ಆ್ಯಪ್ನಗರ

ಮೇ. 4ರಿಂದ ಸ್ವರತೀರ್ಥ ನೃತ್ಯ ಮಹೋತ್ಸವ

ಹುಬ್ಬಳ್ಳಿ : ಋುತ್ವಿಕ್‌ ಫೌಂಡೇಶನ್‌ ಹಾಗೂ ಸ್ವರತೀರ್ಥ ಪ್ರತಿಷ್ಠಾನದ ವತಿಯಿಂದ ಮೇ 4, 5 ರಂದು ಸ್ವರತೀರ್ಥ ಸಂಗೀತ ಹಾಗೂ ನೃತ್ಯ ಮಹೋತ್ಸವ ಇಲ್ಲಿನ ಸವಾಯಿ ಗಂಧರ್ವ ಸಭಾಭವನದಲ್ಲಿ ಆಯೋಜಿಸಲಾಗಿದೆ ಪಂ.ಜಯತೀರ್ಥ ಮೇವುಂಡಿ ಹೇಳಿದರು.

Vijaya Karnataka 30 Apr 2019, 5:00 am
ಹುಬ್ಬಳ್ಳಿ : ಋುತ್ವಿಕ್‌ ಫೌಂಡೇಶನ್‌ ಹಾಗೂ ಸ್ವರತೀರ್ಥ ಪ್ರತಿಷ್ಠಾನದ ವತಿಯಿಂದ ಮೇ 4, 5 ರಂದು ಸ್ವರತೀರ್ಥ ಸಂಗೀತ ಹಾಗೂ ನೃತ್ಯ ಮಹೋತ್ಸವ ಇಲ್ಲಿನ ಸವಾಯಿ ಗಂಧರ್ವ ಸಭಾಭವನದಲ್ಲಿ ಆಯೋಜಿಸಲಾಗಿದೆ ಪಂ.ಜಯತೀರ್ಥ ಮೇವುಂಡಿ ಹೇಳಿದರು.
Vijaya Karnataka Web may swarathirtha dance jubilee from 4th
ಮೇ. 4ರಿಂದ ಸ್ವರತೀರ್ಥ ನೃತ್ಯ ಮಹೋತ್ಸವ


ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವ ಕಲಾವಿದರಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಮುಂಬೈನ ಪ್ರವೀಣ ಕಡ್ಲೆಯವರು ಸ್ಥಾಪಿಸಿದ ಋುತ್ವಿಕ್‌ ಫೌಂಡೇಶನ್‌ ನೆರವಿನೊಂದಿಗೆ ಈ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಮೇ 4ರಂದು ಸಂಜೆ 5ಕ್ಕೆ ನಡೆಯುವ ಕಾರ್ಯಕ್ರಮಕ್ಕೆ ಪ್ರವೀಣ ಕಡ್ಲೆ ಚಾಲನೆ ನೀಡುವರು. ನಂತರ ಪುಣೆಯ ರುಜುತಾ ಸೋಮನ್‌ ಅವರಿಂದ ಕಥಕ್‌ ನೃತ್ಯ, ಉತ್ತರಾ ಟಿ.ವಿ ಅವರಿಂದ ಸಂತೂರ ವಾದನ ಕಾರ್ಯಕ್ರಮ ನಡೆಯಲಿದೆ ಎಂದರು.

ಮೇ 5ರಂದು ಬೆಳಗ್ಗೆ 8.30ಕ್ಕೆ ವಿದೂಷಿ ಮಂಜುಷಾ ಪಾಟೀಲ ಹಾಗೂ ಪಂ.ರೂಪಕ ಕುಲಕರ್ಣಿ ಅವರಿಂದ ಗಾಯನ -ಕೊಳಲು ಜುಗಲ್‌ಬಂಧಿ, ಗದುಗಿನ ವೀರೇಶ್ವರ ಪುಣ್ಯಾಶ್ರಮದ ಅಂಧ ಕಲಾವಿದ ಹುಚ್ಚಯ್ಯ ಹಿರೇಮಠ ಅವರಿಂದ ಗಾಯನ ಕಾರ್ಯಕ್ರಮ ಜರುಗಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಉದಯ್‌ ದೇಸಾಯಿ, ವಿನಯ ನಾಯಕ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ