯ ಸರಕಾರ ಪ್ರಾಯೋಜಿತ: ಶೆಟ್ಟರ್‌


ಚುನಾವಣೆ ಹಿನ್ನಲೆಯಲ್ಲಿ ವೀರಶೈವ ಲಿಂಗಾಯತ ಧರ್ಮದ ವಿವಾದವನ್ನು ಸಿಎಂ ಸಿದ್ದರಾಮಯ್ಯ ಮೈಮೇಲೆ ಹಾಕಿಕೊಂಡಿದ್ದಾರೆ. ವರದಿಯ ಹಿನ್ನೆಲೆಯಲ್ಲಿ ಸಂಪುಟ ಸಭೆಯು ಏನು ನಿರ್ಣಯ ಕೈಗೊಳ್ಳಿದೆ ಎಂಬುದು ಗೊತ್ತಿಲ್ಲ ಎಂದರು. ಯಾವ ಸಮಯದಲ್ಲಿ ಚುನಾವಣೆ ನಡೆದರೂ ಬಿಜೆಪಿ ಸಿದ್ಧವಾಗಿದೆ ಎಂದು ಶೆಟ್ಟರ್‌ ಹೇಳಿದರು.

ಮುಖ್ಯಮಂತ್ರಿ ಎಲ್ಲೇ ಹೋದರೂ ತುರ್ತು ಪರಿಸ್ಥಿತಿ ಘೋಷಣೆ ಮಾಡಬೇಕಾಗಿದೆ. ಸಿಎಂ ಹೋದ ಕಡೆ ಹೋರಾಟ ಮಾಡುವವರನ್ನು ಅರೆಸ್ಟ್ ಮಾಡಲಾಗುತ್ತಿದೆ. ಸಿಎಂ ರಾಜ್ಯದ ಜನರ ನಂಬಿಕೆ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ರಾಜ್ಯದಲ್ಲಿ ಯಾರಿಗೂ ರಕ್ಷಣೆ ಇಲ್ಲದಂತ ಪರಿಸ್ಥಿತಿ ನಿರ್ಮಾಣ ಆಗಿದೆಎಂದು ಶೆಟ್ಟರ್‌ ದೂರಿದರು.

ಐದು ವರ್ಷಗಳಲ್ಲಿ 25 ಸಾವಿರ ಮಹಿಳಾ ದೌರ್ಜನ್ಯ , ಏಳು ಸಾವಿರ ಕೊಲೆಗಳು ನಡೆದಿವೆ. ಬೆಂಗಳೂರಲ್ಲೇ ಎರಡು ಲಕ್ಷ ಪ್ರಕರಣಗಳು ದಾಖಲಾಗಿವೆ. ಐದು ಸಾವಿರ ಪೊಲೀಸ್ ಅಧಿಕಾರಿಗಳ ಮೇಲೆ ದೌರ್ಜನ್ಯ ನಡೆದಿದೆ ಎಂದರು.

ಕಲಬುರಗಿ ಜಿಲ್ಲೆಗೆ ತುಂಗಭದ್ರಾ ಡ್ಯಾಂನಿಂದ ನೀರು ಬಿಡದಿದ್ದರೆ ಭತ್ತ ಸಂಪೂರ್ಣ ಹಾನಿಯಾಗುವ ಸಂಭವವಿದೆ. ಸರಕಾರ ನೀರು ಬಿಡುತ್ತಿಲ್ಲ . ಕಾರ್ಯಕ್ರಮಕ್ಕೂ ಮುಂಚೆ ಹೋರಾಟಗಾರರನ್ನು, ರೈತ ಮುಖಂಡರನ್ನು ಅರೆಸ್ಟ್ ಮಾಡುವುದು ಸರಿಯಲ್ಲ. ಇದೇ ರೀತಿ ಮುಂದುವರಿದರೆ ನಾವು ಉಗ್ರ ಹೋರಾಟ ಮಾಡುತ್ತೇವೆ. ರಾಜ್ಯದ ಖಜಾನೆ ಸಂಪೂರ್ಣ ಖಾಲಿಯಾಗಿದೆ. ಹೀಗಾಗಿ ಕೇಂದ್ರದಿಂದ ಹಣ ಬಿಡುಗಡೆಯಾಗಿದೆ ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ