ಆ್ಯಪ್ನಗರ

ವಿಶೇಷಚೇತರನ್ನು ಪ್ರೀತಿಯಿಂದ ಕಾಣಿರಿ

ನವಲಗುಂದ : ವಿಶೇಷಚೇತರನ್ನು ಎಲ್ಲರಂತೆ ಪ್ರೀತಿಯಿಂದ ಕಾಣಬೇಕು ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಸಂದೀಪ ಸಾಲಿಯಾನ ಹೇಳಿದರು. ಸೋಮವಾರ ನಾನಾ ಇಲಾಖೆಗಳ ಸಹಯೋಗದಲ್ಲಿ ಕೋರ್ಟ್‌ ಆವರಣದಲ್ಲಿ ಆಯೋಜಿಸಿದ್ದ ವಿಶ್ವ ಏಡ್ಸ ಹಾಗೂ ವಿಶೇಷಚೇತನರ ದಿನಾಚರಣೆ

Vijaya Karnataka 5 Dec 2018, 5:00 am
ನವಲಗುಂದ : ವಿಶೇಷಚೇತರನ್ನು ಎಲ್ಲರಂತೆ ಪ್ರೀತಿಯಿಂದ ಕಾಣಬೇಕು ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಸಂದೀಪ ಸಾಲಿಯಾನ ಹೇಳಿದರು.
Vijaya Karnataka Web DRW-4-NVL-1
ನವಲಗುಂದ ಕೋರ್ಟ್‌ ಆವರಣದಲ್ಲಿ ವಿಶ್ವ ಏಡ್ಸ ಹಾಗೂ ವಿಶೇಷಚೇತನರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಹಾಗೂ ಮಕ್ಕಳ ಜಾಥಾಕ್ಕೆ ಹಿರಿಯ ದಿವಾಣಿ ನ್ಯಾಯಾಧೀಶ ಸಂದೀಪ ಸಾಲಿಯಾನ ಚಾಲನೆ ನೀಡಿದರು. ನ್ಯಾಯಾಧೀಶ ಸುನೀಲ ತಳವಾರ ಇದ್ದರು.

ಸೋಮವಾರ ನಾನಾ ಇಲಾಖೆಗಳ ಸಹಯೋಗದಲ್ಲಿ ಕೋರ್ಟ್‌ ಆವರಣದಲ್ಲಿ ಆಯೋಜಿಸಿದ್ದ ವಿಶ್ವ ಏಡ್ಸ ಹಾಗೂ ವಿಶೇಷಚೇತನರ ದಿನಾಚರಣೆ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ ಹಾಗೂ ಶಾಲಾ ಮಕ್ಕಳ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ಏಡ್ಸ್‌ ಮುಕ್ತ ನಗರವನ್ನಾಗಿ ಮಾಡಲು ಎಲ್ಲರೂ ಪಣ ತೊಡಬೇಕೆಂದು ಹೇಳಿದರು.

ಸರಕಾರಿ ಮಾದರಿ ಕೇಂದ್ರ ಕನ್ನಡ ಗಂಡು ಮಕ್ಕಳ ಶಾಲೆ ನಂ.1ಪ್ರಧಾನ ಗುರು ಬಿ.ವೈ.ಮೂಲಿಮನಿ ಅಧ್ಯಕ್ಷ ತೆ ವಹಿಸಿದ್ದರು. ದಿವಾಣಿ ನ್ಯಾಯಾಧೀಶರಾದ ಸುನೀಲ ತಳವಾರ ಹಾಗೂ ವಕೀಲರ ಸಂಘದ ಅಧ್ಯಕ್ಷ ವಿ.ಪಿ.ಪಾಟೀಲ ಏಡ್ಸ ತಡೆಗಟ್ಟುವ ಕುರಿತು ಪ್ರಾಸ್ತಾವಿಕ ಮಾತನಾಡಿದರು. ವಕೀಲ ಎಸ್‌.ಎನ್‌.ಡಂಬಳ ಉಪನ್ಯಾಸ ನೀಡಿದರು. ಧಾರವಾಡದ ಬೆಳಕು ಮಹಿಳಾ ಸಂಘದ ಅಧ್ಯಕ್ಷೆ ಹುಸೇನಬಿ ಕೊಟೂರ, ಕಾನೂನು ಸ್ವಯಂ ಸೇವಕಿ ಮಂಜುಳಾ ಹೊಸಮನಿ, ಶಿಕ್ಷ ಕಿ ವಿ.ಪಿ.ದಂಡಿಗದಾಸರ, ವಕೀಲರಾದ ವಿ.ಟಿ.ಕುಲಕರ್ಣಿ, ಎಂ.ಎಸ್‌.ಹೆಬ್ಬಳ್ಳಿ, ಎಸ್‌.ವಿ.ಮರಡ್ಡಿ, ಎಂ.ಟಿ.ಹೆಬಸೂರ, ಶಾಂತಾ ಚಿಕ್ಕನರಗುಂದ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ