ಆ್ಯಪ್ನಗರ

ಯೋಗದಿಂದ ಮನಸ್ಸು ನಿಯಂತ್ರಣ

ಧಾರವಾಡ: ನಗರದ ಮಲ್ಲಸಜ್ಜನ ವ್ಯಾಯಾಮ ಮತ್ತು ಆರೋಗ್ಯ ಶಿಕ್ಷಣ ಸಂಸ್ಥೆಯ ಜಿ. ಕೆ. ಜಾಧವ ಯೋಗ ಮತ್ತು ಒತ್ತಡ ನಿಯಂತ್ರಣ ಕೇಂದ್ರದ 13ನೇ ವಾರ್ಷಿಕೋತ್ಸವ ಸಮಾರಂಭ ಜರುಗಿತು.

Vijaya Karnataka 25 Dec 2019, 5:00 am
ಧಾರವಾಡ: ನಗರದ ಮಲ್ಲಸಜ್ಜನ ವ್ಯಾಯಾಮ ಮತ್ತು ಆರೋಗ್ಯ ಶಿಕ್ಷಣ ಸಂಸ್ಥೆಯ ಜಿ. ಕೆ. ಜಾಧವ ಯೋಗ ಮತ್ತು ಒತ್ತಡ ನಿಯಂತ್ರಣ ಕೇಂದ್ರದ 13ನೇ ವಾರ್ಷಿಕೋತ್ಸವ ಸಮಾರಂಭ ಜರುಗಿತು.
Vijaya Karnataka Web mind control from yoga
ಯೋಗದಿಂದ ಮನಸ್ಸು ನಿಯಂತ್ರಣ


ಉದ್ಘಾಟಿಸಿ ಮಾತನಾಡಿದ ರಾಷ್ಟ್ರೀಯ ಹೆದ್ದಾರಿ-65 ವಿಶೇಷ ಭೂಸ್ವಾಧೀನ ಅಧಿಕಾರಿ ಶಾರದಾ ಕೋಲಕರ, ನಮ್ಮ ದೇಹ ಹಾಗೂ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಯೋಗವು ಅತ್ಯಂತ ಸಹಕಾರಿ ಆಗಿದೆ ಎಂದರು.

ಯೋಗ ಕೇಂದ್ರದ ಸದಸ್ಯೆ ಸುಮನ್‌ ಘಂಟೆಣ್ಣವರ ಮಾತನಾಡಿ, ಯೋಗವು ಕೇವಲ ದೈಹಿಕ ವ್ಯಾಯಾಮವಲ್ಲ. ಇದು ಬುದ್ಧಿ, ಮನಸ್ಸು ಹಾಗೂ ದೇಹದ ನಡುವೆ ಸಮತೋಲನ ಸಾಧಿಸುವ ಬಹುಮುಖ್ಯ ಸಾಧನ ಎಂದರು.

ಡಾ. ಭೀಮಾಶಂಕರ ಜೋಶಿ ಮಾತನಾಡಿ, ಸುಖ ಹಾಗೂ ದುಃಖವನ್ನು ಸಮನಾಗಿ ಸ್ವೀಕರಿಸುವ ಶಕ್ತಿ ಇಂದು ಜನರಲ್ಲಿಇಲ್ಲದಾಗಿದೆ ಎಂದರು.

ಯೋಗ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ವಿತರಿಸಲಾಯಿತು. ಯೋಗ ಕೇಂದ್ರದ ಸದಸ್ಯರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಅನುಷಾ ಹಂಚಿನಮನಿ, ಮಲ್ಲಿಕಾರ್ಜುನ ಹರ್ಲಾಪೂರ, ಕೃಷ್ಣ ಅರವೇಡ, ಈಶ್ವರಿ ಪೂಜಾರ, ಸ್ನೇಹಲತಾ ಅಂಗಡಿ ಇದ್ದರು. ಮಂಜುನಾಥ ಹೂಗಾರ ಸ್ವಾಗತಿಸಿದರು. ಶೋಭಾ ಹೊಸಮನಿ ನಿರೂಪಿಸಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ