ಆ್ಯಪ್ನಗರ

ಸಚಿವ ಡಿ.ಕೆ.ಶಿವಕುಮಾರ ಕ್ರಮಕ್ಕೆ ಖಂಡನೆ

ಧಾರವಾಡ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಡಿ.ಕೆ. ಶಿವಕುಮಾರ 2019-2020 ರ ಸಾಲಿನ ಸಂಘ ಸಂಸ್ಥೆಗಳಿಗೆ ನೀಡುವ ಅನುದಾನ ಸ್ಥಗಿತಗೊಳಿಸುವ ನಿರ್ಧಾರ ತೆಗೆದುಕೊಂಡು ಹಾಗೂ 2018-2019 ನೇ ಸಾಲಿನ ಅನುದಾನ ಬಿಡುಗಡೆ ಮಾಡದೇ ರಾಜ್ಯದ ಸಾಂಸ್ಕೃತಿಕ ಕ್ಷೇತ್ರಕ್ಕೆ ಅಪಮಾನ ಮಾಡಿದ್ದಾರೆ ಎಂದು ರಂಗಭೂಮಿ ಪುರೋಭಿವೃದ್ಧಿ ಸಮಿತಿ ದೂರಿದೆ.

Vijaya Karnataka 5 Jul 2019, 5:00 am
ಧಾರವಾಡ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಡಿ.ಕೆ. ಶಿವಕುಮಾರ 2019-2020 ರ ಸಾಲಿನ ಸಂಘ ಸಂಸ್ಥೆಗಳಿಗೆ ನೀಡುವ ಅನುದಾನ ಸ್ಥಗಿತಗೊಳಿಸುವ ನಿರ್ಧಾರ ತೆಗೆದುಕೊಂಡು ಹಾಗೂ 2018-2019 ನೇ ಸಾಲಿನ ಅನುದಾನ ಬಿಡುಗಡೆ ಮಾಡದೇ ರಾಜ್ಯದ ಸಾಂಸ್ಕೃತಿಕ ಕ್ಷೇತ್ರಕ್ಕೆ ಅಪಮಾನ ಮಾಡಿದ್ದಾರೆ ಎಂದು ರಂಗಭೂಮಿ ಪುರೋಭಿವೃದ್ಧಿ ಸಮಿತಿ ದೂರಿದೆ.
Vijaya Karnataka Web minister dk shivakumara condemns the move
ಸಚಿವ ಡಿ.ಕೆ.ಶಿವಕುಮಾರ ಕ್ರಮಕ್ಕೆ ಖಂಡನೆ


ಈ ಕುರಿತು ಸಮಿತಿಯು ಗುರುವಾರ ಪತ್ರಿಕಾ ಪ್ರಕಟಣೆ ನೀಡಿದ್ದು, ಮನಸೂರ ಮಠದ ಗುರುಗಳಾದ ಬಸವರಾಜ ದೇವರು ಅವರ ನೇತೃತ್ವದಲ್ಲಿ ವಿವಿಧ ಸಾಂಸ್ಕೃತಿಕ ಸಂಘಟನೆಗಳ ಮುಖಂಡರು ಸಭೆ ಸೇರಿ ಡಿ.ಕೆ. ಶಿವುಕುಮಾರ ಅವರ ನಡೆ ಖಂಡಿಸಿದ್ದಾರೆ.

ಮುಂಬರುವ ದಿನಗಳಲ್ಲಿ ಎಲ್ಲ ಜಿಲ್ಲೆಗಳಲ್ಲಿ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ. ಅಲ್ಲದೇ ಮುಖ್ಯಮಂತ್ರಿಗಳು ಸಂಸ್ಕೃತಿ ಸಚಿವ ಡಿ.ಕೆ.ಶಿವಕುಮಾರ ಅವರ ರಾಜೀನಾಮೆ ಪಡೆದು ಸಾಂಸ್ಕೃತಿಕ ಪ್ರಜ್ಞೆಯುಳ್ಳ ಸಚಿವರನ್ನು ನೇಮಿಸಬೇಕು ಎಂದು ಎಲ್ಲ ಕಲಾ ಸಂಘಟನೆಗಳ ಮುಖಂಡರು ಮೈತ್ರಿ ಸರಕಾರಕ್ಕೆ ಒತ್ತಾಯಿಸಿದ್ದಾರೆ.

ಸಭೆಯಲ್ಲಿ ಸಾಂಸ್ಕೃತಿಕ ತಂಡಗಳ ಮುಖಂಡರಾದ ಬಿ.ಐ ಇಳಿಗೇರ, ಇಮಾಮಸಾಬ ವಲ್ಲೆಪ್ಪನವರ, ಯಕ್ಕೀರಪ್ಪ ನಡುವಿನಮನಿ, ಪ್ರಭು ಹಂಚಿನಾಳ, ಬಸಲಿಂಗಯ್ಯ ಹಿರೇಮಠ, ವಿಶ್ವೇಶ್ವರಿ ಹಿರೇಮಠ, ಪ್ರಕಾಶ ಮಲ್ಲಿಗವಾಡ, ಶಿವಾನಂದ ಅಮರಶೆಟ್ಟಿ, ಮೀರಾ ಬೀರಣ್ಣವರ, ಎಸ್‌.ಎಸ್‌. ಚಿಕ್ಕಮಠ, ಸುಜಾತಾ ಸಾಲಿಮಠ, ಅನ್ನಪೂರ್ಣಾ ಉಂಡಿ, ಎನ್‌.ಎಂ ಪಾಟೀಲ, ಪ್ರಕಾಶ ಗರುಡ, ವಿಜಯ ದೊಡಮನಿ, ಮಹಾದೇವ ದೊಡಮನಿ, ಕೋಟೇಶ ಹುರುಳಿ, ಸಂಜೀವ ಕುಂದಗೋಳ, ಅಶ್ಪಾಕ ಸಯ್ಯದ, ರಘುವೀರ ಅರವೇಡ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ