ಆ್ಯಪ್ನಗರ

ನವಲಗುಂದ ರೈತ ಹೋರಾಟಗಾರರಿಗೆ ಜಾಮೀನು

ನವಲಗುಂದದ 187 ಮಂದಿ ರೈತ ಹೋರಾಟಗಾರರಿಗೆ ನ್ಯಾಯಾಲಯ ಷರತ್ತುಬದ್ದ ಜಾಮೀನು ಮಂಜೂರು ಮಾಡಿದೆ.

ವಿಕ ಸುದ್ದಿಲೋಕ 12 Aug 2016, 1:37 pm
ಧಾರವಾಡ: ಮಹದಾಯಿ ನೀರಿಗಾಗಿ ಪ್ರತಿಭಟನೆ ನಡೆಸಿ ಬಂಧಿತರಾಗಿದ್ದ ನವಲಗುಂದದ 187 ಮಂದಿ ರೈತ ಹೋರಾಟಗಾರರಿಗೆ ಧಾರವಾಡದ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶ ಶ್ರೀಶಾನಂದ ಷರತ್ತುಬದ್ದ ಜಾಮೀನು ಮಂಜೂರು ಮಾಡಿದ್ದಾರೆ.
Vijaya Karnataka Web navalgund farmers get bail
ನವಲಗುಂದ ರೈತ ಹೋರಾಟಗಾರರಿಗೆ ಜಾಮೀನು

ಧಾರವಾಡದ ಹೈಕೋರ್ಟ್ ವಕೀಲರ ಸಂಘದಿಂದ ಜಾಮೀನು ಅರ್ಜಿ ಸಲ್ಲಿಕೆಯಾಗಿತ್ತು. ಸಂಘದ ಅಧ್ಯಕ್ಷ ವಿ.ಡಿ. ಕಾಮರಡ್ಡಿ , ಬಿ.ಡಿ. ಹಿರೇಮಠ. ಎ ಎಸ್.ಶಿಂಧೆ, ಎ.ಎಸ್. ಹೊಳೆಯಣ್ಣವರ ,ಕೆ.ಎಚ್.ಪಾಟೀಲ ಮತ್ತು ಇತರ ವಕೀಲರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.
ಪ್ರತಿ ರೈತ 50 ಸಾವಿರ ರೂ.ಗಳ ಬಾಂಡ್ ನೀಡಬೇಕು, ಒಬ್ಬ ವ್ಯಕ್ತಿಯ ಜಾಮೀನು, ಪ್ರತಿ ಸೋಮವಾರ ನವಲಗುಂದ ಠಾಣೆಗೆ ಹಾಜರಾಗುವಿಕೆ, ಧಾರವಾಡದಿಂದ ಹೊರಹೋಗುವಾಗ ನವಲಗುಂದ ಕೋರ್ಟ್ ಅನುಮತಿ ಪಡೆಯುವುದು, ಶಾಂತಿ ಕಾಪಾಡಬೇಕು ಎಂಬ ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ.

ಪ್ರತಿಭಟನಾ ನಿರತ ರೈತರ ಮೇಲೆ ಹಲ್ಲೆ ಮತ್ತು ಬಂಧನ ಖಂಡಿಸಿ ಪ್ರತಿಪಕ್ಷಗಳು ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಬಂಧಿತರನ್ನು ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದ್ದವು.

ಜಾಮೀನು ಸಿಕ್ಕಿರುವುದಕ್ಕೆ ಸಂತಸವಾಗಿದೆ

ಮಹಾದಾಯಿ ನದಿ ನೀರು ಹಂಚಿಕೆ ಕುರಿತು ಇತ್ತೀಚೆಗೆ ನಡೆದ ಹೋರಾಟದ ಸಂದರ್ಭದಲ್ಲಿ ಬಂಧಿತರಾಗಿದ್ದ ರೈತರಿಗೆ ಜಾಮೀನು ಸಿಕ್ಕಿರುವುದಕ್ಕೆ ಗಣಿ,ಭೂ ವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಸಂತಸ ವ್ಯಕ್ತಪಡಿಸಿದರು.

ಯಮನೂರಿಗೆ ಭೇಟಿ ನೀಡಿದ ಸಚಿವರು, ಬಂಧಿತರಾಗಿರುವ ರೈತರ ವಿರುದ್ಧ ಆಕ್ಷೇಪಣೆ ಸಲ್ಲಿಸದಿರಲು ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರಕಾರ ತೀರ್ಮಾನ ಕೈಗೊಂಡಿತ್ತು. ಮುಖ್ಯಮಂತ್ರಿ ಸಿದ್ಧರಾಮಯ್ಯ ರೈತಪರ ನಿಲುವು ಹೊಂದಿರುವುದರಿಂದ ಇದು ಸಾಧ್ಯವಾಗಿದೆ. ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಕೆಯಾದ ನಂತರ ರೈತರ ಮೇಲಿನ ಎಲ್ಲ ಮೊಕದ್ದಮೆಗಳನ್ನು ಹಿಂಪಡೆಯಲಾಗುವುದು. ಘಟನೆಯಲ್ಲಿ ಆಸ್ತಿ ಪಾಸ್ತಿ ಹಾನಿಯಾಗಿರುವ ಬಗ್ಗೆ ಕಂದಾಯ ಇಲಾಖೆಯಿಂದ ಮಾಹಿತಿ ಪಡೆದು.ಪರಿಹಾರ ಒದಗಿಸಲಾಗುವುದು. ರೈತರನ್ನು ಕರೆತರಲು ಬಳ್ಳಾರಿಯಿಂದ ಎರಡು ಹಾಗೂ ಚಿತ್ರದುರ್ಗದಿಂದ ಒಂದು ಸಾರಿಗೆ ಬಸ್ ನೀಡಲಾಗುವುದು ಎಂದು ಸಚಿವ ವಿನಯ ಕುಲಕರ್ಣಿ ಹೇಳಿದರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ