ಆ್ಯಪ್ನಗರ

ಗಾಣದೆಣ್ಣೆಯ ಮಹತ್ವ ಸಾರುತ್ತಿರುವ ಮಾಡಿಕರ್‌ ದಂಪತಿ

ಧಾರವಾಡ: ಖಾದ್ಯ ತೈಲವಿಲ್ಲದ ಜೀವನವನ್ನು ಊಹಿಸಿಕೊಳ್ಳಲೂ ಅಸಾಧ್ಯ. ಪ್ರತಿನಿತ್ಯ ನಮ್ಮ ಜೀವನದಲ್ಲಿಹಾಸು ಹೊಕ್ಕಾಗಿರುವ ಶೇಂಗಾ , ಕೊಬ್ಬರಿ, ಎಳ್ಳೆಣ್ಣೆ, ಸಾಸಿವೆ ಎಣ್ಣೆಯ ಗಾಣದ ಸಂಸ್ಕೃತಿಗೆ ಧಾರವಾಡದ ಪತಂಜಲಿ ಪ್ರಭಾರಿ ಯೋಗ ಶಿಕ್ಷಕಿ ಶೈಲಜಾ ಹಾಗೂ ಪುರುಷೋತ್ತಮ ಮಾಡಿಕರ್‌ ದಂಪತಿ ಪುನರುಜ್ಜೀವನ ನೀಡಿದ್ದಾರೆ.

Vijaya Karnataka 25 Aug 2020, 5:00 am
ಧಾರವಾಡ: ಖಾದ್ಯ ತೈಲವಿಲ್ಲದ ಜೀವನವನ್ನು ಊಹಿಸಿಕೊಳ್ಳಲೂ ಅಸಾಧ್ಯ. ಪ್ರತಿನಿತ್ಯ ನಮ್ಮ ಜೀವನದಲ್ಲಿಹಾಸು ಹೊಕ್ಕಾಗಿರುವ ಶೇಂಗಾ , ಕೊಬ್ಬರಿ, ಎಳ್ಳೆಣ್ಣೆ, ಸಾಸಿವೆ ಎಣ್ಣೆಯ ಗಾಣದ ಸಂಸ್ಕೃತಿಗೆ ಧಾರವಾಡದ ಪತಂಜಲಿ ಪ್ರಭಾರಿ ಯೋಗ ಶಿಕ್ಷಕಿ ಶೈಲಜಾ ಹಾಗೂ ಪುರುಷೋತ್ತಮ ಮಾಡಿಕರ್‌ ದಂಪತಿ ಪುನರುಜ್ಜೀವನ ನೀಡಿದ್ದಾರೆ.
Vijaya Karnataka Web GANNA-2081516
ಧಾರವಾಡದ ಹೆಬ್ಬಳ್ಳಿ ಅಗಸಿ ಬಳಿಯ ಮಾಡಿಕರ್‌ ಆಯಿಲ್ಸ್‌ನ ಮಾಡಿಕರ ಸ್ವಾಸ್ಥತ್ರ್ಯ ಸಾಂಪ್ರದಾಯಿಕ ಗಾಣದ ಯಂತ್ರ.


ಅಲ್ಲದೇ ಇವರು ಈ ಕುರಿತು ಸ್ವಯಂ ಸಂಶೋಧನೆ ನಡೆಸಿದ್ದಾರೆ.ಈ ನಿಟ್ಟಿನಲ್ಲಿಆರು ತಿಂಗಳ ಹಿಂದೆ ಸಾಂಪ್ರದಾಯಿಕ ಗಾಣದಿಂದ ಎಣ್ಣೆ ತೆಗೆದುಕೊಡುವ ಉದ್ಯಮವನ್ನು ಮಾಡಿಕರ್‌ ದಂಪತಿ ಪ್ರಾರಂಭಿಸಿದ್ದಾರೆ. ಸ್ವತಃ ತಾವೇ ಗ್ರಾಹಕರಿಗೆ ಅಗತ್ಯವಿರುವ ಪರಿಶುದ್ಧ ಖಾದ್ಯ ತೈಲವನ್ನು ತೆಗೆದುಕೊಡುವ ಕೆಲಸ ಮಾಡುತ್ತಿದ್ದಾರೆ. ಜತೆಗೆ ಗಾಣದ ಎಣ್ಣೆಯಿಂದಾಗುವ ಉಪಯೋಗಗಳು ಹಾಗೂ ಅದು ಆರೋಗ್ಯದ ಮೇಲೆ ಬೀರುವ ಸಕಾರಾತ್ಮಕ ಪರಿಣಾಗಳ ಬಗ್ಗೆ ಗ್ರಾಹಕರಿಗೆ ತಿಳಿಸುತ್ತಿರುವುದು ಮತ್ತೊಂದು ವಿಶೇಷ. ಕಟ್ಟಿಗೆ ಗಾಣದಲ್ಲಿತೆಗೆದ ಎಣ್ಣೆಗಳ ಬಳಕೆಯಿಂದ ಸಕ್ಕರೆ ಕಾಯಿಲೆ, ಹೃದಯ ಸಂಬಂಧಿ ಕಾಯಿಲೆ ಬರದಂತೆ ತಡೆಯುವ ಶಕ್ತಿ ಇದೆ ಎಂಬುದು ಮಾಡಿಕರ ಆಯಿಲ್ಸ್‌ನ ಮಾಲೀಕರಾದ ಶೈಲಜಾ ಮತ್ತು ಪುರುಷೋತ್ತಮ ಮಾಡಿಕರ ಅವರ ಅಭಿಪ್ರಾಯವಾಗಿದೆ. ಧಾರವಾಡ ಜಿಲ್ಲೆಯಲ್ಲಿಯೇ ಪ್ರಥಮಬಾರಿಗೆ ಮಾಡಿಕರ್‌ ಸ್ವಾಸ್ಥತ್ರ್ಯ ಎಂಬ ಹೆಸರಿನಲ್ಲಿಸಾಂಪ್ರದಾಯಿಕ ಗಾಣದ ಉದ್ಯಮ ಸ್ಥಾಪಿಸಿದ ಕೀರ್ತಿಗೆ ಇವರು ಪಾತ್ರರಾಗಿದ್ದಾರೆ. ಖಾದ್ಯ ತೈಲಗಳಿಗಾಗಿ ದೂ.0836-2267897, 7483862050ಗೆ ಸಂಪರ್ಕಿಸಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ