ಆ್ಯಪ್ನಗರ

ಹುಬ್ಬಳ್ಳಿ: 1 ಕೋಟಿ ರೂ. ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಸಚಿವ ಜಗದೀಶ್ ಶೆಟ್ಟರ್‌ ಚಾಲನೆ

ಹಳೇ ಎನ್‌.ಎಚ್‌. ರಸ್ತೆಯಿಂದ ಚೆನ್ನಪೇಟೆ ಸಂಪರ್ಕಿಸುವ ಹಾಗೂ ತೊರವಿ ಹಕ್ಕಲಿನ 2 ಒಳ ರಸ್ತೆಗಳನ್ನು ಕಾಂಕ್ರೀಟ್‌ನಿಂದ ನಿರ್ಮಿಸಲಾಗುತ್ತಿದೆ. ನಂತರ ಸಚಿವರು ಲಿಂಗರಾಜ ನಗರದ ಅತ್ತಿಗೇರಿ ಲೇಔಟ್‌ನಲ್ಲಿ 5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಸೇತುವೆ, ಕಲ್ಯಾಣನಗರ ರಂಗಮಂದಿರ ಬಳಿ 60 ಲಕ್ಷ ರೂ. ವೆಚ್ಚದ ಡ್ರೇನ್‌ ವರ್ಕ್ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.

Vijaya Karnataka Web 10 Mar 2021, 2:08 pm
ಹುಬ್ಬಳ್ಳಿ: ನಗರದ ವಾರ್ಡ್‌ ನಂ.44ರ ತೊರವಿ ಹಕ್ಕಲಿನ ದುರ್ಗಾದೇವಿ ದೇವಾಲಯದ ಎದುರು 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಸಿ.ಸಿ.ರಸ್ತೆ ನಿರ್ಮಾಣ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್‌ ಶೆಟ್ಟರ್‌ ಸೋಮವಾರ ಭೂಮಿ ಪೂಜೆ ನೆರವೇರಿಸಿದರು.
Vijaya Karnataka Web jagadish shettar

ಹಳೇ ಎನ್‌.ಎಚ್‌. ರಸ್ತೆಯಿಂದ ಚೆನ್ನಪೇಟೆ ಸಂಪರ್ಕಿಸುವ ಹಾಗೂ ತೊರವಿ ಹಕ್ಕಲಿನ 2 ಒಳ ರಸ್ತೆಗಳನ್ನು ಕಾಂಕ್ರೀಟ್‌ನಿಂದ ನಿರ್ಮಿಸಲಾಗುತ್ತಿದೆ. ನಂತರ ಸಚಿವರು ಲಿಂಗರಾಜ ನಗರದ ಅತ್ತಿಗೇರಿ ಲೇಔಟ್‌ನಲ್ಲಿ 5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಸೇತುವೆ, ಕಲ್ಯಾಣನಗರ ರಂಗಮಂದಿರ ಬಳಿ 60 ಲಕ್ಷ ರೂ. ವೆಚ್ಚದ ಡ್ರೇನ್‌ ವರ್ಕ್ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ಹೆಣ್ಮಕ್ಳೇ ಸ್ಟ್ರಾಂಗು ಗುರೂ..! ‘ವಿಮೆನ್ಸ್‌ ಡೇ’ ದಿನ ಮಹಿಳಾ ಸಿಬ್ಬಂದಿಯೇ ಓಡಿಸಿದ್ರು ಪ್ಯಾಸೆಂಜರ್‌ ರೈಲು..!
ಕಲ್ಯಾಣ ನಗರ ನಿವಾಸಿಗಳ ಸಂಘ ಸದಸ್ಯರು ಮೂಲಭೂತ ಸೌಕರ್ಯ ಒದಗಿಸುವಂತೆ ಸಚಿವರಿಗೆ ಮನವಿ ಸಲ್ಲಿಸಿದರು. ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ ನಿರ್ದೇಶಕ ಮಲ್ಲಿಕಾರ್ಜುನ ಸಾವಕಾರ, ಪಾಲಿಕೆ ಮಾಜಿ ಸದಸ್ಯ ರಾಜಣ್ಣ ಕೊರವಿ, ಮುಖಂಡ ಸಂತೋಷ ಚವ್ಹಾಣ್‌ ಸೇರಿದಂತೆ ಅನೇಕರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ