ಆ್ಯಪ್ನಗರ

ನಾನಾ ಸಾಂಸ್ಕೃತಿಕ ಕಾರ‍್ಯಕ್ರಮ

ಧಾರವಾಡ : ನಗರದ ಡಾ.ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿಧಾರವಾಡ ದಸರಾ ಜಂಬೂ ಸವಾರಿ ಉತ್ಸವ ಸಮಿತಿಯಿಂದ ನವರಾತ್ರಿ ಅಂಗವಾಗಿ ಸೆ. 29ರಿಂದ ಅ. 8ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸ್ಪರ್ಧೆಗಳು ನಡೆಯಲಿವೆ ಎಂದು ದಸರಾ ಜಂಬೂ ಸವಾರಿ ಉತ್ಸವ ಸಮಿತಿ ಅಧ್ಯಕ್ಷ ಗುರುರಾಜ ಹುಣಸಿಮರದ ಹೇಳಿದರು.

Vijaya Karnataka 29 Sep 2019, 5:00 am
ಧಾರವಾಡ : ನಗರದ ಡಾ.ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿಧಾರವಾಡ ದಸರಾ ಜಂಬೂ ಸವಾರಿ ಉತ್ಸವ ಸಮಿತಿಯಿಂದ ನವರಾತ್ರಿ ಅಂಗವಾಗಿ ಸೆ. 29ರಿಂದ ಅ. 8ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸ್ಪರ್ಧೆಗಳು ನಡೆಯಲಿವೆ ಎಂದು ದಸರಾ ಜಂಬೂ ಸವಾರಿ ಉತ್ಸವ ಸಮಿತಿ ಅಧ್ಯಕ್ಷ ಗುರುರಾಜ ಹುಣಸಿಮರದ ಹೇಳಿದರು.
Vijaya Karnataka Web native cultural program
ನಾನಾ ಸಾಂಸ್ಕೃತಿಕ ಕಾರ‍್ಯಕ್ರಮ


ಶನಿವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಕಸ್ತೂರಿ ಬಾ ಮಹಿಳಾ ಮಂಡಳ, ಶ್ರೀ ಸಾಯಿ ಲಲಿತ ಭಜನಾ ಮಂಡಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿನಡೆಯುವ ಕಾರ್ಯಕ್ರಮದಲ್ಲಿಗಾಂಧಿನಗರದ ಶ್ರೀ ಈಶ್ವರ ದೇವಸ್ಥಾನದಲ್ಲಿದುರ್ಗಾದೇವಿಯ ಮೂರ್ತಿ ಪ್ರತಿಷ್ಠಾಪನೆ ಸೇರಿದಂತೆ ದೇವಿ ಮಹಾತ್ಮೆ, ಪುರಾಣ, ವೆಂಕಟೇಶ್ವರ ಪುರಾಣವು ಗರಗದ ಶ್ರೀ ಮಡಿವಾಳೇಶ್ವರ ಮಠದ ಶ್ರೀ ವಿರೇಶ್ವರ ಸ್ವಾಮೀಜಿ ಅವರಿಂದ ನಡೆಯಲಿದೆ.

ಸೆ. 29ರಂದು ಸಂಜೆ 4ಕ್ಕೆ ವಿದ್ಯಾಗಿರಿ ಗಣೇಶ ದೇವಸ್ಥಾನದಿಂದ ದುರ್ಗಾದೇವಿಯ ಮೆರವಣಿಗೆ, ಸಂಜೆ 6.30ಕ್ಕೆ ದುರ್ಗಾದೇವಿಯ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುವುದು. ಸೆ.30ರಂದು ಪ್ರತಿದಿನ ಬೆಳಗ್ಗೆ 8ಕ್ಕೆ ದೇವಿ ಪೂಜಾ ಕಾರ್ಯಕ್ರಮ, ಸಂಜೆ 4ಕ್ಕೆ ಮಹಿಳಾ ಮಂಡಳ ಮತ್ತು ಭಜನಾ ಮಂಡಳದ ವತಿಯಿಂದ ಭಜನೆ, ಅ.1ರಂದು ಸಂಜೆ 4ಕ್ಕೆ ಸಾಯಿ ಲಲಿತ ಭಜನಾ ಮಂಡಳಿಯಿಂದ ಭಜನೆ ನಂತರ ಪ್ರಸಾದ ವಿತರಣೆ, ಅ.2ರಂದು 3.30ಕ್ಕೆ ಕುಮಾರಿಕಾ ಪೂಜೆ, 101ಕುಮಾರಿಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಭಜನಾ ಕಾರ್ಯಕ್ರಮ ಜರುಗಲಿವೆ ಎಂದರು.

ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿಅ.3ರಂದು ಮಧ್ಯಾಹ್ನ 3ರಿಂದ ಎಲ್‌ಕೆಜಿ ಮತ್ತು ಯುಕೆಜಿ ಶಾಲೆಗಳ ಮಕ್ಕಳಿಗೆ ನೃತ್ಯ ಸ್ಪರ್ಧೆ,ಮಹಿಳೆಯರಿಗಾಗಿ ದೇವಿ ಕುರಿತು ನೃತ್ಯ ಸ್ಪರ್ಧೆ ಎಂದರು.

ಅ. 4ರಂದು ಮಧ್ಯಾಹ್ನ 3ರಿಂದ ಮಹಿಳೆಯರಿಗೆ ಅಡುಗೆ ಸ್ಪರ್ಧೆ, ಸಮೂಹಗಾಯನ ಸ್ಪರ್ಧೆಗಳು, ಪ್ಯಾಶನ್‌ ಶೋ, ಅಭಿವ್ಯಕ್ತ ಕಲಾತಂಡ ಮತ್ತು ಸೀತಾ ಚಪ್ಪರ ತಂಡದಿಂದ ಕಲಾಉತ್ಸವ ಹಾಗೂ ಸಂಜೆ 4ಕ್ಕೆ ಭಕ್ತಿ ಗೀತೆಗಳು ನಡೆಯಲಿವೆ. ಅ.5ರಂದು ಮಧ್ಯಾಹ್ನ 3ರಿಂದ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ವಿವಿಧ ಆಟಗಳು, ಭಜನಾ ಸ್ಪರ್ಧೆ, ಕಿರುನಾಟಕ ಸ್ಪರ್ಧೆ ನಡೆಯಲಿವೆ. ಅ.6ರಂದು 14 ವರ್ಷದೊಳಗಿನ ಮಕ್ಕಳಿಗಾಗಿ ಚಿತ್ರಕಲೆ ಸ್ಪರ್ಧೆ, ಗ್ರುಪ್‌ ಡ್ಯಾನ್ಸ್‌, ಕರೋಕೆ ಸ್ಪರ್ಧೆ ಹಾಗೂ ಭಕ್ತಿ ಮತ್ತು ಭಾವಗೀತೆ ನಡೆಯಲಿವೆ. ಅ.8ರಂದು ದುರ್ಗಾ ದೇವಿ ಪುರಾಣ, ರಾತ್ರಿ 7.45ಕ್ಕೆ ಬನ್ನಿ ಮುಡಿಯುವ ಕಾರ್ಯಕ್ರಮ, ರಾತ್ರಿ 8ಕ್ಕೆ ದಾಂಡಿಯಾ ನೃತ್ಯ, ರಾತ್ರಿ 9.30ಕ್ಕೆ ದೇವಿ ಮೂರ್ತಿ ವಿಸರ್ಜನೆ ಕಾರ್ಯಕ್ರಮ ನಡೆಯಲಿದೆ ಎಂದರು.

ಕಾರ್ಯಾಧ್ಯಕ್ಷ ಪಿ.ಎಚ್‌.ಕಿರೇಸೂರ, ಕೇಶವ ತಿಬೇಲಿ, ಸುಭಾಸ ಮೋರೆ. ಕರೆಪ್ಪ ಹಿತ್ತಲಮನಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ