ಆ್ಯಪ್ನಗರ

ಹುಬ್ಬಳ್ಳಿ: ಕಚೇರಿಗಳೇ ಸೀಲ್‌ಡೌನ್‌, ಜನರ ಪರದಾಟ

ಪ್ರಸಕ್ತವಾಗಿ ಮುಂಗಾರು ಬೆಳೆ ವಿಮೆ ಪಾವತಿಗೆ ಸರಕಾರ ಅಧಿಸೂಚನೆ ಹೊರಡಿಸಿದೆ. ಇಂಥ ಸಂದರ್ಭದಲ್ಲಿ ಪಹಣಿ ಪತ್ರ ಪಡೆಯುವುದು ಸೇರಿದಂತೆ ಇತರ ದಾಖಲೆಗಳನ್ನು ಪಡೆಯಲು ತಾಲೂಕಿನ ರೈತರು ತಹಸೀಲ್ದಾರ ಕಚೇರಿಗೆ ಬರುತ್ತಾರೆ.

Vijaya Karnataka Web 9 Jul 2020, 6:40 pm
ಧಾರವಾಡ: ಇಲ್ಲಿನ ಕೆ.ಸಿ. ಪಾರ್ಕ್ ಹತ್ತಿರದ ಅರಣ್ಯ ಇಲಾಖೆಯ ಸಿಬ್ಬಂದಿಯೊಬ್ಬರಲ್ಲಿ ಇತ್ತೀಚೆಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಇಲಾಖೆಯ ಅರಣ್ಯ ಸಂಕೀರ್ಣ ಗೇಟ್‌ಗೆ ಕಟ್ಟಿಗೆ ಅಡ್ಡವಾಗಿಟ್ಟು, ಬಂದ್‌ ಮಾಡಲಾಗಿದೆ. ಇನ್ನು ಉಪನಗರ ಠಾಣೆ ಪಕ್ಕದಲ್ಲಿರುವ ಅರಣ್ಯ ಇಲಾಖೆ ಸಿಬ್ಬಂದಿಯ ವಸತಿಗೃಹದ ನಾಲ್ವರಿಗೆ ಕೊರೊನಾ ಸೋಂಕು ಬಾಧಿಸಿದೆ. ಹೀಗಾಗಿ ಇಡೀ ಪ್ರದೇಶವನ್ನು ಸೀಲ್‌ಡೌನ್‌ ಮಾಡಿ, ಪ್ರವೇಶವನ್ನು ನಿಬಂರ್‍ಧಿಸಲಾಗಿದೆ.
Vijaya Karnataka Web ಲಾಕ್‌ಡೌನ್‌
ಲಾಕ್‌ಡೌನ್‌


ಖಜಾನೆ ಕಚೇರಿಗೂ: ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಆವರಣದ ಜಿಲ್ಲಾ ಖಜಾನೆ ಇಲಾಖೆಯ ಕಚೇರಿ ಸಿಬ್ಬಂದಿಯೊಬ್ಬರಲ್ಲಿ ಕೊರೊನಾ ಕಾಣಿಸಿಕೊಂಡಿದೆ. ಇದರಿಂದ ಇಡೀ ಕಚೇರಿಯನ್ನು ಸ್ಯಾನಿಟೈಜೇಶನ್‌ ಮಾಡಿ, ಕಡಿಮೆ ಸಿಬ್ಬಂದಿ ಮಾತ್ರ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳಲಾಗಿದೆ.

ನಗರದ ತಹಸೀಲ್ದಾರ್‌ ಕಚೇರಿಯಲ್ಲಿಈ ಹಿಂದೆ ಗುತ್ತಿಗೆ ನೌಕರನಾಗಿ ಕಾರ್ಯ ನಿರ್ವಹಿಸಿದ್ದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಆತ ಕೆಲಸ ಬಿಟ್ಟಿದ್ದರೂ ಆಗಾಗ ತಹಸೀಲ್ದಾರ್‌ ಕಚೇರಿಗೆ ಬಂದು ಆಹಾರ ಇಲಾಖೆ, ಭೂಮಿ ವಿಭಾಗ, ಪಹಣಿ ಪತ್ರ ವಿತರಣೆ ವಿಭಾಗದ ಸಿಬ್ಬಂದಿಯೊಂದಿಗೆ ಸಂಪರ್ಕ ಹೊಂದಿದ್ದ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಎರಡು ದಿನಗಳಿಂದ ಇಡೀ ಕಚೇರಿಯನ್ನು ಬಂದ್‌ ಮಾಡಿ, ಕಚೇರಿ ಆವರಣ ಹಾಗೂ ಕೊಠಡಿಗಳಲ್ಲಿ ರಾಸಾಯನಿಕ ಸಿಂಪರಿಸಲಾಗಿದೆ. ತಹಸೀಲ್ದಾರ್‌ ಕಚೇರಿಗೆ ವಿವಿಧ ಕೆಲಸಗಳಿಗಾಗಿ ಬರುವ ಸಾರ್ವಜನಿಕರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಆದರೆ ಕಚೇರಿಯ ಸಿಬ್ಬಂದಿಗೆ ರಜೆ ನೀಡಿಲ್ಲ ಇದರಿಂದ, ಆತಂಕದಲ್ಲಿ ಕೆಲಸ ಮಾಡಬೇಕಾಗಿದೆ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ನೌಕರರು. ತಹಸೀಲ್ದಾರ್‌ ಕಚೇರಿ, ಖಜಾನೆ ಇಲಾಖೆ ಹೀಗೆ ಸರಕಾರದ ಕಚೇರಿಗಳೇ ಸೀಲ್‌ಡೌನ್‌ ಆಗಿದ್ದರಿಂದ ಜನರು ತಮ್ಮ ವೈಯಕ್ತಿಕ ಕೆಲಸಕ್ಕೂ ಪರದಾಡಬೇಕಾಗಿದೆ.

ಪರ್ಯಾಯ ವ್ಯವಸ್ಥೆ ಮಾಡಿ

ಪ್ರಸಕ್ತವಾಗಿ ಮುಂಗಾರು ಬೆಳೆ ವಿಮೆ ಪಾವತಿಗೆ ಸರಕಾರ ಅಧಿಸೂಚನೆ ಹೊರಡಿಸಿದೆ. ಇಂಥ ಸಂದರ್ಭದಲ್ಲಿ ಪಹಣಿ ಪತ್ರ ಪಡೆಯುವುದು ಸೇರಿದಂತೆ ಇತರ ದಾಖಲೆಗಳನ್ನು ಪಡೆಯಲು ತಾಲೂಕಿನ ರೈತರು ತಹಸೀಲ್ದಾರ ಕಚೇರಿಗೆ ಬರುತ್ತಾರೆ. ಆದರೆ 2- 3 ದಿನಗಳಿಂದ ಪ್ರವೇಶಕ್ಕೆ ನಿರ್ಬಂಧ ಹಾಕಿದ್ದರಿಂದ ಸಾಕಷ್ಟು ಜನರು ಕಚೇರಿ ಬಾಗಿಲವರೆಗೆ ಬಂದು ವಾಪಸ್‌ ಹೋಗುತ್ತಿದ್ದಾರೆ. ಇದೇ ರೀತಿಯಾದರೆ ಬೆಳೆ ವಿಮೆಯನ್ನು ಹೇಗಪ್ಪ ಪಾವತಿಸುವುದು ಎಂದು ಚಿಂತೆಗೀಡಾಗಿದ್ದಾರೆ. ಆದ್ದರಿಂದ ತಹಸೀಲ್ದಾರ ಕಚೇರಿಯವರು ಪರ್ಯಾಯ ವ್ಯವಸ್ಥೆ ಮಾಡಿ, ರೈತರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು ಎನ್ನುವುದು ನಾಗರಿಕರ ಆಗ್ರಹವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ