ಆ್ಯಪ್ನಗರ

ತಾಯಿ, ಗುರುವಿನ ಋುಣ ತೀರಿಸಲಾಗದು

ಧಾರವಾಡ : ಜೀವನದಲ್ಲಿ ಮೂರು ಜನ ನಮಗೆ ಗುರುಗಳು ಆಗಿರುತ್ತಾರೆ. ಮೊದಲು ತಾಯಿ, ಎರಡನೇ ಪ್ರಾಥಮಿಕ ಶಾಲೆಯ ಶಿಕ್ಷ ಕರು, ಮೂರನೇಯವರು ಧರ್ಮಗುರು, ಮಠಾಧೀಶರು ಎಂದು ಶಹರ ಕ್ಷೇತ್ರ ಶಿಕ್ಷ ಣಾಧಿಕಾರಿ ಎ.ಎ.ಖಾಜಿ ಅಭಿಪ್ರಾಯಪಟ್ಟರು.

Vijaya Karnataka 13 Aug 2019, 5:00 am
ಧಾರವಾಡ : ಜೀವನದಲ್ಲಿ ಮೂರು ಜನ ನಮಗೆ ಗುರುಗಳು ಆಗಿರುತ್ತಾರೆ. ಮೊದಲು ತಾಯಿ, ಎರಡನೇ ಪ್ರಾಥಮಿಕ ಶಾಲೆಯ ಶಿಕ್ಷ ಕರು, ಮೂರನೇಯವರು ಧರ್ಮಗುರು, ಮಠಾಧೀಶರು ಎಂದು ಶಹರ ಕ್ಷೇತ್ರ ಶಿಕ್ಷ ಣಾಧಿಕಾರಿ ಎ.ಎ.ಖಾಜಿ ಅಭಿಪ್ರಾಯಪಟ್ಟರು.
Vijaya Karnataka Web DRW-11RANGA07
ಧಾರವಾಡ ಆರ್‌ಎಲ್‌ಎಸ್‌ ಪ್ರೌಢಶಾಲೆಯಲ್ಲಿ ಶ್ರಾವಣ ಮಾಸದ ನಿಮಿತ್ತ ಆಯೋಜಿಸಿದ್ದ ವಚನ ಲೇಖನ ಹಾಗೂ ಭಾಷಣ ಸ್ಪರ್ಧೆಯನ್ನು ಕ್ಷೇತ್ರ ಶಿಕ್ಷಾಣಾಧಿಕಾರಿ ಎ.ಎ.ಖಾಜಿ ಉದ್ಘಾಟಿಸಿದರು.


ನಗರದ ಆರ್‌.ಎಲ್‌.ಎಸ್‌.ಪ್ರೌಢಶಾಲೆಯಲ್ಲಿ ಭಾನುವಾರ ಬಸವ ಕೇಂದ್ರವು ಶ್ರಾವಣ ಮಾಸದ ನಿಮಿತ್ತ ಆಯೋಜಿಸಿದ್ದ ವಚನ ಲೇಖನ ಹಾಗೂ ಭಾಷಣ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತಾಯಿ ಹಾಗೂ ಗುರುವಿನ ಋುಣ ತೀರಿಸಲಾಗದು. ತಾಯಿಯಂತೆ ಮತ್ತೊಬ್ಬರು ಆಗಲು ಸಾಧ್ಯವೇ ಇಲ್ಲ. ತಾಯಿ ಮನೆಯ ಮೊದಲ ಪಾಠಶಾಲೆಯಾದರೆ ಶಿಕ್ಷ ಕ ಜ್ಞಾನ, ಮಠಾಧೀಶ ಧರ್ಮ, ಸಂಸ್ಕೃತಿ ಹಾಗೂ ಆಧ್ಯಾತ್ಮದ ಆತ್ಮದ ಸವಿಯನ್ನು ಉಣಬಡಿಸುತ್ತಾನೆ. ಹೀಗಾಗಿ ಹರ ಮುನಿದರೂ ಗುರು ಕಾಯುವನು ಎಂದರು.

ಪ್ರತಿಯೊಬ್ಬನ ಶ್ರೇಯಸ್ಸು ಅವನ ದೃಢತೆಯನ್ನು ಅವಲಂಬಿಸಿದೆ. ಗುರು, ಶರಣರು, ಸಂತರು, ದಾರ್ಶನಿಕರ, ಮಹಾತ್ಮರ ಮಹತ್ವದ ಸಂದೇಶಗಳು ನಮಗೆ ಸಹಾಯಕವಾಗುತ್ತವೆ. ಯಾವ ವಿಷಯದಲ್ಲಿ ನಮಗೆ ಯಾರಿಂದ ಜ್ಞಾನದ ಪ್ರಕಾಶ ದೊರೆಯುತ್ತದೆಯೋ ಆಗ ನಮ್ಮ ಅಜ್ಞಾನದ ಅಂಧಕಾರ ದೂರವಾಗಲು ಸಾಧ್ಯ ಎಂದರು.

ಎನ್‌ಟಿಎಸ್‌ಎಸ್‌ ಕಾಲೇಜಿನ ಪ್ರಾಚಾರ್ಯ ಅನುರಾಧಾ ಆರಾಧ್ಯಮಠ ಮಾತನಾಡಿ, ಇಂದು ನಡೆಯುವ ವಚನ ಸ್ಪರ್ಧೆಯು ಕೇವಲ ಸ್ಪರ್ಧೆಯೆಂದು ಭಾವಿಸದೆ ಅದು ನಮ್ಮ ಬದುಕಿನ ಮಾರ್ಗದರ್ಶಕ ಎಂದು ಭಾವಿಸಬೇಕು. ವಚನಗಳನ್ನು ಓದುವುದರ ಜತೆಗೆ ಅಳವಡಿಕೆ ಮಾಡಿಕೊಳ್ಳಲು ಪ್ರಯತ್ನಿಸಿ. ಮಕ್ಕಳು, ಯುವಜನರು ವಚನ ಸಾಹಿತ್ಯವನ್ನು ಅಭ್ಯಾಸ ಮಾಡಿ ಗುಣವಂತ, ಪ್ರಜ್ಞಾವಂತರಾಗಿ ಉತ್ತಮ ಪ್ರಜೆಗಳಾಗಬೇಕು ಎಂದರು.

ಬಸವಕೇಂದ್ರ ಉಪಾಧ್ಯಕ್ಷ ಮಲ್ಲಿಕಾರ್ಜುನ ಚೌಧರಿ ಅಧ್ಯಕ್ಷ ತೆ ವಹಿಸಿದ್ದರು. ನಿವೃತ್ತ ಶಿಕ್ಷ ಕಿ ಶಕುಂತಲಾ ಮನ್ನಂಗಿ, ಬಾಲ ಬಸವ ಸೈನ್ಯದ ಅಧ್ಯಕ್ಷ ಶರಣು ಗೊಲ್ಲರ, ಶಿವಶರಣ ಕಲಬಶೆಟ್ಟರ, ಉಮೇಶ ಕಟಗಿ ವೇದಿಕೆ ಮೇಲಿದ್ದರು. ಎಫ್‌.ಬಿ.ಕಣವಿ ನಿರೂಪಿಸಿದರು. ಕೆ.ಎಂ.ಕೊಪ್ಪದ ಪ್ರಾಸ್ತಾವಿಕ ಮಾತನಾಡಿದರು. ಶಿವರುದ್ರಗೌಡ ಪಾಟೀಲ ಸ್ವಾಗತಿಸಿದರು. ಮಲ್ಲಿಕಾರ್ಜುನ ಬಾಗೇವಾಡಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ