ಆ್ಯಪ್ನಗರ

ಪೊಲೀಸ್‌ ಎಂದು ಹೇಳಿದ, ರಾಯಲ್‌ ಎನ್‌ಫೀಲ್ಡ್‌ ಬೈಕ್‌ ಜತೆ ಪರಾರಿಯಾದ

ದಂಡ ಕಟ್ಟಲಾಗದಿದ್ದರೇ ಹುಬ್ಬಳ್ಳಿ ಉಪನಗರ ಪೊಲೀಸ್‌ ಠಾಣೆಗೆ ಬಂದು ದಂಡ ಕಟ್ಟಿ ಬೈಕ್‌ ಬಿಡಿಸಿಕೋ ಎಂದು ಬೈಕ್‌ ತೆಗೆದುಕೊಂಡು ಹೋಗಿದ್ದಾನೆ. ನಂತರ ಠಾಣೆಗೆ ಹೋಗಿ ವಿಚಾರಣೆ ಮಾಡಿದರೆ, ಯಾವುದೇ ಬೈಕ್‌ ಠಾಣೆಗೆ ಬಂದಿಲ್ಲ. ನಮ್ಮ ಸಿಬ್ಬಂದಿಯೂ ಆ ಕೆಲಸ ಮಾಡಿಲ್ಲ

Vijaya Karnataka Web 24 Aug 2020, 8:47 pm
ಹುಬ್ಬಳ್ಳಿ: ಪೊಲೀಸ್‌ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬನಿಂದ ರಾಯಲ್‌ ಎನ್‌ಫೀಲ್ಡ್‌ ಬೈಕ್‌ ತೆಗೆದುಕೊಂಡ ಹೋದ ಘಟನೆ ಇಲ್ಲಿನ ದೇಶಪಾಂಡೆ ನಗರದ ಕೃಷ್ಣ ಕಲ್ಯಾಣ ಮಂಟಪದ ಬಳಿ ನಡೆದಿದೆ.
Vijaya Karnataka Web ಪೊಲೀಸ್‌
ಪೊಲೀಸ್‌


ಭಾನುವಾರ ಸಂಜೆ ಕೃಷ್ಣ ಕಲ್ಯಾಣ ಮಂಟಪದ ರಾಯಲ್‌ ಎನ್‌ಫೀಲ್ಡ್‌ನೊಂದಿಗೆ ನಿಂತ ವ್ಯಕ್ತಿಯ ಬಳಿ ಬಂದ 30-35 ವಯಸ್ಸಿನ ವ್ಯಕ್ತಿಯೊಬ್ಬ ತಾನು ಪೊಲೀಸ್‌ನಿದ್ದು, ರಸ್ತೆಯಲ್ಲಿನಿಂತಿದ್ದಕ್ಕೆ ಐದನೂರು ರೂ. ದಂಡ ಕಟ್ಟು ಎಂದು ಕೇಳಿದ್ದಾನೆ. ಆತ ನಾನೇನು ತಪ್ಪು ಮಾಡಿಲ್ಲ. ದಂಡ ಯಾವುದಕ್ಕೆ ಕಟ್ಟಬೇಕು ಎಂದು ಹೇಳಿದ್ದಾನೆ.

ಆಗ ದಂಡ ಕಟ್ಟಲಾಗದಿದ್ದರೇ ಹುಬ್ಬಳ್ಳಿ ಉಪನಗರ ಪೊಲೀಸ್‌ ಠಾಣೆಗೆ ಬಂದು ದಂಡ ಕಟ್ಟಿ ಬೈಕ್‌ ಬಿಡಿಸಿಕೋ ಎಂದು ಬೈಕ್‌ ತೆಗೆದುಕೊಂಡು ಹೋಗಿದ್ದಾನೆ. ನಂತರ ಠಾಣೆಗೆ ಹೋಗಿ ವಿಚಾರಣೆ ಮಾಡಿದರೆ, ಯಾವುದೇ ಬೈಕ್‌ ಠಾಣೆಗೆ ಬಂದಿಲ್ಲ. ನಮ್ಮ ಸಿಬ್ಬಂದಿಯೂ ಆ ಕೆಲಸ ಮಾಡಿಲ್ಲ ಎಂದು ಹೇಳಿದ್ದಾರೆ.

ಈ ಕುರಿತು ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೈಕ್‌ ಪತ್ತೆ ಕಾರ್ಯ ಮುಂದುವರೆದಿದೆ.

ಆನ್‌ಲೈನ್‌ನಲ್ಲಿ 27 ಸಾವಿರ ರೂ. ವಂಚನೆ

ಸೋಫಾ ಖರೀದಿ ಮಾಡುವುದಾಗಿ ಹೇಳಿ ಕ್ಯೂಆರ್‌ ಕೋಡ್‌ ಬಳಸಿಕೊಂಡು ಅಪರಿಚಿತರು ಮಹಿಳೆಯೊಬ್ಬಳ 29,799 ರೂ. ಆನ್‌ಲೈನ್‌ ವಂಚನೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.

30 ಸಾವಿರ ರೂ.ಗಳಿಗೆ ಸೋಫಾ ಮಾರಾಟ ಮಾಡುವುದಾಗಿ ನಗರದ ಮಹಿಳೆಯೊಬ್ಬಳು ಒಎಲ್‌ಎಕ್ಸ್‌ನಲ್ಲಿ ಹಾಕಿದ್ದಳು. ಯಾರೋ ಅಪರಿಚಿತರು ಸೋಫಾ ಖರೀದಿ ಮಾಡುವುದಾಗಿ ಒಎಲ್‌ಎಕ್ಸ್‌ನಲ್ಲಿ ಚಾಟ್‌ ಸಹ ಮಾಡಿದ್ದರು. ಆಗ ಆಕೆಯ ವಾಟ್ಸಾಪ್‌ ನಂಬರನ್ನು ಸಹ ಶೇರ್‌ ಮಾಡಿದ್ದಳು. ಅದಕ್ಕೆ ಕರೆ ಮಾಡಿ ಒಎಲ್‌ಎಕ್ಸ್‌ನಲ್ಲಿ ಚಾಟ್‌ ಮಾಡಿದವನು ತಾನೇ ಎಂದು ಹೇಳಿಕೊಂಡಿದ್ದಾನೆ. ನಂತರ ಕ್ಯೂಆರ್‌ ಕೋಡ್‌ ಮುಖಾಂತರ ಹಣ ವರ್ಗಾವಣೆ ಮಾಡುವುದಾಗಿ ಹೇಳಿ ಕ್ಯೂಆರ್‌ ಕೋಡ್‌ ಕಳುಹಿಸಿದ್ದಾನೆ. ಅದಕ್ಕೆ ಮಹಿಳೆ ತಮ್ಮ ಬ್ಯಾಂಕ್‌ ಖಾತೆ ಸಂಖ್ಯೆಯನ್ನು ಲಿಂಕ್‌ ಮಾಡಿದ್ದಾರೆ. ಅಷ್ಟೇ ಅಲ್ಲದೇ ಗೂಗಲ್‌ ಪೇ ಖಾತೆಯಿಂದ ಕ್ಯೂಆರ್‌ ಕೋಟ್‌ ಸ್ಕ್ಯಾ‌ನ್‌ ಮಾಡಿ ಯುಪಿಐ ಪಿನ್‌ ಸಹ ಹಾಕಿದ್ದಾರೆ.

ಆದರೆ, ಕ್ಯೂಆರ್‌ ಕೋಡ್‌ ಕಳುಹಿಸಿದ ವ್ಯಕ್ತಿಯ ಖಾತೆಯಿಂದ ಯಾವುದೇ ಹಣ ಬಂದಿಲ್ಲ. ಬದಲಾಗಿ ಮಹಿಳೆ ಖಾತೆಯಿಂದಲೇ 29,799 ರೂ. ಕಡಿತಗೊಂಡಿದೆ. ಈ ಆನ್‌ಲೈನ್‌ ವಂಚನೆ ವಿರುದ್ಧ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಕರಣ ದಾಖಲಾಗಿದೆ.

ಸಂಚಾರ ನಿಯಮ ಉಲ್ಲಂಘನೆ ಮಾಡಿದವರ ಮೇಲೆ ಭಾನುವಾರ 237 ಕೇಸಗಳನ್ನು ದಾಖಲಿಸಿದ್ದು 1,33,650 ರೂ. ದಂಡ ಹಾಕಲಾಗಿದೆ ಎಂದು ಪೊಲೀಸ್‌ ಕಮೀಷನರ್‌ ಕಚೇರಿ ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ