ಆ್ಯಪ್ನಗರ

ದಾಂಪತ್ಯದ ಮಹತ್ವ ಸಾರಿದ 'ಮೈಸೂರು ಮಲ್ಲಿಗೆ'

ಹುಬ್ಬಳ್ಳಿ : ಗ್ರಾಮೀಣ ಜೀವನ ಮತ್ತು ಇಂದಿನ ಆಧುನಿಕ ಜೀವನದ ನಡುವಿನ ವ್ಯತ್ಯಾಸವನ್ನು ಎತ್ತಿ ತೋರಿಸುವ ಮೂಲಕ ದಾಂಪತ್ಯ ಜೀವನದ ಮಹತ್ವವನ್ನು ಎಳೆಯಳೆಯಾಗಿ ಬಿಚ್ಚಿಡುವಲ್ಲಿ 'ಮೈಸೂರು ಮಲ್ಲಿಗೆ' ನಾಟಕ ಯಶಸ್ವಿಯಾಯಿತು. ಹವ್ಯಾಸಿ ರಂಗ ಕಲಾವಿದರ ತಂಡವಾದ ದೇಶ್‌

Vijaya Karnataka 31 Dec 2018, 5:00 am
ಹುಬ್ಬಳ್ಳಿ : ಗ್ರಾಮೀಣ ಜೀವನ ಮತ್ತು ಇಂದಿನ ಆಧುನಿಕ ಜೀವನದ ನಡುವಿನ ವ್ಯತ್ಯಾಸವನ್ನು ಎತ್ತಿ ತೋರಿಸುವ ಮೂಲಕ ದಾಂಪತ್ಯ ಜೀವನದ ಮಹತ್ವವನ್ನು ಎಳೆಯಳೆಯಾಗಿ ಬಿಚ್ಚಿಡುವಲ್ಲಿ 'ಮೈಸೂರು ಮಲ್ಲಿಗೆ' ನಾಟಕ ಯಶಸ್ವಿಯಾಯಿತು. ಹವ್ಯಾಸಿ ರಂಗ ಕಲಾವಿದರ ತಂಡವಾದ ದೇಶ್‌ ಸಂಚಾರಿ ನಾಟಕ ತಂಡದಿಂದ ವಿದ್ಯಾನಗರದ ದೇಶಪಾಂಡೆ ಫೌಂಡೇಶನ್‌ ಆಡಿಟೋರಿಯಂ ಹಾಲ್‌ನಲ್ಲಿ ಹಾಕಲಾದ ಭವ್ಯ ರಂಗ ಸಜ್ಜಿಕೆಯಲ್ಲಿ ಶನಿವಾರ ನಾಟಕದ ಪ್ರದರ್ಶನ ನಡೆಯಿತು.
Vijaya Karnataka Web mysore mallige
ದಾಂಪತ್ಯದ ಮಹತ್ವ ಸಾರಿದ 'ಮೈಸೂರು ಮಲ್ಲಿಗೆ'


ರಾಜೇಂದ್ರ ಕಾರಂತ ರಚಿಸಿರುವ ಹಾಗೂ ರಾಘವೇಂದ್ರ ಉಡುಪಿ ನಿರ್ದೇಶಿಸಿರುವ ಮೈಸೂರು ಮಲ್ಲಿಗೆ ನಾಟಕವನ್ನು ಹವ್ಯಾಸಿ ಕಲಾವಿದರು ವೃತ್ತಿಪರ ಕಲಾವಿದರಂತೆ ಅಭಿನಯಿಸುವ ಮೂಲಕ ಪಾತ್ರಕ್ಕೆ ಜೀವ ತುಂಬಿದರು. ಹುಬ್ಬಳ್ಳಿ ಧಾರವಾಡ ಅವಳಿನಗರದ ಕಲಾ ಪ್ರೇಕ್ಷಕರ ಮೆಚ್ಚುಗೆ ಪಾತ್ರವಾಯಿತು.

ಇದಕ್ಕು ಮುನ್ನ ನಡೆದ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಡಾ.ಎಸ್‌.ಕೃಷ್ಣ ಪ್ರಸಾದ್‌ ಮಾತನಾಡಿ, ಕೇವಲ ಹತ್ತು ವರ್ಷಗಳಲ್ಲಿ ನಾವು ಗ್ರಾಮೀಣ ಜೀವನ ಮತ್ತು ನಮ್ಮ ಸಂಸ್ಕೃತಿ ಮರೆತು ಆಧುನಿಕ ಜೀವನಕ್ಕೆ ಮಾರ್ಪಟ್ಟಿದ್ದೇವೆ. ನಮ್ಮ ಮಕ್ಕಳು ಟಿವಿ, ಮೊಬೈಲ್‌ ದಾಸರಾಗಿ ದೂರದೃಷ್ಟಿ ದೋಷಕ್ಕೆ ಒಳಗಾಗಿರುವುದು ನಿಜಕ್ಕೂ ಆತಂಕದ ಸಂಗತಿ ಎಂದರು.

ನಾಟಕವು ಮನುಷ್ಯನಲ್ಲಿ ವಿಚಾರ ಮಾಡುವ ಶಕ್ತಿಯನ್ನು ಹೆಚ್ಚಿಸುವ ಮೂಲಕ ಮೆದುಳಿನ ಬೆಳವಣಿಗೆಗೆ ಸಹಾಯವಾಗುತ್ತದೆ. ಆದ್ದರಿಂದ ಹೆಚ್ಚೆಚ್ಚು ನಾಟಕಗಳ ಪ್ರದರ್ಶನ ನಡೆಸುವ ಮೂಲಕ ರಂಗಭೂಮಿಯ ಹಳೇ ವೈಭವವನ್ನು ಮತ್ತೆ ಮರುಕಳಿಸುವಂತೆ ಮಾಡಬೇಕಾದ ಅಗತ್ಯವಿದೆ ಎಂದರು.

ಕಲಾವಿದ ಅರವಿಂದ ಕುಲಕರ್ಣಿ ಮಾತನಾಡಿ, ಮೈಸೂರು ಮಲ್ಲಿಗೆ ಹಲವು ಕಡೆಗಳಲ್ಲಿ ಪ್ರದರ್ಶನಗೊಂಡು ಯಶಸ್ವಿಯಾಗಿದೆ. ಒತ್ತಡದ ಬದುಕಿನಲ್ಲಿಯೂ ನಾಟಕ ನೋಡಲು ಇಷ್ಟೊಂದು ಜನರು ಬಂದಿರುವುದನ್ನು ನೋಡಿದರೆ ಸಂತಸವಾಗುತ್ತದೆ. ಕಲಾಸೇವೆಯೂ ಒಂದು ಸಮಾಜಸೇವೆಯಾಗಿದೆ ಎಂದರು.

ಹಿರಿಯರಾದ ಶ್ರೀನಿವಾಸ ದೇಶಪಾಂಡೆ, ದೇಶಪಾಂಡೆ ಫೌಂಡೇಶನ್‌ ಸಿಇಒ ವಿವೇಕ ಪವಾರ, ಮೈಸೂರು ಮಲ್ಲಿಗೆ ನಿರ್ದೇಶಕ ರಾಘವೇಂದ್ರ ಉಡುಪಿ ಸೇರಿದಂತೆ ನೂರಾರು ಕಲಾ ಪ್ರೇಕ್ಷಕರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ